Poisonous Snake Video: ಬ್ರಹ್ಮಾಂಡವು ತನ್ನ ಒಡಲಿನಲ್ಲಿ ಹಲವು ಅದ್ಭುತಗಳನ್ನು ಹೊಂದಿದೆ. ಪ್ರಕೃತಿಗೆ ಸಂಬಂಧಿಸಿದ ಅನೇಕ ರಹಸ್ಯಗಳು ಇಂದಿಗೂ ಮಾನವನಿಗೆ ತಿಳಿದಿಲ್ಲ. ಪ್ರಕೃತಿಯು ವಿಸ್ಮಯಗಳ ಆಗರ ಎಂಬ ಮಾತಿದೆ. ಜಿಂಕೆ ಹಾವನ್ನು ತಿನ್ನುವ ಈ ವೈರಲ್ ವಿಡಿಯೋ ಅದಕ್ಕೆ ಜೀವಂತ ಉದಾಹರಣೆಯಾಗಿದೆ. ಸಸ್ಯಾಹಾರಿ ಪ್ರಾಣಿಯೊಂದು ಹಾವನ್ನು ಜಗಿದು ತಿನ್ನುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನು ನೋಡಿ ನೆಟ್ಟಿಗರು ದಂಗಾಗಿದ್ದಾರೆ.
ಇದನ್ನೂ ಓದಿ: Watch Video: ಹನಿಮೂನ್ ವಿಡಿಯೋ ಶೇರ್ ಮಾಡಿದ ನವಜೋಡಿ: ಸ್ವಿಮ್ಮಿಂಗ್ ಪೂಲ್’ನಲ್ಲಿ ನಡೆಯಿತು…!
ಜಿಂಕೆಗಳು ಹಾವನ್ನು ತಿನ್ನುವುದನ್ನು ಕಂಡು ಜನರು ಅಚ್ಚರಿ ಪಟ್ಟಿದ್ದಾರೆ. ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ಕಾಡು ಪ್ರಾಣಿಗಳ ಅನೇಕ ವಿಡಿಯೋಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಾರೆ. ಈ ವಿಡಿಯೋವನ್ನು ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. "ಕ್ಯಾಮೆರಾಗಳು ನಮಗೆ ಪ್ರಕೃತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತವೆ. ಸಸ್ಯಹಾರಿ ಪ್ರಾಣಿ ಕೆಲವೊಮ್ಮೆ ಹಾವುಗಳನ್ನು ತಿನ್ನುತ್ತವೆ" ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಈ ವಿಡಿಯೋದಲ್ಲಿ, ಜಿಂಕೆ ಹಾವನ್ನು ಜಗಿಯುವುದನ್ನು ನಾವು ನೋಡಬಹುದು. ವಿಡಿಯೋವನ್ನು ಹಂಚಿಕೊಂಡಾಗಿನಿಂದ 50,000 ಕ್ಕೂ ಹೆಚ್ಚು ವೀವ್ಸ್ ಪಡೆದಿದೆ.
Cameras are helping us understand Nature better.
Yes. Herbivorous animals do eat snakes at times. pic.twitter.com/DdHNenDKU0— Susanta Nanda (@susantananda3) June 11, 2023
ಪ್ರಕೃತಿಯನ್ನು ಅರ್ಥಮಾಡಿಕೊಳ್ಳಲು ನಾವು ಹೆಚ್ಚು ಆಳಕ್ಕೆ ಹೋದಷ್ಟೂ ಅದು ಹೆಚ್ಚು ನಿಗೂಢವಾಗುತ್ತ ಹೋಗುತ್ತದೆ. "ಸಸ್ಯಾಹಾರಿಗಳು ಮಾಂಸವನ್ನು ತಿನ್ನಬಹುದು. ಮಾಂಸಾಹಾರಿಗಳು ಹುಲ್ಲು ತಿನ್ನಲು ಸಾಧ್ಯವಿಲ್ಲ. ಇದು ಕರುಳಿನ ರಸಾಯನಶಾಸ್ತ್ರವನ್ನು ಆಧರಿಸಿದೆ" ಎಂದು ಒಬ್ಬ ನೆಟ್ಟಿಗರು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು "ಇದು ಚೀನೀ ಜಿಂಕೆ ಎಂದು ನಾನು ಭಾವಿಸುತ್ತೇನೆ. ಅಲ್ಲಿರುವ ಜನರು ತಮಗೆ ಬೇಕಾದುದನ್ನು ತಿನ್ನುತ್ತಾರೆ" ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಹೀಗೆ ನೆಟ್ಟಿಗರು ಈ ವಿಡಿಯೋಗೆ ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.
ಇದನ್ನೂ ಓದಿ: ಘೇಂಡಾಮೃಗ ಜೊತೆ ಯುದ್ಧಕ್ಕೀಳಿದ ಒಂಟಿ ಸಲಗ..! ಕೊನೆಯವರೆಗೆ ತಪ್ಪದೇ ನೋಡಿ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.