Furry Green Snake Video :  ಹಸಿರು ಬಣ್ಣದ ಪಾಚಿಯಂತೆ ಕಾಣುವ ಈ ಹಾವಿನ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ನಿಗೂಢವಾದ ಹಾವಿನ ದೃಶ್ಯಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಬಹುತೇಕ ಎಲ್ಲರೂ ದಿಗ್ಭ್ರಮೆಗೊಂಡಿದ್ದಾರೆ. ಥಾಯ್ಲೆಂಡ್‌ನ ಜೌಗು ಪ್ರದೇಶದ ಬಳಿ ಈ ಜೀವಿ ಪತ್ತೆಯಾಗಿದೆ. ಹಸಿರು ಪಾಚಿಯಂತೆ ಕಾಣುವ ಹಾವಿನ ಸಣ್ಣ ಕ್ಲಿಪ್ ಕೆಲವೇ ಸಮಯದಲ್ಲಿ ಇಂಟರ್ನೆಟ್ ವೈರಲ್‌ ಆಯ್ತು. ಯೂಟ್ಯೂಬ್‌ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಎರಡು ಅಡಿ ಉದ್ದದ ಜೀವಿಯು ಅಂಕುಡೊಂಕಾದ ರೀತಿಯಲ್ಲಿ ಚಲಿಸುತ್ತಿರುವುದನ್ನು ಕಾಣಬಹುದು. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : ಧ್ರುವ ಸರ್ಜಾ ಮಗಳ ಹೆಸರೇನು ಗೊತ್ತಾ? 


ವರದಿಯ ಪ್ರಕಾರ, ಥಾಯ್ಲೆಂಡ್‌ನ ಸಖೋನ್ ನಖೋನ್‌ ಪ್ರದೇಶದ ಮನೆಯೊಂದರಲ್ಲಿ ಈ ವಿಚಿತ್ರ ಹಾವು ಕಾಣಿಸಿಕೊಂಡಿದೆ. 49 ವರ್ಷದ ವ್ಯಕ್ತಿ ಮೊದಲು ಹಾವನ್ನು ಗುರುತಿಸಿದ್ದಾರೆ. ತನ್ನ ಮನೆಯಲ್ಲಿ ಜೀವಿಯನ್ನು ಇಟ್ಟುಕೊಂಡಿದ್ದಾರೆ. ಅಧಿಕಾರಿಗಳು ಅದರ ಗುರುತಿಗಾಗಿ ಪರಿಶೀಲಿಸುತ್ತಿದ್ದಾರೆ. ವ್ಯಕ್ತಿಯ ಮನೆಯಿಂದ ಕೊಂಚ ದೂರದಲ್ಲಿರುವ ಕೆರೆಯಲ್ಲಿ ಈ ಹಾವು ಸಿಕ್ಕಿದೆ ಎನ್ನಲಾಗಿದೆ.  



ವರದಿಗಳ ಪ್ರಕಾರ, ಜೀವಿ ತನ್ನ ದೇಹದಾದ್ಯಂತ ಪಾಚಿಯನ್ನು ಬೆಳೆಸಿಕೊಂಡಿದೆ. ಕೆಲವರು ಇದು ಸರೀಸೃಪವು ಪಫ್ ಮುಖದ ನೀರಿನ ಹಾವು ಆಗಿರಬಹುದು ಎಂದು ಊಹಿಸುತ್ತಿದ್ದಾರೆ.


ತಜ್ಞರ ಅಭಿಪ್ರಾಯವೇನು?


NSW ಸೆಂಟ್ರಲ್ ಕೋಸ್ಟ್‌ನಲ್ಲಿರುವ ವನ್ಯಜೀವಿ ARC ಯ ತಜ್ಞರ ಪ್ರಕಾರ, ಹಾವುಗಳ ಮೇಲಿನ ತುಪ್ಪಳದಂತಹ ವಸ್ತುವು ಕೆರಾಟಿನ್ ನಿಂದ ಮಾಡಲ್ಪಟ್ಟಿದೆ, ಇದು ಚರ್ಮದ ಮೇಲಿನ ಪದರವಾಗಿದೆ. ಇದನ್ನು ಪಫ್ ಫೇಸ್ಡ್ ವಾಟರ್ ಸ್ನೇಕ್ ಅಥವಾ ಮಾಸ್ಕ್ಡ್ ವಾಟರ್ ಸ್ನೇಕ್ ಎಂದೂ ಕರೆಯುತ್ತಾರೆ, ಇದು ಹೆಚ್ಚಾಗಿ ಬಿಸಿಯಾದ ಸ್ಥಳಗಳಲ್ಲಿ ಕಂಡುಬರುತ್ತದೆ.


ಅವು ಸಾಮಾನ್ಯವಾಗಿ ಉತ್ತರ ಸುಮಾತ್ರಾದಿಂದ ಸಲಂಗಾ ದ್ವೀಪ, ಇಂಡೋನೇಷಿಯಾ ಮತ್ತು ಬೊರ್ನಿಯೊವರೆಗೆ ಕಂಡುಬರುತ್ತವೆ. ಅವುಗಳನ್ನು ಮಲೇಷಿಯಾದ ದ್ವೀಪಗಳು ಮತ್ತು ತೀವ್ರ ದಕ್ಷಿಣ ಥೈಲ್ಯಾಂಡ್‌ನಲ್ಲಿಯೂ ಕಾಣಬಹುದು. ನೀರು ಮತ್ತು ಕಲ್ಲಿನ ಬಿರುಕುಗಳಲ್ಲಿ ಅಡಗಿಕೊಂಡು ಸುಲಭವಾಗಿ ಬೇಟೆಯಾಡುತ್ತವೆ.


ಇದನ್ನೂ ಓದಿ : Viral Video: 3 ಗಂಟೆಗಳ ಕಾಲ ನಾಗರ ಹಾವುಗಳ ಮಿಲನ.. ಇಮ್ರಾನ್ ಹಶ್ಮಿಗಿಂತಲೂ ರೊಮ್ಯಾಂಟಿಕ್ ವಿಡಿಯೋ! 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.