Viral Video: ಕುಡಿದು ಮತ್ತಿನಲ್ಲಿದ್ದ ವ್ಯಕ್ತಿಯ ಮೇಲೇರಿದ ದೈತ್ಯ ಹೆಬ್ಬಾವು, ಮುಂದೆ...
Viral Video: ಕುಡಿದ ಅಮಲಿನಲ್ಲಿದ್ದ ವ್ಯಕ್ತಿಯ ಮೇಲೆ ದೈತ್ಯ ಹೆಬ್ಬಾವೊಂದು ಹತ್ತಿರುವ ಘಟನೆ ಆಂಧ್ರ ಪ್ರದೇಶದ ಕರ್ನೂಲ್‌ನಲ್ಲಿ ನಡೆದಿದೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ.
Python Viral Video: ಮದ್ಯ ಸೇವಿಸಿ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಪೊದೆ ಪಕ್ಕ ಹೋಗಿ ಕುಳಿತಿದ್ದು ಆತನ ಮೇಲೆ ದೈತ್ಯ ಹೆಬ್ಬಾವು ಹತ್ತಿರುವ ಘಟನೆ ಆಂಧ್ರ ಪ್ರದೇಶದ ಕರ್ನೂಲ್‌ನಲ್ಲಿ ನಡೆದಿದೆ. ಈ ಭಯಾನಕ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಲಭ್ಯವಿರುವ ಮಾಹಿತಿಗಳ ಪ್ರಕಾರ, ಕರ್ನಾಟಕದ ಲಾರಿ ಚಾಲಕನೊಬ್ಬ ಪಾನಮತ್ತನಾಗಿ ಪೊದೆಯ ಪಕ್ಕದಲ್ಲಿ ಕುಳಿತಿದ್ದ ವೇಳೆ ಬೃಹದಾಕಾರದ ಹೆಬ್ಬಾವು ಆತನ ಮೇಲೇರಿದೆ. ಹಾವು ಮೇಲೇರಿ ಆತನ ಕುತ್ತಿಗೆಗೆ ಸುತ್ತಿಕೊಳ್ಳುತ್ತಿದ್ದರೂ ಏನೂ ಆಗೇ ಇಲ್ಲವೇನೋ ಎಂಬಂತೆ ವ್ಯಕ್ತಿ ಕುಳಿತಿರುವ ದೃಶ್ಯದ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ- ನಡು ರಸ್ತೆಯಲ್ಲೇ ನಾಗ-ನಾಗಿಣಿ ರೊಮಾನ್ಸ್: ವಿಡಿಯೋ ವೈರಲ್
ಹಾವಿನ ವೈರಲ್ ವಿಡಿಯೋದಲ್ಲಿ, ಕತ್ತಲೆಯಲ್ಲಿ ವ್ಯಕ್ತಿಯೊಬ್ಬ ಪಾನಮತ್ತನಾಗಿ ಕುಳಿತಿದ್ದು, ಹೆಬ್ಬಾವು ಆತನ ಮೇಲೆ ಹತ್ತಿ ಕುಳಿತಿದೆ. ಆ ವ್ಯಕ್ತಿ ತನಗೆ ಅರಿವೇ ಇಲ್ಲದಂತೆ ಬಳಭುಜದಿಂದ ಬಲಗೈ ಮೇಲೆ ಬಂದು ಕುಳಿತಿರುವ ಹೆಬ್ಬಾವನ್ನು ತಬ್ಬಿ ತೂರಾಡುತ್ತಾ ಕುಳಿತಿರುವುದನ್ನು ಕಾಣಬಹುದು.
ಕುಡುಕನ ಮೇಲೇರಿ ಕುಳಿತ ಹೆಬ್ಬಾವಿನ ದೃಶ್ಯವನ್ನು ಇಲ್ಲಿ ವೀಕ್ಷಿಸಿ...
ತನ್ನನು ಕಚ್ಚಲು ಬಂದ ನಾಗರಹಾವಿನ ಹೆಡೆಯನ್ನೇ ಹಿಡಿದು ಕಚ್ಚಿದ ಭೂಪ...
ಇದಕ್ಕೆ ನೀವೇನಾದ್ರೂ ಹೆಸರಿಡ್ತೀರಾ... ವಿಡಿಯೋ ನೋಡಿ ಹೇಳಿ...
ಈ ಸಂದರ್ಭದಲ್ಲಿ ಸ್ಥಳೀಯರು ಸಮಯ ಪ್ರಜ್ಞೆಯಿಂದ ವ್ಯಕ್ತಿಗೂ ಹಾನಿಯಾಗದಂತೆ, ಹೆಬ್ಬಾವಿಗೂ ನೋವಾಗದಂತೆ ಹಾವಿನಿಂದ ಆತನನ್ನು ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.