Gay Marriage In Kolkata: ಭಾರತದಲ್ಲಿ ಅದ್ದೂರಿ ಮದುವೆಯ ಪರಿಕಲ್ಪನೆಯೇ ಹೆಚ್ಚು. ಮದುವೇ ಹೇಗಿರಬೇಕು ಎಂದು ಯಾರನ್ನೇ ಕೇಳಿದರೂ  ಸಿಗುವ ಉತ್ತರ ಅದ್ದೂರಿಯಾಗಿರಬೇಕು ಎನ್ನುವುದಾಗಿರುತ್ತದೆ. ಮದುವೆ ಎಂದ ಕೂಡಲೇ  ಕಣ್ಣೆದುರಿಗೆ ಬರುವುದು ಅತಿ ಸುಂದರವಾಗಿ ಸಿಂಗಾರಗೊಂಡ ವೇದಿಕೆ ಮತ್ತು ಆ ವೇದಿಕೆ ಮೇಲೆ ವಧು ವರ. ಇಲ್ಲಿ ನಾವು ಹೇಳಲು ಹೊರಟಿರುವ ಮದುವೆಯಲ್ಲಿಯೂ ವಧು-ವರ ಇದ್ದಾರೆ. ಆದರೆ ಸ್ವಲ್ಪ ಭಿನ್ನವಾಗಿ. ಯಾಕೆಂದರೆ ಇಲ್ಲಿ ನಾವು ಹೇಳುತ್ತಿರುವುದು ಸಲಿಂಗಿಗಳ ವಿವಾಹದ ಬಗ್ಗೆ. ಸಲಿಂಗಿಗಳ ವಿವಾಹವಾದರೂ ಅಲ್ಲಿ ಅದ್ದೂರಿಗೆ ಯಾವ ಕೊರತೆಯೂ ಇರಲಿಲ್ಲ. 


COMMERCIAL BREAK
SCROLL TO CONTINUE READING

 ಸಲಿಂಗಿಗಳ ವಿವಾಹವನ್ನು ಊಹಿಸುವುದು ಕೂಡಾ ನಮ್ಮ ದೇಶದಲ್ಲಿ ತುಸು ಕಷ್ಟ. ಅದರಲ್ಲೂ ಅದ್ದೂರಿ ಮದುವೆಯ ಪರಿಕಲ್ಪನೆ ಸಾಧ್ಯವೇ ಇಲ್ಲ.  ಯಾಕೆಂದರೆ ನಮ್ಮ ನೆಲದಲ್ಲಿ ಇಂಥಹ ಮದುವೆ ಕಾನೂನುಬದ್ಧವಲ್ಲ. ಆದರೂ, ಪರಸ್ಪರ ಪ್ರೀತಿಯಲ್ಲಿ ಬಿದ್ದ ಇಬ್ಬರು ಸಲಿಂಗಿಗಳು ಯಾವ ಅಡೆತಡೆ ಗಳನ್ನೂ ಲೆಕ್ಕಿಸದೇ  ವಿವಾಹ ಬಂಧ ದಲ್ಲಿ ಒಂದಾಗಿದ್ದಾರೆ.  
 
 ಇದನ್ನೂ ಓದಿ : Himachal Pradesh Cloud Burst: ಕುಲುವಿನಲ್ಲಿ ವಿನಾಶ ಉಂಟು ಮಾಡಿದ ಮೇಘಸ್ಫೋಟ


ಕೋಲ್ಕತ್ತಾದಲ್ಲಿ ಅದ್ದೂರಿಯಾಗಿ ನಡೆದಿದೆ ಸಲಿಂಗಿ ಜೋಡಿಯ ವಿವಾಹ :
ಫ್ಯಾಶನ್ ಡಿಸೈನರ್ ಅಭಿಷೇಕ್ ರೇ ಎನ್ನುವವರು ತಮ್ಮ ಸಂಗಾತಿ ಚೈತನ್ಯ ಶರ್ಮಾ ಅವರನ್ನು ಕೋಲ್ಕತ್ತಾದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ವಿವಾಹವಾದರು.   ವರದಿಯ ಪ್ರಕಾರ  ಹಿಂದೂ ಸಂಪ್ರದಾಯದಂತೆ ಈ ವಿವಾಹವನ್ನು ನೆರೆವೇರಿಸಲಾಗಿದೆ.  ಅಗ್ನಿಯನ್ನು ಸಾಕ್ಷಿಯಾಗಿಟ್ಟುಕೊಂಡು ಇವರಿಬ್ಬರೂ ಒಂದಾಗಿದ್ದಾರೆ.  


 


ಮದುವೆ ಮನೆ ಮಂದಿ ಮತ್ತು ಸ್ನೇಹಿತರ ಮನದಲ್ಲಿ ಸದಾ ಅಚ್ಚಳಿಯದೆ ಉಳಿಯುವಂತಾಗಬೇಕು ಎಂದು ತಮ್ಮ ಸಂಗಾತಿಗೂ ತಿಳಿಸಿದ್ದರು ಅಭಿಷೇಕ್.  


 ಇದನ್ನೂ ಓದಿ : ಈ ರಾಜ್ಯಗಳಲ್ಲಿ ಭಾರೀ ಮಳೆ ಸಾಧ್ಯತೆ: ಮಾನ್ಸೂನ್‌ ಎಚ್ಚರಿಕೆ ನೀಡಿದ ಐಎಂಡಿ
 


ಅಭಿಷೇಕ್ ಮತ್ತು ಚೈತನ್ಯ ಬೇರೆ ಬೇರೆ ಸಮುದಾಯಕ್ಕೆ ಸೇರಿದವರು. ಒಬ್ಬರು ಬಂಗಾಳಿಯಾದರೆ ಇನ್ನೊಬ್ಬರು ಮಾರ್ವಾಡಿ. ಭಾರತದಲ್ಲಿ ಸಲಿಂಗ ವಿವಾಹವನ್ನು ಕಾನೂನುಬದ್ಧ ಅಲ್ಲ ಎನ್ನುವುದು ಇವರಿಬ್ಬರಿಗೂ ಸ್ಪಷ್ಟವಾಗಿ ಗೊತ್ತಿದೆ. ಆದರೆ ಇಲ್ಲಿ ಇದು ಅಪರಾಧ ಕೂಡಾ ಅಲ್ಲ ಎನ್ನುವುದು ಕೂಡಾ ಅಷ್ಟೇ ಸತ್ಯ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.