Lovers Video Viral : ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿನಿತ್ಬ ಬಹಳಷ್ಟು ವಿಡಿಯೋಗಳನ್ನು ಶೇರ್ ಮಾಡಲಾಗುತ್ತದೆ. ಅವುಗಳ ಪೈಕಿ ಕೆಲವೊಂದು ವಿಡಿಯೋಗಳನ್ನು ಎಷ್ಟು ನೋಡಿದರೂ ಸಾಕಾಗುವುದಿಲ್ಲ. ಇನ್ನು ಕೆಲವು ವಿಡಿಯೋಗಳನ್ನು ನೋಡಿದರೆ ಹೀಗೂ ಆಗುತ್ತಾ ಎಂದು ಆಶ್ಚರ್ಯ ಪಡುವಂತಾಗುತ್ತದೆ.  ಅಂಥದ್ದೇ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಇದು ಪ್ರೇಮಿಗಳಿಗೆ ಸಂಬಂಧಿಸಿದ ವಿಡಿಯೋ. 


COMMERCIAL BREAK
SCROLL TO CONTINUE READING

ಅದೇನೋ ಮೊದಲ ನೋಟದಲ್ಲೇ ಪ್ರೀತಿ ಅನ್ನುತ್ತಾರಲ್ಲ ಅಂಥದ್ದೇ ಪ್ರಕ್ರರಣ ಇದು ಅನ್ನಿಸುತ್ತದೆ. ಚಲಿಸುವ ರೈಲಿನಲ್ಲಿ ಅದೇನು ಕಣ್ಸನ್ನೆಯೋ ಅದೇನು ಆಕರ್ಷಣೆಯೋ? ಒಟ್ಟಿನಲ್ಲಿ ಕದ್ದು ಮುಚ್ಚಿ ಪ್ರೇಮ ಪತ್ರ ಕೂಡಾ ವಿನಿಮಯವಾಗುತ್ತದೆ.  


ಇದನ್ನೂ ಓದಿ : ಆತ್ಮಹತ್ಯೆಗೂ ಮುನ್ನ ಸಿಖ್ ಮಹಿಳೆ ವಿಡಿಯೋ, ಪತಿಯ ಕ್ರೌರ್ಯ ಕೇಳಿದ್ರೆ ಬೆಚ್ಚಿಬೀಳ್ತೀರಾ!


ರೈಲಿನಲ್ಲಿ ಒಂದು ಬದಿಯಲ್ಲಿ ಹುಡುಗ ಕುಳಿತಿದ್ದರೆ , ಇನ್ನೊಂದು ಸೀಟಿನಲ್ಲಿ ಹುಡುಗಿ ಕುಳಿತಿರುವುದು ಕಾಣಿಸುತ್ತದೆ. ಇಬ್ಬರ ನಡುವೆ ನಗು, ಸನ್ನೆಗಳು ಕೂಡಾ ವಿನಿಮಯವಾಗುತ್ತಿರುವುದನ್ನು ಕಾಣಬಹುದು. ಹುಡುಗ ಪದೇ ಪದೇ ಹುಡುಗಿಯನ್ನು ನೋಡಿ ನಗುತ್ತಿರುತ್ತಾನೆ. ಹುಡುಗಿ ಎಲ್ಲದೆದುರು ಸ್ವಲ್ಪ ಸಂಕೋಚದಿಂದ ಇರುವಂತೆ ಕಾಣುತ್ತದೆಯಾದರೂ ಸಮಯ ಸಿಕ್ಕ ತಕ್ಷಣ ಪ್ರೇಮ ಪತ್ರ ಕೊಟ್ಟೇ ಬಿಡುತ್ತಾಳೆ. 


ಇಲ್ಲಿದೆ ವಿಡಿಯೋ : 


 

 

 

 



 

 

 

 

 

 

 

 

 

 

 

A post shared by SAKHT LOGG 🔥 (@sakhtlogg)


ಇದನ್ನೂ ಓದಿ : Viral Video: ತರಗತಿಯಲ್ಲಿಯೇ ಜುಟ್ಟು ಹಿಡಿದು ಜಗಳವಾಡಿದ ವಿದ್ಯಾರ್ಥಿನಿಯರು


ಈ ವಿಡಿಯೋವನ್ನು  saktlogg ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿದೆ. ಈ ವಿಡಿಯೋವನ್ನು ಅನೇಕರು ವೀಕ್ಷಿಸಿದ್ದಾರೆ. ಕೆಲವರು ಈ ವಿಡಿಯೋ ನೋಡಿ ಸಂತೋಷ ವ್ಯಕ್ತಪಡಿಸಿದರೆ, ಇನ್ನು ಕೆಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಇದೊಂದು ಸಂಪೂರ್ಣ ಸ್ಕ್ರಿಪ್ಟ್ ಮಾಡಿ ತೆಗೆದಿರುವ ವಿಡಿಯೋ ಎಂದು ಕೂಡಾ ಹೇಳುತ್ತಾರೆ. ಒಟ್ಟಿನಲ್ಲಿ ಈ ವಿಡಿಯೋವನ್ನು ಮಾತ್ರ ಭಾರೀ ಪ್ರಮಾಣದಲ್ಲಿ ವೀಕ್ಷಿಸಲಾಗಿದೆ.  


 Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...