ಈಜುಡುಗೆಯಲ್ಲಿ ಸಮುದ್ರಕ್ಕೆ ಹಾರಿದ ಸುಶ್ಮಿತಾ ಸೇನ್! ಲಲಿತ್ ಮೋದಿ ಹೇಳಿದ್ದೇನು ಗೊತ್ತಾ..?

ಮಾಜಿ ವಿಶ್ವಸುಂದರಿ ಹಾಗೂ ಬಾಲಿವುಡ್ ನಟಿ ಸುಶ್ಮಿತಾ ಸೇನ್ & ಲಲಿತ್ ಮೋದಿ ಸದ್ಯ ಹಾಟ್​ ಟಾಪಿಕ್​ ಆಗಿದ್ದಾರೆ.

Written by - Puttaraj K Alur | Last Updated : Aug 6, 2022, 01:15 PM IST
  • ಈಜುಡುಗೆಯಲ್ಲಿ ಸಮುದ್ರಕ್ಕೆ ಹಾರಿದ ಬಾಲಿವುಡ್ ನಟಿ ಸುಶ್ಮಿತಾ ಸೇನ್
  • ಮಾಜಿ ವಿಶ್ವಸುಂದರಿಯ ವಿಡಿಯೋಗೆ ಲಲಿತ್ ಮೋದಿ ಹೇಳಿದ್ದೇನು ಗೊತ್ತಾ?
  • ನಿರಂತರವಾಗಿ ಟ್ರೋಲ್ ಆಗುತ್ತಿರುವ ಸುಶ್ಮಿತಾ ಸೇನ್ ಮತ್ತು ಲಲಿತ್ ಮೋದಿ
ಈಜುಡುಗೆಯಲ್ಲಿ ಸಮುದ್ರಕ್ಕೆ ಹಾರಿದ ಸುಶ್ಮಿತಾ ಸೇನ್! ಲಲಿತ್ ಮೋದಿ ಹೇಳಿದ್ದೇನು ಗೊತ್ತಾ..? title=
ಈಜುಡುಗೆಯಲ್ಲಿ ಸಮುದ್ರಕ್ಕೆ ಹಾರಿದ ಸುಶ್ಮಿತಾ ಸೇನ್

ನವದೆಹಲಿ: ಸುಶ್ಮಿತಾ ಸೇನ್ ಮತ್ತು ಲಲಿತ್ ಮೋದಿ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ. ಈ ವಿಷಯವನ್ನು ಲಲಿತ್ ಮೋದಿ ಬಹಿರಂಗಪಡಿಸಿದ ದಿನದಿಂದಲೇ ಈ ಜೋಡಿ ಟ್ರೋಲ್ ಆಗುತ್ತಿದೆ. ಮಾಜಿ ವಿಶ್ವಸುಂದರಿ ಹಾಗೂ ಬಾಲಿವುಡ್ ನಟಿ ಸುಶ್ಮಿತಾ ಸೇನ್ ಸದ್ಯ ಹಾಟ್​ ಟಾಪಿಕ್​ ಆಗಿದ್ದಾರೆ.

ಅನೇಕರು ಬಾಲಿವುಡ್ ನಟಿಯನ್ನು ದುರಾಸೆಯ ಮಹಿಳೆ ಎಂದು ಲೇವಡಿ ಮಾಡಿದ್ದಾರೆ. ಇದಕ್ಕೆ ಮೌನ ಮುರಿದ ಸುಶ್ಮಿತಾ ಟ್ರೋಲ್ ಮಾಡಿದವರಿಗೆ ತಕ್ಕ ಉತ್ತರ ನೀಡಿದ್ದಾರೆ. ಇದೀಗ ಈಜುಡುಗೆಯಲ್ಲಿ ಸುಶ್ಮಿತಾ ಸೇನ್ ಸಮುದ್ರಕ್ಕೆ ಹಾರಿರುವ ವಿಡಿಯೋ ವೈರಲ್ ಆಗಿದೆ. ಇದಕ್ಕೆ ಅವರ ಪ್ರಿಯಕರ ಲಲಿತ್ ಮೋದಿ ಕಾಮೆಂಟ್ ಮಾಡಿರುವುದು ಇದೀಗ ಸುದ್ದಿಯಾಗಿದೆ.

 
 
 
 

 
 
 
 
 
 
 
 
 
 
 

A post shared by Sushmita Sen (@sushmitasen47)

ಇದನ್ನೂ ಓದಿ: ಬಾನಂಗಳದಲ್ಲಿ ಗಾಳಿಪಟ-2 ಹಾರಲು ಫಿಕ್ಸ್‌ ಆಯ್ತು ಡೇಟ್‌: ಗಣಿ-ಭಟ್ರ ಕಾಂಬಿನೇಷನ್‌ ಮತ್ತೆ ತೆರೆಮೇಲೆ

ದೋಣಿಯಿಂದ ಸಮುದ್ರಕ್ಕೆ ಧುಮುಕಿದ ಸುಶ್ಮಿತಾ

ಸ್ವತಃ ಸುಶ್ಮಿತಾ ಸೇನ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ನಟಿ ದೋಣಿಯಿಂದ ಕೆಳಗಿಳಿದು ಸಮುದ್ರಕ್ಕೆ ಧುಮುಕುವುದನ್ನು ನೀವು ಕಾಣಬಹುದು. ಈಜುಡುಗೆ ಧರಿಸಿ ಸುಶ್ಮಿತಾ ಸ್ನಾನ ಮಾಡುತ್ತಿರುವ ದೃಶ್ಯಕ್ಕೆ ಲಲಿತ್ ಮೋದಿ ಕಾಮೆಂಟ್ ಮಾಡಿದ್ದಾರೆ.

ಹಾಟ್ ಆಗಿದ್ದೀಯಾ ಎಂದ ಲಲಿತ್ ಮೋದಿ

ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ನಟಿ ಸುಶ್ಮಿತಾ ಸೇನ್ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಶೇರ್ ಮಾಡಿದ ತಕ್ಷಣ ಗೆಳೆಯ ಲಲಿತ್ ಮೋದಿ ಕಾಮೆಂಟ್ ಮಾಡಿದ್ದು, ಕೆಲವೇ ನಿಮಿಷಗಳಲ್ಲಿ ಅದು ವೈರಲ್ ಆಗಿದೆ. ‘Looking hot in Sardinia’ ಎಂದು ಲಲಿತ್ ಮೋದಿ ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Rachita Ram : 'ಸೆಕ್ಸ್ ವರ್ಕರ್' ಪಾತ್ರದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್..!

ಟ್ರೋಲ್ ಆದ ಬಳಿಕ ಸೆಲ್ಫಿ ಹಂಚಿಕೊಂಡ ನಟಿ

ಸುಶ್ಮಿತಾ ಸೇನ್ ಕೆಲವು ದಿನಗಳ ಹಿಂದೆ ಕನ್ನಡಕವನ್ನು ಧರಿಸಿ ಟ್ರೋಲ್ ಆಗಿದ್ದರು. ನಟಿಯ ಕನ್ನಡಕದಲ್ಲಿ ಮದ್ಯದ ಬಾಟಲಿಗಳು ಕಾಣಿಸುತ್ತಿವೆ ಎಂದು ಹಲವರು ಫನ್ನಿ ಫನ್ನಿಯಾಗಿ ಕಾಮೆಂಟ್ ಮಾಡಿದ್ದರು. ಇದಾದ ಬಳಿಕ ಇದೀಗ ತಮ್ಮ ಸೆಲ್ಫಿ ಫೋಟೋವೊಂದನ್ನು ನಟಿ ಹಂಚಿಕೊಂಡಿದ್ದಾರೆ. ‘Why do you wear sunglasses all the time? Well, cause I love to reflect!!’ ಎಂದು ನಟಿ ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ನಟಿಯ ಈ ಪೋಸ್ಟ್ ಸಹ ಸಖತ್ ವೈರಲ್ ಆಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News