Snake Bite Girl Video: ಸಾಮಾಜಿಕ ಮಾಧ್ಯಮಗಳಲ್ಲಿ ಹಾವುಗಳ ಕುರಿತಾದ ಹಲವು ವಿಡಿಯೋಗಳನ್ನು ನೀವು ವೀಕ್ಷಿಸಿರಬಹುದು. ಹಾವು ಎದುರಿಗೆ ಬಂದರೆ ಸಾಕು ಅತಿರಥ-ಮಹಾರಥರು ಕೂಡ ಒಂದು ಕ್ಷಣ ಭಯಭೀತರಾಗುತ್ತಾರೆ. ಏಕೆಂದರೆ ಹಾವು ತೇವಳುವುದನ್ನು ನೋಡಿದರೆ ಸಾಕು ಮೈಮೇಲಿನ ರೋಮಗಳು ಎದ್ದು ನಿಲ್ಲುತ್ತವೆ. ಸಾಮಾಜಿಕ ಮಾಧ್ಯಮಗಳಲ್ಲಿ ಹಾವುಗಳ ಹಲವು ವೀಡಿಯೋಗಳು ನೋಡಲು ಸಿಗುತ್ತವೆ ಮತ್ತು ಅವುಗಳನ್ನು ಅಪ್ಲೋಡ್ ಕೂಡ ಮಾಡಲಾಗುತ್ತದೆ. ಇವುಗಳಲ್ಲಿ ಕೆಲ ವೀಡಿಯೋಗಳು ತುಂಬಾ ಅಪಾಯಕಾರಿಯಾಗಿರುತ್ತವೆ. ಇನ್ನೊಂದೆಡೆ ಕೆಲ ವಿಡಿಯೋಗಳು ಭಯವನ್ನು ಕೂಡ ಹುಟ್ಟಿಸುತ್ತವೆ. 


COMMERCIAL BREAK
SCROLL TO CONTINUE READING

ದುಬಾರಿ ಪರಿಣಾಮಿಸಿದ ಹಾವಿನ ಜೊತೆಗಿನ ಸರಸ
ಇತ್ತೀಚಿನ ದಿನಗಳಲ್ಲಿ ವಿಡಿಯೋವೊಂದು ಎಲ್ಲೆಡೆ ಭಾರಿ ಸದ್ದು ಮಾಡುತ್ತಿದೆ. ಈ ವಿಡಿಯೋ ಓರ್ವ ಯುವತಿ ಹಾಗೂ ಒಂದು ಹಾವಿಗೆ ಸಂಬಂಧಿಸಿದ್ದಾಗಿದೆ. ಈ ವಿಡಿಯೋದಲ್ಲಿ ಯುವತಿ ಹಾವಿನ ಜೊತೆಗೆ ಚೆಲ್ಲಾಟವಾಗುತ್ತಿರುವುದನ್ನು ನೀವು ನೋಡಬಹುದು. ಅದನ್ನು ನೋಡಿ ಮೈಯಲ್ಲಿ ನಡುಕ ಹುಟ್ಟುತ್ತದೆ. ಆದರೆ, ನಂತರ ಹಾವು ಯುವತಿಯ ಜೊತೆಗೆ ನಡೆದುಕೊಂಡ ರೀತಿಯನ್ನು ನೋಡಿದರೆ, ಯುವತಿ ಘಟನೆಯನ್ನು ತನ್ನ ಜೀವನದಲ್ಲಿಯೇ ಮರೆಯಲು ಸಾಧ್ಯವಿಲ್ಲ ಎಂಬಂತಿದೆ. 


ಇದನ್ನೂ ಓದಿ-Viral Video : ಮದುವೆ ಮಂಟಪದಲ್ಲಿ ವಧು ಮಾಡಿದ ಈ ತಪ್ಪಿಗೆ ವೇದಿಕೆ ಮೇಲೆಯೇ ಸೇಡು ತೀರಿಸಿಕೊಂಡ ವರ


ಯುವತಿ ಒಂದು ಅಪಾಯಕಾರಿ ಹಾವನ್ನು ತನ್ನ ಕೈಯಲ್ಲಿ ಹಿಡಿದಿರುವುದನ್ನು ನೀವು ನೋಡಬಹುದು. ಈ ಸಂದರ್ಭದಲ್ಲಿ ಅವಳು ಹಾವಿನ ಜೊತೆಗೆ ಚೆಲ್ಲಾಟವಾಡಲು ಪ್ರಯತ್ನಿಸುತ್ತಾಳೆ. ಏತನ್ಮಧ್ಯೆ ಹಾವು ಯುವತಿಯ ಮೇಲೆ ಕೋಪಗೊಳ್ಳುತ್ತದೆ.   ಬಳಿಕ ಅದು ಯುವತಿಯ ಬಲಗೈಯನ್ನು ತನ್ನ ಬಾಯಿಯಲ್ಲಿ ತೆಗೆದುಕೊಳ್ಳುವುದನ್ನು ನೀವು ನೋಡಬಹುದು. ವಿಡಿಯೋ ನೋಡಿ.. 



ಇದನ್ನೂ ಓದಿ-Viarl video : ಮದುವೆ ನಡೆಯುತ್ತಿದ್ದಂತೆಯೇ ಹಾರ ಎಸೆದು ಮಂಟಪದಿಂದ ಕೆಳಗಿಳಿದ ವಧು ..!


ವಿಡಿಯೋ ನೋಡಿ ಭಯಭೀತರಾದ ಇಂಟರ್ನೆಟ್ ಬಳಕೆದಾರರು 
ಹಲವು ಬಾರಿ ಹಾವು ಯುವತಿಯ ಕೈಮೇಲೆ ದಾಳಿ ಇಡಲು ಯತ್ನಿಸುವುದನ್ನು ನೀವು ವಿಡಿಯೋದಲ್ಲಿ ಕಾಣಬಹುದು. ಇದರಿಂದ ಯುವತಿ ಭಯಭೀತಳಾಗುತ್ತಾಳೆ. ವಿಡಿಯೋದಲ್ಲಿ ಯುವತಿ ಹಾವಿನಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಿರುವುದನ್ನು ನೀವು ನೋಡಬಹುದು. ಒಂದು ದಾಳಿಯಲ್ಲಿ ಹಾವು ಯುವತಿಯ ಹೆಬ್ಬೆರಳನ್ನೇ ಗುರಿಯಾಗಿಸಿದೆ. snake._.world ಹೆಸರಿನ ಖಾತೆಯ ಮೂಲಕ ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ. ಈ ವಿಡಿಯೋ ಎಷ್ಟೊಂದು ಭಯಾನಕವಾಗಿದೆ ಎಂದರೆ, ಇಂಟರ್ನೆಟ್ ನಲ್ಲಿ ಎಲ್ಲೆಂದರಲ್ಲಿ ಈ ವಿಡಿಯೋ ಕುರಿತು ಚರ್ಚಿಸಲಾಗುತ್ತಿದೆ. ಅಪ್ಲೋಡ್ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋ ಸಾವಿರಾರು ಬಾರಿ ವೀಕ್ಷಣೆಗೆ ಒಳಗಾಗಿದೆ. ಅಷ್ಟೇ ಅಲ್ಲ ಹಲವು ಜನರು ವಿಡಿಯೋಗೆ ಕಾಮೆಂಟ್ ಕೂಡ ಮಾಡಿದ್ದಾರೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.