ಬೆಂಗಳೂರು  : ಯಾವುದೇ ಒಂದು ಸ್ಥಳಕ್ಕೆ ತೆರಳಬೇಕಾದರೆ ದಾರಿ ಗೊತ್ತಿಲ್ಲದೇ ಹೋದರೆ ಗೂಗಲ್ ಮ್ಯಾಪ್ ಸಹಾಯವನ್ನು ಪಡೆಯಲಾಗುತ್ತದೆ. ಕಾರಿನಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುವಾಗ ಹೆಚ್ಚಿನ ಚಾಲಕರು ಗೂಗಲ್ ಮ್ಯಾಪ್ ಬಳಸುತ್ತಾರೆ. ಗೂಗಲ್ ಸಾಮಾನ್ಯವಾಗಿ ಸುಲಭ ಮತ್ತು ಜಾಮ್ ಮುಕ್ತ ಮಾರ್ಗವನ್ನು ತೋರಿಸುವ ಮೂಲಕ ಜನರನ್ನು ಗಮ್ಯಸ್ಥಾನಕ್ಕೆ ಕರೆದೊಯ್ಯುತ್ತದೆ. ಆದರೆ ಕೆಲವೊಮ್ಮೆ  ಗೂಗಲ್ ನಲ್ಲಿ  ದಾರಿ ಕೇಳುವುದು ಕೂಡಾ ಅಪಾಯವನ್ನು ತಂದೊಡ್ಡಬಹುದು. ಗೂಗಲ್ ಮ್ಯಾಪ್ ಕೂಡಾ ತಪ್ಪು ದಾರಿ ತೋರಿಸಿರುವ ಪ್ರಕರಣಗಳು ನಮ್ಮ ಕಣ್ಣ ಮುಂದೆ ಇದೆ. ಕೇರಳದ ಕಡುತುರುತಿಯಲ್ಲಿ ಇಂಥಹ ಪ್ರಕರಣ ಬೆಳಕಿಗೆ ಬಂದಿದೆ. ಗೂಗಲ್ ಮ್ಯಾಪ್ ನಿರ್ದೇಶನದಂತೆ, ಕಾರು ಚಲಾಯಿಸಿಕೊಂಡು ಹೋಗಿ, ನಾಲೆಗೆ ಬೀಳುವಂತಾಗಿದೆ.   


COMMERCIAL BREAK
SCROLL TO CONTINUE READING

ವರದಿ ಪ್ರಕಾರ, ಕರ್ನಾಟಕದ ಕುಟುಂಬವೊಂದು ಮುನ್ನಾರ್‌ನಿಂದ ಅಲಪ್ಪುಳಕ್ಕೆ ತೆರಳುತ್ತಿತ್ತು. ಕುಟುಂಬವು ಎಸ್‌ಯುವಿ ಕಾರಿನಲ್ಲಿ ಹೋಗುತ್ತಿತ್ತು. ಮುನ್ನಾರ್‌ನಿಂದ ಹೊರಡುವಾಗ ಈ ಕುಟುಂಬ ಗೂಗಲ್ ಮ್ಯಾಪ್‌ನಲ್ಲಿ ನ್ಯಾವಿಗೇಷನ್ ಹಾಕಿತ್ತು. ಇದಾದ ನಂತರ ಕಾರು ಚಲಾಯಿಸುತ್ತಿದ್ದ ವ್ಯಕ್ತಿ ಗೂಗಲ್ ತೋರಿಸುತ್ತಿದ್ದ ಮಾರ್ಗವನ್ನು ಅನುಸರಿಸತೊಡಗಿದ. ಬುಧವಾರ ಮಧ್ಯಾಹ್ನ ಕಾಡುತುರುತಿಯ ಕುರುಪ್ಪಂತರ ಕಡವು ಬಳಿ ಕಾರು ಇದ್ದಕ್ಕಿದ್ದಂತೆ ದೊಡ್ಡ ಕಾಲುವೆಗೆ ಬಿದ್ದಿದೆ. ಗೂಗಲ್ ಹೇಳುತ್ತಿರುವ ಹಾದಿಯಲ್ಲೇ ಕಾರು ಚಲಾಯಿಸಿಕೊಂಡು ಬಂದರೂ ಹೀಗೆ ಆಗಿದೆ ಎನ್ನುವುದು ಆ ಕುಟುಂಬದ ಮಾತು. 


ಇದನ್ನೂ ಓದಿ : Viral Video : ಚಿಪ್ಸ್ ಕದಿಯಲು ಹೋಗುವಾಗ ನಾಯಿಯನ್ನು ಕೂಡಾ ಜೊತೆಗಾರನನ್ನಾಗಿಸಿತು ಕೋತಿ


ಕಾರು ಕಾಲುವೆಗೆ ಬೀಳುತ್ತಿದ್ದಂತೆಯೇ ಕುಟುಂಬದವರು ಜೋರಾಗಿ ಕಿರುಚಿಕೊಂಡಿದ್ದಾರೆ. ಈ ಕಿರುಚಾಟದ ಸದ್ದು ಕೇಳಿದ ಅಕ್ಕಪಕ್ಕದವರು ಸ್ಥಳಕ್ಕಾಗಮಿಸಿದ್ದಾರೆ. ನಂತರ ಕಾರಿನೊಳಗಿದ್ದವರನ್ನು ಒಬ್ಬೊಬ್ಬರಾಗಿ ಹೊರತೆಗೆಯಲಾಗಿದೆ. ನಂತರ ಕಾರನ್ನು ಹೊರ ತೆಗೆಯಲು ಲಾರಿಯನ್ನು  ಬಳಸಲಾಯಿತು.


ಇದನ್ನೂ ಓದಿ : ಕಾಂಗ್ರೆಸ್ ಪಕ್ಷದ ಕುರಿತು ಶಾಕಿಂಗ್ ಹೇಳಿಕೆ ನೀಡಿದ ಪ್ರಶಾಂತ್ ಕಿಶೋರ್..! 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.