Viral Video : ಚಿಪ್ಸ್ ಕದಿಯಲು ಹೋಗುವಾಗ ನಾಯಿಯನ್ನು ಕೂಡಾ ಜೊತೆಗಾರನನ್ನಾಗಿಸಿತು ಕೋತಿ

ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ವಿಡಿಯೋಗಳು ಕಾಲಕಾಲಕ್ಕೆ ವೈರಲ್ ಆಗುತ್ತಿರುತ್ತವೆ. ಅದರಲ್ಲೂ ಪ್ರಾಣಿಗಳಿಗೆ ಸಂಬಧಿಸಿದ ವಿಡಿಯೋಗಳು ಒಂದು ಹೆಜ್ಜೆ ಮುಂದಿರುತ್ತದೆ.  ಪ್ರಾಣಿಗಳ ಇಂಥಹ ವಿಡಿಯೋಗಳನ್ನು ವೀಕ್ಷಕರು ಕೂಡಾ ಅತಿಯಾಗಿ ಮೆಚ್ಚುತ್ತಾರೆ.

Written by - Ranjitha R K | Last Updated : May 20, 2022, 02:37 PM IST
  • ಚಿಪ್ಸ್ ಪ್ಯಾಕೆಟ್ ಕದಿಯಲು ಕೋತಿ ಪ್ರಯತ್ನ
  • ವೈರಲ್ ಆಯಿತು ಕೋತಿಯ ವಿಡಿಯೋ
  • ಲಕ್ಷಾಂತರ ಮಂದಿಯಿಂದ ವಿಡಿಯೋ ವೀಕ್ಷಣೆ
Viral Video : ಚಿಪ್ಸ್ ಕದಿಯಲು ಹೋಗುವಾಗ ನಾಯಿಯನ್ನು ಕೂಡಾ ಜೊತೆಗಾರನನ್ನಾಗಿಸಿತು ಕೋತಿ   title=
Monkey viral video (photo instagram)

ಬೆಂಗಳೂರು : ಇಂಟರ್‌ನೆಟ್‌ನಲ್ಲಿ ನಾವು ನೋಡುವ ಕೆಲವು ವೀಡಿಯೋಗಳು, ಅತಿಯಾಗಿ ಸಂತೋಷವನ್ನು ಉಂಟು ಮಾಡಿದರೆ ಇನ್ನು ಕೆಲವು ಮನಸ್ಸಿಗೆ ಕಸಿವಿಸಿ ಉಂಟು ಮಾಡುತ್ತದೆ. ಇನ್ನು ಕೆಲವು ವಿಡಿಯೋಗಳು ಹೀಗೂ ಆಗಬಹುದಾ ಎಂದು ನಮ್ಮನ್ನೇ ಯೋಚನೆಗೆ ತಳ್ಳುತ್ತದೆ.  ಅದರಲ್ಲೂ ಕೆಲವೊಂದು ವಿಡಿಯೋಗಳಲ್ಲಿ ಪ್ರಾಣಿಗಳ ಜಾಣತನ ನೋಡಿದರೆ ಆಶ್ಚರ್ಯವಾಗುತ್ತದೆ.  

ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ವಿಡಿಯೋಗಳು ಕಾಲಕಾಲಕ್ಕೆ ವೈರಲ್ ಆಗುತ್ತಿರುತ್ತವೆ. ಅದರಲ್ಲೂ ಪ್ರಾಣಿಗಳಿಗೆ ಸಂಬಧಿಸಿದ ವಿಡಿಯೋಗಳು ಒಂದು ಹೆಜ್ಜೆ ಮುಂದಿರುತ್ತದೆ.  ಪ್ರಾಣಿಗಳ ಇಂಥಹ ವಿಡಿಯೋಗಳನ್ನು ವೀಕ್ಷಕರು ಕೂಡಾ ಅತಿಯಾಗಿ ಮೆಚ್ಚುತ್ತಾರೆ.

ಇದನ್ನೂ ಓದಿ : ಬಿಲದಲ್ಲಿ ಅವಿತಿದ್ದ ಹಾವನ್ನು ಹೊರಗೆಳೆದು ನುಂಗಿದ ಕಾಳಿಂಗ ಸರ್ಪ ..! ಇಲ್ಲಿದೆ ಭಯಾನಕ ವಿಡಿಯೋ

ಈ ವೀಡಿಯೊದಲ್ಲಿ, ಕೋತಿಯೊಂದು ಅಂಗಡಿಯ ಹೊರಗೆ ಚಿಪ್ಸ್ ಪ್ಯಾಕೆಟ್ ಕದಿ ಯಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.  ಆದರೆ ಪಾಪ ಕೋತಿಗೆ ಚಿಪ್ ಪ್ಯಾಕೆಟ್ ಸರಿಯಾಗಿ ಕೈಗೆಟಕುವುದಿಲ್ಲ. ಬಹಳ ಪ್ರಯತ್ನದ ನಂತರ ತನ್ನ ಈ ಕಳ್ಳತನಕ್ಕೆ ನಾಯಿಯನ್ನು ಕೂಡಾ ಪಾಲುದಾರನನ್ನಾಗಿ ಮಾಡುತ್ತದೆ ಕೋತಿ. 

 
 
 
 

 
 
 
 
 
 
 
 
 
 
 

A post shared by BKS 💕💗 (@memes.bks)

 

ಈ ಮಂಗ ನಾಯಿಯ ಬೆನ್ನ ಮೇಲೇರಿ ಚಿಪ್ಸ್ ಪ್ಯಾಕೆಟ್ ಕದಿಯಲು ಪ್ರಯತ್ನಿಸುತ್ತದೆ. ಆದರೂ ಪುಟ್ಟ ಕೋತಿ ಕಳ್ಳತನದಲ್ಲಿ ಯಶಸ್ವಿಯಾಗುವುದಿಲ್ಲ.  ಆದರೂ ಮಂಗ ನಾಯಿಯ ಬೆನ್ನು ಹತ್ತಿ ಕಳ್ಳತನ ಮಾಡುವ ಮಲಗುವುದನ್ನು ನೋಡುವುದೇ ಚಂದ. 
ವನ್ನು ನೆಟ್ಟಿಗರು ಬಹಳವಾಗಿ ಮೆಚ್ಚಿದ್ದಾರೆ. 

ಇದನ್ನೂ ಓದಿ : Viral Video: ಬೇಟೆಯಾಡಲು ನೀರಿನಿಂದ ಹೊರಬಂದ ಮೊಸಳೆ ಮುಂದೇನಾಯ್ತು...

ಈ ವೀಡಿಯೊವನ್ನು ಇದುವರೆಗೆ ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಅನೇಕರು ಇಷ್ಟಪಟ್ಟಿದ್ದಾರೆ.  ಈ ವೀಡಿಯೊವನ್ನು Instagram ನಲ್ಲಿ memes.bks ಗೆ ಅಪ್‌ಲೋಡ್ ಮಾಡಲಾಗಿದೆ. ಇದನ್ನು ನೋಡಿದ ನೆಟ್ಟಿಗರು ನಾನಾ ರೀತಿಯ ಕಮೆಂಟ್‌ಗಳನ್ನು ಹಾಕುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News