ನವದೆಹಲಿ: ಕೆನಡಾದ ಮೃಗಾಲಯದಲ್ಲಿ ಸಂದರ್ಶಕರಿಗೆ ಹೆಣ್ಣು ಗೊರಿಲ್ಲಾ ತನ್ನ ಮಗುವನ್ನು ತೋರಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದು 1994ರ ಅನಿಮೇಟೆಡ್ ಚಲನಚಿತ್ರ ‘ದಿ ಲಯನ್ ಕಿಂಗ್‌’ನ ಜನಪ್ರಿಯ ದೃಶ್ಯವನ್ನು ನೆನಪಿಸುವಂತಿದೆ. ಆ ಚಿತ್ರದಲ್ಲಿ ‘ಸಿಂಬಾ’ವನ್ನು ಪರಿಚಯಿಸಿದಂತೆ ಈ ಗೊರಿಲ್ಲಾವು ಮೃಗಾಯಲಕ್ಕೆ ಭೇಟಿ ನೀಡಿದ ಜನರಿಗೆ ತನ್ನ ಮಗುವನ್ನು ತೋರಿಸಿದೆ.


COMMERCIAL BREAK
SCROLL TO CONTINUE READING

ಕೆನಡಾದ ಕ್ಯಾಲ್ಗರಿ ಮೃಗಾಲಯದಲ್ಲಿ ಈ ವಿಡಿಯೋವನ್ನು ಸೆರೆ ಹಿಡಿಯಲಾಗಿದೆ. ViralHog ತನ್ನ Instagram ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಹೆಣ್ಣು ಗೊರಿಲ್ಲಾದ ಹಾವಭಾವವನ್ನು ಕಂಡು ಸಂದರ್ಶಕರು ಆಶ್ಚರ್ಯಕ್ಕೊಳಗಾಗಿದ್ದಾರೆ.  


ಇದನ್ನೂ ಓದಿ: ಬಾಯ್ ಫ್ರೆಂಡ್ ಮೋಸ ಮಾಡಿದ್ದಕ್ಕೆ ಆತನ ತಂದೆಯನ್ನೇ ಮದುವೆಯಾಗಿ ಸೇಡು ತೀರಿಸಿಕೊಂಡ ಯುವತಿ


 

 

 

 



 

 

 

 

 

 

 

 

 

 

 

A post shared by ViralHog (@viralhog)


‘ಕ್ಯಾಲ್ಗರಿ ಮೃಗಾಲಯದಲ್ಲಿ ‘A proud mama shows off her baby at the Calgary Zoo’ ಎಂದು ಈ ವಿಡಿಯೋಗೆ ಕ್ಯಾಪ್ಶನ್ ನೀಡಲಾಗಿದೆ. ಕೆಲವೇ ಸೆಕೆಂಡುಗಳ ಈ ವಿಡಿಯೋದಲ್ಲಿ ಗೊರಿಲ್ಲಾ ತನ್ನ ಮಗುವನ್ನು ಎತ್ತಿ ಆಡಿಸಿದೆ. ಮೃಗಾಲಯಕ್ಕೆ ಭೇಟಿ ನೀಡಿದ ಜನರಿಗೆ ಮಗುವನ್ನು ತೋರಿಸಿ ಅದರ ಹಣೆಗೆ ಮುತ್ತಿಕ್ಕಿದೆ.  


ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದೆ. ಅನೇಕ Instagram ಬಳಕೆದಾರರು ತಾಯಿ ಗೊರಿಲ್ಲಾ ಮತ್ತು ಅದರ ಮಗುವನ್ನು ನೋಡಿ ಖುಷಿಪಟ್ಟಿದ್ದಾರೆ. ಅದು ಕೂಡ ಮನುಷ್ಯರಂತೆಯೇ ತನ್ನ ಮಗುವನ್ನು ಮುದ್ದಾಡಿದೆ ಎಂದು ಅನೇಕ ಸಂತಸಪಟ್ಟಿದ್ದಾರೆ. ಕೆಲವರು ಪ್ರಾಣಿಗಳನ್ನು ಪಂಜರದಲ್ಲಿ ಬಂಧಿಸಿ ಇಟ್ಟಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.  


ಇದನ್ನೂ ಓದಿ: Weird tradition: ಇಲ್ಲಿ ಮದುವೆ ನಂತರ ವಧುವಿನ ತಲೆ, ಎದೆಯ ಮೇಲೆ ಉಗಿಯುವುದೇ ಆಶೀರ್ವಾದ


‘ಶೀಘ್ರವೇ ಈ ಗೊರಿಲ್ಲಾ ಮತ್ತು ಅದರ ಮಗುವಿಗೆ ಮೃಗಾಲಯದ ಬಂಧನದಿಂದ ಮುಕ್ತಿ ಸಿಗಲಿ ಎಂದು ಹಾರೈಸುತ್ತೇನೆ’ ಎಂದು ಒಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದಾರೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.  


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.