Weird tradition: ಇಲ್ಲಿ ಮದುವೆ ನಂತರ ವಧುವಿನ ತಲೆ, ಎದೆಯ ಮೇಲೆ ಉಗಿಯುವುದೇ ಆಶೀರ್ವಾದ

Weird tradition: ಕೀನ್ಯಾದ ಬುಡಕಟ್ಟು ಜನಾಂಗದಲ್ಲಿ, ಮದುವೆಯ ಸಮಯದಲ್ಲಿ ವಧುವಿನ ತಂದೆ ತನ್ನ ಮಗಳ ತಲೆಯ ಮೇಲೆ ಉಗುಳುವ ಮೂಲಕ ಆಶೀರ್ವದಿಸುತ್ತಾನೆ. ಮದುವೆಯಾದ ಹುಡುಗಿಯ ತಲೆ ಮತ್ತು ಎದೆಯ ಮೇಲೆ ಉಗುಳುವ ಮೂಲಕ ಆಶೀರ್ವಾದವನ್ನು ನೀಡುವುದು ವಾಡಿಕೆ. 

Written by - Chetana Devarmani | Last Updated : Jul 27, 2022, 10:31 AM IST
  • ಇಲ್ಲಿ ಮದುವೆ ನಂತರ ವಧುವಿನ ತಲೆ ಮೇಲೆ ಉಗಿಯುವುದೇ ಆಶೀರ್ವಾದ
  • ಕೀನ್ಯಾ ಬುಡಕಟ್ಟುಗಳ ಜನರಲ್ಲಿ ವಿಭಿನ್ನ ಸಂಪ್ರದಾಯಗಳನ್ನು ಕಾಣಬಹುದು
  • ಬುಡಕಟ್ಟಿನಲ್ಲಿ ವಿವಾಹದ ಆಚರಣೆಗಳು ವಿಚಿತ್ರವಾಗಿರುತ್ತವೆ
Weird tradition: ಇಲ್ಲಿ ಮದುವೆ ನಂತರ ವಧುವಿನ ತಲೆ, ಎದೆಯ ಮೇಲೆ ಉಗಿಯುವುದೇ ಆಶೀರ್ವಾದ title=
ಕೀನ್ಯಾ ಬುಡಕಟ್ಟು

Weird tradition: ಕೀನ್ಯಾದ ಬುಡಕಟ್ಟು ಜನಾಂಗದಲ್ಲಿ, ಮದುವೆಯ ಸಮಯದಲ್ಲಿ ವಧುವಿನ ತಂದೆ ತನ್ನ ಮಗಳ ತಲೆಯ ಮೇಲೆ ಉಗುಳುವ ಮೂಲಕ ಆಶೀರ್ವದಿಸುತ್ತಾನೆ. ಮದುವೆಯಾದ ಹುಡುಗಿಯ ತಲೆ ಮತ್ತು ಎದೆಯ ಮೇಲೆ ಉಗುಳುವ ಮೂಲಕ ಆಶೀರ್ವಾದವನ್ನು ನೀಡುವುದು ವಾಡಿಕೆ. ಸಾಮಾನ್ಯವಾಗಿ ಬುಡಕಟ್ಟು ಜನಾಂಗಗಳು ತಮ್ಮ ಸಂಸ್ಕೃತಿ, ಆಚಾರ-ವಿಚಾರಗಳಿಂದಾಗಿ ಸುದ್ದಿಯಲ್ಲಿರುತ್ತಾರೆ. ಕೀನ್ಯಾ ಬುಡಕಟ್ಟುಗಳ ಜನರಲ್ಲಿ ವಿಭಿನ್ನ ವಿಲಕ್ಷಣ ಸಂಪ್ರದಾಯಗಳನ್ನು ನಾವು ಕಾಣಬಹುದು. ಬುಡಕಟ್ಟಿನಲ್ಲಿ  ವಿವಾಹದ ಆಚರಣೆಗಳು ವಿಚಿತ್ರವಾಗಿರುತ್ತವೆ. ಈ ಸಂಪ್ರದಾಯ ಕೇಳಲು ವಿಚಿತ್ರವಾಗಿದೆ.

ಇದನ್ನೂ ಓದಿ: ಐರನ್ ಟ್ಯಾಬ್ಲೆಟ್ ಸೇವಿಸಿ ಸರ್ಕಾರಿ ಶಾಲೆಯ 55 ವಿದ್ಯಾರ್ಥಿಗಳು ಅಸ್ವಸ್ಥ

ಈ ಬುಡಕಟ್ಟಿನ ಹೆಣ್ಣುಮಕ್ಕಳು ಮನೆಯಿಂದ ಹೊರಬಂದಾಗ, ವಧುವಿನ ತಂದೆ ತನ್ನ ಮಗಳ ತಲೆಗೆ ಉಗುಳುತ್ತಾನೆ. ಅವನು ತನ್ನ ಮಗಳ ಮೇಲೆ ಉಗುಳುವುದರ ಮೂಲಕ ಆಶೀರ್ವದಿಸುತ್ತಾನೆ. ಇದನ್ನು ಕೇಳಲು ನಿಮಗೆ ವಿಚಿತ್ರವೆನಿಸಬಹುದು, ಆದರೆ ಇದು ಈ ಜನರು ಆಶೀರ್ವದಿಸುವ ಮಾರ್ಗವಾಗಿದೆ ಎಂಬುದು ನಿಜ. ಇದರೊಂದಿಗೆ ಈ ಬುಡಕಟ್ಟು ಜನಾಂಗದ ಜನರು ಇನ್ನೂ ಅನೇಕ ಆಚರಣೆಗಳನ್ನು ನಡೆಸುತ್ತಾರೆ, ಇದು ಆಶ್ಚರ್ಯಕರವಾಗಿದೆ.

ಈ ಸಂಪ್ರದಾಯವನ್ನು ಕೀನ್ಯಾ ಮತ್ತು ತಾಂಜಾನಿಯಾದ ಬುಡಕಟ್ಟು ಜನಾಂಗದವರುಆಚರಿಸುತ್ತಾರೆ. ಅವರ ಹೆಸರು ಮಾಸಾಯಿ. ಮಾಸಾಯಿ ಜನರು ತಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳಿಗೆ ಹೆಸರುವಾಸಿಯಾಗಿದ್ದಾರೆ, ಏಕೆಂದರೆ ಅವರು ವಿವಿಧ ಪದ್ಧತಿಗಳನ್ನು ಹೊಂದಿದ್ದಾರೆ.

ಏನಿದು ಸಂಪ್ರದಾಯ?

ವಧುವಿಗೆ ವಿಶೇಷ ವಿದಾಯ ನೀಡಲಾಗುತ್ತದೆ. ಮಾಧ್ಯಮದಲ್ಲಿ ಪ್ರಕಟವಾದ ಲೇಖನದ ಪ್ರಕಾರ, ಮಹಿಳೆಯರು ಮದುವೆಯಾದಾಗ, ವಧುವಿನ ತಂದೆ ವಿದಾಯ ಹೇಳುವ ಸಮಯದಲ್ಲಿ ತನ್ನ ಮಗಳ ತಲೆ ಮತ್ತು ಎದೆಯ ಮೇಲೆ ಉಗುಳುತ್ತಾನೆ. ಇಂತಹ ಸಂಪ್ರದಾಯ ಭಾರತದಲ್ಲಿ ಎಲ್ಲಿಯೂ ಕಾಣಸಿಗುವುದಿಲ್ಲ. ಮದುವೆಯ ದಿನದಂದು ಅವರು ತಮ್ಮ ಮಗಳೊಂದಿಗೆ ಈ ಆಚರಣೆಯನ್ನು ಮಾಡುತ್ತಾರೆ. ಮಾಸಾಯಿಯ ಸಂಪ್ರದಾಯಗಳಲ್ಲಿ, ತಮ್ಮ ಪ್ರೀತಿಪಾತ್ರರಿಗೆ ವಿದಾಯ ಹೇಳಲು ಅಥವಾ ಪ್ರೀತಿಯನ್ನು ವ್ಯಕ್ತಪಡಿಸಲು ಮತ್ತು ಅವರು ತಮ್ಮ ಕುಟುಂಬ ಸದಸ್ಯರ ಮೇಲೆ ಉಗುಳುವುದು ಒಂದೇ ಮಾರ್ಗವಾಗಿದೆ. 

ಇದನ್ನೂ ಓದಿ: Rishi Sunak Wife: ಬ್ರಿಟನ್ ರಾಣಿಗಿಂತ ಶ್ರೀಮಂತೆ ರಿಷಿ ಸುನಕ್ ಪತ್ನಿ ಅಕ್ಷತಾ ಮೂರ್ತಿ!

ಈ ಬುಡಕಟ್ಟಿನ ವಿವಾಹದಲ್ಲಿ, ವಧುವಿನ ಮನೆಯವರು ವರದಕ್ಷಿಣೆಯನ್ನು ವರನ ಕುಟುಂಬಕ್ಕೆ ನೀಡುತ್ತಾರೆ. ಇದಾದ ನಂತರ ವಧುವಿನ ತಲೆಯನ್ನು ಬೋಳಿಸಲಾಗುತ್ತದೆ ಮತ್ತು ಆ ಸಮಯದಲ್ಲಿ ಆ ವರ್ಗದ ಅನೇಕ ಹಿರಿಯರು ಸಹ ಇರುತ್ತಾರೆ. ಇದಾದ ನಂತರ ವಧು ತನ್ನ ತಂದೆಯ ಮುಂದೆ ಮಂಡಿಯೂರಿ ಎಲ್ಲ ಹಿರಿಯರಿಂದ ಆಶೀರ್ವಾದ ಪಡೆಯುತ್ತಾಳೆ. ಇಂತಹ ಸಂದರ್ಭದಲ್ಲಿ ಆಶೀರ್ವಾದ ನೀಡುವಾಗ ಮನೆಯ ಹಿರಿಯರು ವಧುವಿನ ತಲೆ ಮತ್ತು ಎದೆಗೆ ಉಗುಳುತ್ತಾರೆ. ಉಗುಳುವ ಸಂಪ್ರದಾಯವನ್ನು ವಧುವಿಗೆ ಮಂಗಳಕರವೆಂದು ನಂಬಲಾಗಿದೆ. ಈ ಪದ್ಧತಿಯನ್ನು ವಧುವಿಗೆ ಮಾತ್ರ ಮಾಡಲಾಗುವುದಿಲ್ಲ, ಹೊಸದಾಗಿ ಹುಟ್ಟಿದ ಮಗುವಿಗೆ ಕೂಡ ಮಾಡಲಾಗುತ್ತದೆ.

ಉಗುಳುವ ಪದ್ಧತಿ ಕೆಲವರಿಗೆ ವಿಚಿತ್ರವಾಗಿ ಕಂಡರೂ ಮಾಸಾಯಿಗಳ ಪಾಲಿಗೆ ಇದು ಗೌರವದ ವಿಚಾರ. ಇಲ್ಲಿ ಉಗುಳುವುದು ಗೌರವದ ವಿಷಯವೆಂದು ಪರಿಗಣಿಸಲಾಗಿದೆ ಮತ್ತು ವಿದೇಶಿಯರೂ ಅಲ್ಲಿಗೆ ಬಂದಾಗ ಅವರನ್ನು ಈ ರೀತಿ ಸ್ವಾಗತಿಸಿ ಅಂಗೈಗೆ ಉಗುಳುತ್ತಾರೆ. ಇದಲ್ಲದೆ, ಈ ಬುಡಕಟ್ಟಿನಲ್ಲಿ, ಮದುವೆಯ ಸಮಯದಲ್ಲಿ ಹುಡುಗಿ ಹೊರಟುಹೋದಾಗ, ಹಿಂತಿರುಗಿ ನೋಡಬಾರದು ಎಂದು ಹೇಳಲಾಗುತ್ತದೆ ಮತ್ತು ಅದೊಂದು ವೇಳೆ ವಧು ಹೀಗೆ ಮಾಡಿದರೆ ಅವಳು ಕಲ್ಲಾಗಬಹುದು ಎಂದು ನಂಬಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News