ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಅದೆಷ್ಟೋ ಮದುವೆಗಳು ರದ್ದಾಗಿತ್ತು. ಇನ್ನೂ ಕೆಲವರು ಮದುವೆಯಾಗಲೇಬೇಕು ಎಂದು ಹಠ ಹಿಡಿದು ಸೈಕಲ್‌ ಹತ್ತಿಕೊಂಡು ಬಂದು ಮದುವೆಯಾದ ಘಟನೆಯೂ ನಡೆದಿತ್ತು. ಅದೆಷ್ಟೋ ಜನ ಮಾಸ್ಕ್‌ ಹಾಕಿಕೊಂಡು ಮದುವೆಗೆ ತೆರಳಿದ್ದರೆ, ಕೆಲವರು ಜೆಸಿಬಿ ಹತ್ತಿಕೊಂಡು ಹೋಗಿ ವಿವಾಹವಾಗಿದ್ದರು.ಇನ್ನೂ ಕೆಲವರು ತಮ್ಮ ಮನೆಯಲ್ಲಿಯೇ ಮದುವೆಯಾದರು. ಇದೀಗ ಕೊರೊನಾ ಹೋಗಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇದರ ಮಧ್ಯೆಯೂ ಒಬ್ಬ ಮದುಮಗ ಭೀಕರ ಪ್ರವಾಹವನ್ನೂ ದಾಟಿಕೊಂಡು ಹೋಗಿ ಮದುವೆಯಾಗಲು ಮುಂದಾಗಿದ್ದಾರೆ. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: CWG Fight Video:ಹಾಕಿ ಪಂದ್ಯದಲ್ಲಿ ಆಟಗಾರರ ಕುಸ್ತಿ: ಕಾಮನ್‌ವೆಲ್ತ್ ಲೈವ್‌ನಲ್ಲಿ ಆಟಗಾರರ ಜಟಾಪಟಿ


ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವೀಡಿಯೋದಲ್ಲಿ ವರನೊಬ್ಬ ತನ್ನ ಇಡೀ ಕುಟುಂಬದೊಂದಿಗೆ ಪ್ರವಾಹದಲ್ಲಿಯೇ ಮದುವೆಯಾಗಲು ಹೊರಟಿರುವುದನ್ನು ಕಾಣಬಹುದು. ಅವನು ಒಬ್ಬನೇ ಅಲ್ಲ, ಅವನೊಂದಿಗೆ ಅನೇಕ ಜನರಿದ್ದಾರೆ. ವರನು ಶೆರ್ವಾನಿ ಧರಿಸಿ, ತಲೆಗೆ ಪೇಟಾವನ್ನು ಹಾಕಿಕೊಂಡು ಓರ್ವ ವ್ಯಕ್ತಿಯ ಸಹಾಯದಿಂದ ಪ್ರವಾಹವನ್ನು ದಾಟಲು ಮುಂದಾಗುತ್ತಿದ್ದಾನೆ. ನೀರಿನಲ್ಲಿ ನೇತಾಡುತ್ತಿದ್ದ ಬಟ್ಟೆಗಳನ್ನು ಒಂದು ಕೈಯಿಂದ ಹಿಡಿದುಕೊಂಡು ನಿಧಾನವಾಗಿ ದಾಟಲು ಯತ್ನಿಸುತ್ತಿದ್ದಾನೆ ವರ. ಕುಟುಂಬದ ಮಹಿಳೆಯರೂ ಸಹ ಅವನ ಹಿಂದೆಯೇ ಹೊರಟಿರುವುದನ್ನು ಕಾಣಬಹುದು. ಇನ್ನು ಮದುಮಗನ ಈ ಉತ್ಸಾಹ ಕಂಡು ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ. 



 


Instagramನಲ್ಲಿ ವೈರಲ್ ಆಗುತ್ತಿರುವ ಈ ವೀಡಿಯೊವನ್ನು nareshsharma5571 ಹೆಸರಿನ ಖಾತೆಯಿಂದ ಹಂಚಿಕೊಳ್ಳಲಾಗಿದೆ. ಈ ವೀಡಿಯೊದೊಂದಿಗೆ ಒಂದು ಹಾಡನ್ನು ಸಹ ಟ್ಯೂನ್ ಮಾಡಲಾಗಿದೆ. ಇದನ್ನು ನಾವೆಲ್ಲರೂ ಕೇಳಲೇಬೇಕು. ವಿಡಿಯೋದಲ್ಲಿ 'ಸಾತ್ ಸಮುಂದರ್ ಪಾರ್ ಮೈನ್ ತೇರೆ ಪೀಚ್ಚೆ ಆ ಗಯಾ' ಹಾಡು ಪ್ಲೇ ಆಗುತ್ತಿದೆ. ಈ ವೀಡಿಯೋ ನೋಡಿದ ಜನರು ಅದ್ಭುತ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. 


ಇದನ್ನೂ ಓದಿ: ಸಾಮಾನ್ಯ ಜನರ ಮೇಲೆ ಮತ್ತೆ ಹಣದುಬ್ಬರದ ಹೊಡೆತ : ರೆಪೋ ದರ ಹೆಚ್ಚಿಸಿದ ಆರ್ ಬಿಐ


ವೀಡಿಯೊವನ್ನು ನೋಡಿದ ಸೋಶಿಯಲ್‌ ಮೀಡಿಯಾ ಬಳಕೆದಾರರು, 'ಇದನ್ನು ನಿಜವಾದ ಪ್ರೀತಿ ಎಂದು ಕರೆಯಲಾಗುತ್ತದೆ' ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು, 'ಏಳು ಸಮುದ್ರಗಳನ್ನು ದಾಟಿದ ನಂತರ ರಾಜಕುಮಾರನಿ ಬಂದ' ಎಂದು ಬರೆದಿದ್ದಾರೆ. ಇನ್ನೊಬ್ಬ 'ಹೇ ಅಣ್ಣ, ಆತುರ ಏನಾಗಿತ್ತು, ಮದುವೆಯ ದಿನಾಂಕವನ್ನು ಬದಲಾಯಿಸಬಹುತ್ತಲ್ವಾ' ಎಂದು ಪ್ರಶ್ನಿಸಿದ್ದಾರೆ. ಅದರಲ್ಲೂ ಇನ್ನೊಬ್ಬ ತ,ಆಷೆಯಾಗಿ ಹೀಗೆ ಬರೆದುಕೊಂಡಿದ್ದಾರೆ. "ಮಳೆಗಾಲದಲ್ಲಿಯೇ ಏಕೆ ಮದುವೆಯಾದೆ. ವರ್ಷ ಪೂರ್ತಿ ಏನು ಮಾಡುತ್ತಿದೆ?" ಎಂದು ಪ್ರಶ್ನಿಸಿದ್ದಾರೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.