ಪುಷ್ಪ ರಾಜ್ ಹಾಡಿಗೆ ರೀಲ್ಸ್ ಮಾಡಿ ಶೇರ್ ಮಾಡಿದ ವಸತಿ ಸಚಿವ ಜಮೀರ್ ಅಹ್ಮದ್ ಖಾನ್: ವೈರಲ್ ವಿಡಿಯೋಗೆ ನೆಟ್ಟಿಗರು ಏನಂದ್ರು?
Viral Video: ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಪುಷ್ಪ... ಪುಷ್ಪ... ಹಾಡಿನ ರೀಲ್ಸ್, ಎಲ್ಲಿ ಹೋದ್ರು ದುಡ್ಡು ಕೊಡುತ್ತಿರುವ ಸಚಿವರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್, ತರಾವರಿ ಕಾಮೆಂಟ್ ಮಾಡುತ್ತಿರುವ ನೆಟ್ಟಿಗರು....
Zameer Ahmed Khan Viral Video: ರಾಜ್ಯ ರಾಜಕಾರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಮೂಡಾ ಹಗರಣ ಸಂಕಷ್ಟ ಎದುರಾಗಿದ್ದು, ಕಾಂಗ್ರೆಸ್ ಹಿರಿಯ ನಾಯಕರು ಸಿಎಂ ಕುರ್ಚಿ ಕಿತ್ತಾಟದಲ್ಲಿ ತಲ್ಲೀನರಾಗಿದ್ದಾರೆ. ಏತನ್ಮಧ್ಯೆ, ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ವಸತಿ ಸಚಿವ ಜಮೀರ್ ಅಹ್ಮದ್ ಖಾನ್ (Housing Minister Zameer Ahmed Khan) ಅವರ ಇಡೀ ದಿನದ ಕಾರ್ಯ ವೈಖರಿಯ ವಿಡಿಯೋಗೆ ಇತ್ತೀಚಿನ ಟ್ರೆಂಡಿಂಗ್ ಗೀತೆ ಪುಷ್ಪ... ಪುಷ್ಪ... ಹಾಡನ್ನು ಸಿಂಕ್ ಮಾಡಿ ರೀಲ್ಸ್ ಮಾಡಲಾಗಿದ್ದು ಇದನ್ನು ಸೋಷಿಯಲ್ ಮೀಡಿಯಾ (Social Media) ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ವೈರಲ್ ಆಗುತ್ತಿದೆ.
ಈ ವೈರಲ್ ವಿಡಿಯೋದಲ್ಲಿ (Viral Video) ಸ್ಟೈಲ್ ಆಗಿ ಸರ್ಕಾರಿ ಕಾರ್ ನಲ್ಲಿ ಪೋಸ್ ಕೊಟ್ಟಿರುವ ಜಮೀರ್ ಖಾನ್, ಎಲ್ಲೇ ಹೋದ್ರು ಜೇಬಿನಿಂದ ದುಡ್ಡು ತೆಗೆದು ಎಣಿಸಿ ಕೊಡುತ್ತಿರುವುದನ್ನು ಕಾಣಬಹುದು. ಸಾರ್ವಜನಿಕರೊಂದಿಗೆ ಮಾತನಾಡುತ್ತಾ ಹಣ ಎಣಿಸಿಕೊಡುವ ಜಮೀರ್, ಸೆಲ್ಫಿ ತೆಗೆದುಕೊಂಡ್ರೂ ಜೇಬಿಂದ ದುಡ್ಡು ಎಣಿಸಿ ಕೊಡುವ ದೃಶ್ಯವನ್ನು ಕಾಣಬಹುದು.
ಏಲಿಯನ್ ಮಗು ನೋಡಿದ್ದೀರಾ! ಶಿಶು ಕಂಡು ಬೆಚ್ಚಿಬಿದ್ದ ವೈದ್ಯರು.. ವೈರಲ್ ಆದ ಈ ಫೋಟೋ ನೋಡಿ
ವಸತಿ ಸಚಿವ ಜಮೀರ್ ಅಹ್ಮದ್ ಖಾನ್: ವೈರಲ್ ವಿಡಿಯೋಗೆ ನೆಟ್ಟಿಗರು ಏನಂದ್ರು?
ಸಚಿವ ಜಮೀರ್ ಅಹ್ಮದ್ ಖಾನ್ ಈ ರೀಲ್ಸ್ ಗೆ (Zameer Ahmed Khan Reels) ಸಾಮಾಜಿಕ ಜಾಲತಾಣದಲ್ಲಿ ಬಾರೀ ಕಾಮೆಂಟ್ಸ್ ಬರುತ್ತಿವೆ. ಎಕ್ಸ್ ಖಾತೆದಾರರೊಬ್ಬರು, "ಸರ್ ಮುಂದಿನ ವಾರ ತಿರುಪತಿ ಟ್ರಿಪ್ ಹೋಗ್ತಿದೀನಿ, ಎರಡು ಸಾವಿರ ಗೂಗಲ್ ಪೇ ಮಾಡಿ ಸರ್" ಅಂತ ಕಾಮೆಂಟ್ ಮಾಡಿದ್ರೆ, ಇನ್ನೋರ್ವ ಎಕ್ಸ್ ಬಳಕೆದಾರರು, "ಹಲೋ ಲೋಕಾಯುಕ್ತ ಆಫೀಸರ್ ಗಳೇ, ಜಮೀರ್ ಮನೆಗೆ ಒಂದ್ಸಲ ವಿಸಿಟ್ ಮಾಡಿ" ಎಂದಿದ್ದಾರೆ.
ಇದನ್ನೂ ಓದಿ- ಅಪ್ಪಾ.. ಅಪ್ಪಾ.. ಎನ್ನುತ್ತ 50 ವರ್ಷದ ವ್ಯಕ್ತಿಯ ಕೈ ಹಿಡಿದ 29ರ ಸುಂದರಿ..! ʼನಮ್ ಹೊಟ್ಟೆ ಎಷ್ಟು ಉರುಸ್ತಾರೋ..ʼ
"ಕೆಲಸ ಮಾಡೋ ತಿಮ್ಮ ಅಂದ್ರೇ, ರೀಲ್ಸ್ ಮಾಡ್ತಿಯಾ..?" ಎಂದು ಒಬ್ಬ ಕಿಚಾಯಿಸಿದರೆ, "ರೀ ಸ್ವಾಮಿ, ಯಾಕ್ರೀ ವಿಡಿಯೋ ಮಾಡಿ ಪೋಸ್ಟ್ ಮಾಡೋ ಹುಚ್ಚು, ಸುಮ್ಮನೆ ಕೆಲಸ ಮಾಡಿ" ಎಂದು ಕಿವಿಮಾತು ಹೇಳಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Facebook Link - https://bit.ly/3Hhqmcj
Youtube Link - https://www.youtube.com/watch?v=kr-YIH866cM
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm
Twitter Link - https://bit.ly/3n6d2R8 ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.