ಮದುವೆ ಮನೆಯಲ್ಲಿ ಸಾಮಾನ್ಯವಾಗಿ ವಧು ಸಾಮಾನ್ಯವಾಗಿ ಸುಮ್ಮನೆ ಕುಳಿತಿರುತ್ತಾಳೆ. ಆ ಸಂದರ್ಭದಲ್ಲಿ ಆಕೆ ಮಾತನಾಡಲು ಹಿಂಜರಿಯುತ್ತಾಳೆ. ಆದರೆ ಇಂದು ನಾವು ನಿಮಗೆ ಗನ್ ಹಿಡಿದು ನೇರವಾಗಿ ವೇದಿಕೆಗೆ ಹೋದ ವಧುವನ್ನು ಪರಿಚಯಿಸಲಿದ್ದೇವೆ. ಅಷ್ಟೇ ಅಲ್ಲ, ಸುತ್ತ ನಿಂತಿದ್ದವರು ಬೆಚ್ಚಿ ಬೀಳುವಂತೆ ವಧು  ಬಂದೂಕಿನಿಂದ ಗುಂಡು ಹಾರಿಸಿದ್ದಾಳೆ. ವಧುವಿನ ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ಆಗಿ ವೈರಲ್ ಆಗುತ್ತಿದೆ. ಬಹುತೇಕರು ವಧುವಿನ ಈ ವಿಡಿಯೋ ಕಂಡು ಆಕೆಯ ಧೈರ್ಯವನ್ನು ಮೆಚ್ಚಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Viral Video : ಸದ್ದಿಲ್ಲದೆ ಮರಿಗಳ ನುಂಗಿದ ಹಾವು, ಕರುಳು ಹಿಂಡುವಂತಿದೆ ತಾಯಿ ಪಕ್ಷಿಯ ರೋಧನೆ


ಪ್ರತಿಯೊಬ್ಬರೂ ಸಾಮಾನ್ಯವಾಗಿ ಮದುವೆಯ ಸಮಯದಲ್ಲಿ ಹುಡುಗಿ ನಾಚಿಕೆಪಡುವುದನ್ನು ನೋಡುತ್ತಾರೆ. ಆದರೆ ಈ ವಧು ಗನ್ ತೆಗೆದುಕೊಂಡು ವೇದಿಕೆಯ ಮೇಲೆಯೇ ಗುಂಡು ಹಾರಿಸಿದ್ದಾಳೆ. ಇದು ನೆಟ್ಟಿಗರನ್ನು ಶಾಕ್ ಆಗುವಂತೆ ಮಾಡಿದೆ. ವೀಡಿಯೊದಲ್ಲಿ, ವಧು ಗನ್ನೊಂದಿಗೆ ವೇದಿಕೆಯ ಮೇಲೆ ನಿಂತಿರುವುದನ್ನು ತೋರಿಸಲಾಗಿದೆ.ನಂತರ ಆಕೆ ಗನ್ ಅನ್ನು ಲೋಡ್ ಮಾಡಿ ಗುಂಡು ಹಾರಿಸುತ್ತಾಳೆ. ಗುಂಡು ಹಾರಿಸಿದ ನಂತರ, ವಧು ತನ್ನ ಬಂದೂಕನ್ನು ಹತ್ತಿರದಲ್ಲಿ ನಿಂತಿದ್ದವನಿಗೆ ಕೊಡುತ್ತಾಳೆ,


ವೀಡಿಯೊವನ್ನು ಇಲ್ಲಿ ವೀಕ್ಷಿಸಿ:



 


 


ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಈ ವೀಡಿಯೊವನ್ನು ನೋಡಿದವರು ಈ ವೀರ ವಧುವನ್ನು ಹೊಗಳದೆ ಇರಲು ಸಾಧ್ಯವಿಲ್ಲ. ಇಂತಹ ಹುಡುಗಿಯನ್ನು ಮದುವೆಯಾಗಲು ಬಯಸಿದರೆ, ಯಾವುದಕ್ಕೂ ಭಯಪಡಬಾರದು ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. ಅದೇ ಸಮಯದಲ್ಲಿ, ವಧು ಆತ್ಮರಕ್ಷಣೆ ಕಲಿತಂತೆ ತೋರುತ್ತಿದೆ ಎಂದು ಮತ್ತೊಬ್ಬ ಬಳಕೆದಾರರು ಹೇಳಿದ್ದಾರೆ. 


ಇದನ್ನೂ ಓದಿ: ಕೇವಲ ಒಂದು ಹಪ್ಪಳಕ್ಕಾಗಿ ರಣಾಂಗಣವಾಯಿತು ಮದುವೆ ಮನೆ, ಹೊಡೆದಾಟದ ವಿಡಿಯೋ ಇಲ್ಲಿದೆ


ಲೆಹೆಂಗಾ ಹಾಗೂ ಫುಲ್ ಮೇಕಪ್ ನಲ್ಲಿ ವಧುವಿನ ಈ ರೀತಿ ವೇದಿಕೆ ಮೇಲೆ ಬಂದೂಕಿನಿಂದ ಗುಂಡು ಹಾರಿಸಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಇದೇ ಕಾರಣಕ್ಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಈ ವಧುವಿನ ಬಗ್ಗೆ ಚರ್ಚೆ ಜೋರಾಗಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.