Wedding Fight Viral Video : ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು ಎನ್ನುವ ಮಾತಿದೆ. ಈ ಎರಡೂ ಕಾರ್ಯಕ್ಕೆ ತಗಲುವ ಖರ್ಚು ಅಷ್ಟಿಷ್ಟಲ್ಲ. ಕೈಯಲ್ಲಿರುವ ದುಡ್ಡು ಹೇಗೆ ಮಾಯವಾಗುತ್ತದೆ ಎನ್ನುವುದೇ ತಿಳಿಯುವುದಿಲ್ಲ. ಮದುವೆ ವಿಚಾರಕ್ಕೆ ಬಂದರೆ ಖರ್ಚು ಮಾತ್ರವಲ್ಲ ನೆಂಟರಿಷ್ಟರನ್ನು ಸಂಭಾಳಿಸುವುದು ಕೂಡಾ ದೊಡ್ಡ ಸಾಧನೆಯೇ. ಸಣ್ಣ ಸಣ್ಣ ಕೆಲಸದಲ್ಲಿ ತಪ್ಪು ಹುಡುಕುವ ಗುಂಪು ಒಂದಿರುತ್ತದೆ. ಹಾಗಾಗಿ ಮದುವೆ ಮನೆಯಲ್ಲಿ ಅಂಥವರನ್ನು ಸಮಾಧಾನ ಪಡಿಸಿ ಕೂರಿಸುವ ಕೆಲಸ ಕೂಡಾ ಬಹಳ ದೊಡ್ಡದು.
ಮದುವೆ ಮನೆ ಎಂದರೆ ಅಲ್ಲಿ ಸಂತೋಷ ಸಂಭ್ರಮ ಎಷ್ಟಿರುತ್ತದೋ, ಒಂದು ರೀತಿಯ ಭಯ, ಆತಂಕ ಕೂಡಾ ಅಷ್ಟೇ ಇರುತ್ತದೆ. ಎಲ್ಲಿ ಯಾರು ಮಾಡುವ ಕೆಲಸ ತಪ್ಪಾಗುತ್ತದೆಯೋ? ಏನಾದರೂ ಹೆಚ್ಚು ಕಡಿಮೆ ಆಗುತ್ತದೆಯೋ ಎನ್ನುವ ತಳಮಳ ಮದುವೆ ಮುಗಿಯುವ ತನಕವೂ ಮನೆಯವನ್ನು ಕಾಡುತ್ತಲೇ ಇರುತ್ತದೆ. ಈ ಆತಂಕ ಹೆಣ್ಣಿನ ಮನೆಯವರಿಗೆ ತುಸು ಜಾಸ್ತಿಯೇ ಇರುತ್ತದೆ ಎಂದರೆ ತಪ್ಪಾಗುವುದಿಲ್ಲ. ಗಂಡಿನ ಕಡೆಯವರ ಪ್ರತಿಯೊಂದು ಬೇಡಿಕೆಗಳನ್ನು ಚಾಚೂ ತಪ್ಪದೆ ಪೂರೈಸಲು ಹೆಣ್ಣಿನ ಕಡೆಯವರು ಶಕ್ತಿ ಮೀರಿ ಪ್ರಯತ್ನಿಸುತ್ತಾರೆ. ಆದರೂ ಏನಾದರೊಂದು ವಿಷಯವನ್ನು ಕೆದಕಿ ತೆಗೆಯಲು ಅಲ್ಲಿ ಯಾರಾದರೊಬ್ಬರು ಇರುತ್ತಾರೆ.
ಇದನ್ನೂ ಓದಿ : Viral Video : ನಾಗರ ಹಾವು - ಮುಂಗುಸಿ ಕಾದಾಟದ ವಿಡಿಯೋ ವೈರಲ್
ಒಮ್ಮೊಮ್ಮೆ ಕೆಲ ಮದುವೆಗಳಲ್ಲಿ ಅದು ಸರಿಯಿಲ್ಲ, ಇದು ಸರಿಯಿಲ್ಲ ಎಂದು ಆರಂಭವಾಗುವ ಮಾತು ಕೊನೆಗೆ ಹೊಡೆದಾಟದವರೆಗೆ ತಲುಪುವುದನ್ನು ನೋಡಿರುತ್ತೇವೆ. ಅಂಥದ್ದೇ ಒಂದು ಘಟನೆ ಕೇರಳದ ಮದುವೆ ಮನೆಯಲ್ಲಿ ನಡೆದಿದೆ. ಇಲ್ಲಿ ಜಗಳ ಆರಂಭವಾದದ್ದು ಕೇವಲ ಹಪ್ಪಳದ ವಿಚಾರವಾಗಿ. ಗಂಡಿನ ಕಡೆಯವರು ಊಟಕ್ಕೆ ಕುಳಿತಿದ್ದಾಗ ಹೆಚ್ಚುವರಿ ಹಪ್ಪಳ ನೀಡುವಂತೆ ಕೇಳಿದ್ದಾರೆ. ಆದರೆ, ಒಮ್ಮೆ ಹಪ್ಪಳ ಕೊಟ್ಟಾಗಿದೆ. ಮತ್ತೆ ಮತ್ತೆ ನೀಡಲು ಸಾಧ್ಯವಿಲ್ಲಎಂದು ಅಡುಗೆ ಎಜೆನ್ಸಿಯವರಿಂದ ಉತ್ತರ ಬಂದಿದೆ. ಹೀಗೆ ಮೊದಲು ಬರೀ ಮಾತಿನ ಮೂಲಕ ಜಗಳ ಆರಂಭವಾಗಿದೆ. ಆದರೆ ನೋಡ ನೋಡುತ್ತಿದ್ದಂತೆಯೇ ಹೊಡೆದಾಟದ ಮಟ್ಟವನ್ನು ತಲುಪಿ ಬಿಟ್ಟಿದೆ.
In the great 100% literate state of Kerala, a fist fight broke out at a wedding after friends of the bridegroom demanded papad during the feast. This triggered a verbal spat and ended up in an ugly brawl. No wonder Mallus belo papad. 😆 pic.twitter.com/HgkEUYMwfy
— Rakesh Krishnan Simha (@ByRakeshSimha) August 29, 2022
ವೈರಲ್ ಆಗಿರುವ ವಿಡಿಯೋದಲ್ಲಿ ಒಬ್ಬರಿಗೊಬ್ಬರು ಶೂ ಮತ್ತು ಚಪ್ಪಲಿಯಿಂದ ಹೊಡೆಯುತ್ತಿರುವುದನ್ನು ಕಾಣಬಹುದು. ಮಾತ್ರವಲ್ಲ ಕುರ್ಚಿ ಟೇಬಲ್‌ಗಳನ್ನು ಎತ್ತಿ ಬಿಸಾಡಿ ಹೊಡೆದಾಡಿಕೊಂಡಿದ್ದಾರೆ. ಈ ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ. ಒಂದು ಕ್ಷಣಕ್ಕೆ ಮದುವೆ ಮನೆ ಯುದ್ದ ಭೂಮಿಯಾಗಿ ಬದಲಾಗಿ ಹೋಗಿದೆ.
ಇದನ್ನೂ ಓದಿ : Viral Video : 14 ಸಿಂಹಿಣಿಗಳ ನಡುವೆ ಒಂಟಿ ಸಲಗ..! ಯಾರು ಗೆಲ್ಲುತ್ತಾರೆ ಈ ಕದನ?
ಅಲಪ್ಪುಳದ ಮುತ್ತಮ್‌ನಲ್ಲಿರುವ ಮದುವೆ ಮಂಟಪದಲ್ಲಿ ಈ ಘಟನೆ ನಡೆದಿದೆ. ಆಲಪ್ಪುಳ ಪೊಲೀಸರು 10 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದು, ಅವರ ಗುರುತು ಪತ್ತೆ ಹಚ್ಚಲಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.