Viral News : ಇತ್ತೀಚಿಗೆ ಹುಚ್ಚುಚ್ಚಾಗಿ ರೀಲ್ಸ್‌ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಹುಡುಗಿಯರಂತೂ ಸಿಕ್ಕ ಸಿಕ್ಕಲ್ಲಿ ನಿಂತುಕೊಂಡು ರೀಲ್ಸ್​ ಮಾಡುತ್ತಿರುತ್ತಾರೆ. ಸೋಷಿಯಲ್‌ ಮೀಡಿಯಾಲದಲ್ಲಿ ರೀಲ್ಸ್‌, ಶಾರ್ಟ್‌ ವಿಡಿಯೋಗಳ ಸಂಖ್ಯೆ ಅಧಿಕವಾಗುತ್ತಿವೆ. ಲೈಕ್ಸ್‌ಗಾಗಿ ಯುವಕ ಯುವತಿಯರು ಮಾಡುವ ಮಂಗನಾಟ ಕೆಲವರಿಗೆ ಇರಿಸುಮುರಿಸು ಉಂಟು ಮಾಡುತ್ತಿದೆ. ಒವರ್‌ ಆದ್ರೆ, ಪೊಲೀಸರಿಗೆ ಅತಿಥಿಯಾಗ್ಬೇಕಾಗುತ್ತದೆ. 


COMMERCIAL BREAK
SCROLL TO CONTINUE READING

ಇದೀಗ ಯುವತಿಯೊಬ್ಬಳು ರಿಲ್ಸ್‌ ಮಾಡಿ ಫಜೀತಿಗೆ ಸಿಲುಕಿದ್ದಾಳೆ. ರೀಲ್ಸ್​ ಮಾಡಿದ ಬ್ಯೂಟಿಗೆ ಪೊಲೀಸರು 17 ಸಾವಿರ ರೂಪಾಯಿ ದಂಡ ಹಾಕಿ ಶಾಕ್‌ ನೀಡಿದ್ದಾರೆ. ಅಸಲಿಗೆ ಈ ಕಥೆ ಏನು ಅಂತ ನೋಡೋದಾದ್ರೆ, ವೈಶಾಲಿ ಚೌಧರಿ ಎಂಬುವರು ನಡು ಹೆದ್ದಾರಿಯಲ್ಲಿ ಕಾರ್‌ ನಿಲ್ಲಿಸಿ ರೀಲ್ಸ್​ ಮಾಡಿದ್ದಾಳೆ. ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ಈ ಕಾರಣಕ್ಕೆ ಗಾಝಿಯಾಬಾದ್​​ ಟ್ರಾಫಿಕ್​ ಪೊಲೀಸರು 17 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.



ಇದನ್ನೂ ಓದಿ: Republic day 2023: ಗಣರಾಜ್ಯೋತ್ಸವ ಸಂಭ್ರಮಕ್ಕೆ ಸಾಕ್ಷಿಯಾಗಲಿದೆ ವಿಶೇಷ ಯುದ್ದ ವಿಮಾನ


ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಹಿಯಾಬಾದ್​ ಪೊಲೀಸ್​ಠಾಣೆಯಲ್ಲಿ ದೂರು ದಾಖಲಾಗಿತ್ತು. ವಿಚಾರಿಸಿದಾಗ​ ವೈಶಾಲಿ ತಪ್ಪು ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ. ವೈಶಾಲಿ ಚೌಧರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ 650K ಫಾಲೋವರ್ಸ್‌ ಇದ್ದಾರೆ. ಹೆಚ್ಚಿನ ಲೈಕ್ಸ್‌ಗಾಗಿ ನಡುರಸ್ತೆಯಲ್ಲಿ ಅಪಾಯವನ್ನೂ ಲೆಕ್ಕಿಸದೆ ಹುಚ್ಚಾದ ಮಾಡಿದ ಈಕೆಗೆ ಟ್ರಾಫಿಕ್ ಪೊಲೀಸರು 17,000 ರೂ. ದಂಡ ವಿಧಿಸಿ ಪಾಠ ಕಲಿಸಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.