Kaatera House Full In Oman: ಕನ್ನಡ ಭಾಷೆಯಲ್ಲಿ ಬಿಡುಗಡೆಯಾದ ಕಾಟೇರ ಚಿತ್ರ ಮೊದಲ ವಾರದಲ್ಲೇ 100 ಕೋಟಿ ರೂಪಾಯಿ ಕ್ಲಬ್ ಸೇರಿತ್ತು. ಕಾಟೇರ ಚಿತ್ರದಲ್ಲಿ ನಟ ದರ್ಶನ್‌ ಅಭಿನಯದಿಂದ ಹವಾ ಜೋರಾಗಿದ್ದು, ಸಿನಿಮಾ ಥಿಯೇಟರ್, ಮಾಲ್‌ಗಳ ಮುಂದೆ ಕಿಕ್ಕಿರಿದು ನಿಂತಿರುವ ಅಭಿಮಾನಿಗಳು ದರ್ಶನ್‌ ಕಟೌಟ್‌ಗೆ ಹಾರ ಹಾಕಿ, ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ. ಡಿಬಾಸ್‌ ಡಿಬಾಸ್‌ ಎಂದು ಜಯಘೋಷ ಹಾಕುತ್ತಾ ಹುಚ್ಚೆದ್ದು ಕುಣಿಯುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಕಾಟೇರ ಚಿತ್ರ ಕರ್ನಾಟಕದಲ್ಲಿ ಮಾತ್ರವಲ್ಲದೇ ಜೊತೆಗೆ ನೆರೆಯ ರಾಜ್ಯದಲ್ಲೂ ರಿಲೀಸ್ ಆಗಿದ್ದು, ಅಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸದ್ಯ ಗೋವಾ, ಆಂಧ್ರಪ್ರದೇಶ, ತಮಿಳು ನಾಡಿನಲ್ಲೂ ಚಿತ್ರ ಬಿಡುಗಡೆಯಾಗಿದ್ದು, ಅಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಥಿಯೇಟರ್ ಆಗಮಿಸಿದ್ದಾರೆ. ಸದ್ಯ ಕಾಟೇರ ಸಿನಿಮಾಗೆ ಅತ್ಯುತ್ತಮ ರೆಸ್ಪಾನ್ಸ್ ಬಂದಿರುವ ಹಿನ್ನೆಲೆಯಲ್ಲಿ ವಿದೇಶದಲ್ಲೂ ಚಿತ್ರವನ್ನು ರಿಲೀಸ್ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಳ್ಳುತ್ತಿತ್ತು.


ಕಿಚ್ಚ-ದಚ್ಚು ಫ್ಯಾನ್ಸ್‌ಗೆ ಗುಡ್‌ ನ್ಯೂಸ್:‌ ಕಾಟೇರ ಸಿನಿಮಾ ನೋಡಲಿದ್ದಾರಂತೆ ಸುದೀಪ್!


ಅದರಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕಾಟೇರ' ಚಿತ್ರ ದುಬೈನಲ್ಲಿ ತೆರೆಕಂಡಿದ್ದು, ಸದ್ಯ ವಿದೇಶದಲ್ಲಿಯೂ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದೀಗ ಒಮನ್ ಥಿಯೇಟರ್ ಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಸದ್ಯ ವಿಡಿಯೋ ವೈರಲ್‌ ಆಗಿದೆ. ಆಸ್ಟ್ರೇಲಿಯಾ ಮತ್ತಿತರ ಕಡೆಗಳಲ್ಲಿಯೂ ಕಾಟೇರ ಸಿನಿಮಾ ಪ್ರದರ್ಶನವಾಗುತ್ತಿದೆ. ವಿದೇಶದಲ್ಲಿರುವ ಇರುವ ಕನ್ನಡಿಗ ಹಾಗೂ ಸೋಶಿಯಲ್ ಮೀಡಿಯಾ ಇನ್ಫೊಲೆನ್ಸರ್ ಎಂ.ಎನ್. ವಿ. ಗೌಡ ಕಾಟೇರ ಚಿತ್ರ ಆಸ್ಟ್ರೇಲಿಯಾಕ್ಕೆ ಬಂದಿದೆ ಅಂತಾ ಹೇಳಿಕೊಂಡಿದ್ದಾರೆ.


ಡಿಸೆಂಬರ್ 29ರಂದು ತೆರೆಕಂಡಿದ್ದ ಕಾಟೇರ ಚಿತ್ರ ಬಿಡುಗಡೆಯಾದ ಮೊದಲ ದಿನವೇ 19.79 ಕೋಟಿ ರೂ. ಗಳಿಸಿತ್ತು. ಆರನೇ ದಿನಕ್ಕೆ 9.78 ಕೋಟಿ ರೂ. ಗಳಿಸುವ ಮೂಲಕ ಚಿತ್ರವು ಒಟ್ಟು 95.36 ಕೋಟಿ ರೂ. ಸಂಗ್ರಹಿಸಿ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಬರೆಯುತ್ತಾ ಮುನ್ನುಗುತ್ತಿದೆ. ಕೆಲವು ದಿನಗಳ ಹಿಂದೆ ನಡೆದ ಕಾಟೇರ ಸೆಲೆಬ್ರೆಟಿ ಶೋ ಸಹ ನಡೆದಿದ್ದು, ಅಲ್ಲಿಯೂ ಸಹ ಹಲವಾರು ಗಣ್ಯರು ಒಳ್ಳೆಯ ಪ್ರತಿಕ್ರಿಯೆ ನೀಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.