King Cobra Video: ಕೊಳಕ ಮಂಡಲ ಹಾವನ್ನು ನಾಗರ ಹಾವೊಂದು ಜೀವಂತವಾಗಿ ನುಂಗಿದ ಕೆಲ ಹೊತ್ತಿನ ನಂತರ ಸರ್ಪವು ಜೀವಂತವಾಗಿ ಹೊರಬಂದಿರುವ ಘಟನೆ ನಡೆದಿದೆ. ಈ ವಿಡಿಯೋ ಸದ್ಯ  ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಆರು ಅಡಿ ಉದ್ದದ ನಾಗರ ಹಾವು, ಕೊಳಕ ಮಂಡಲ ಹಾವನ್ನು ಜೀವಂತವಾಗಿ ನುಂಗುತ್ತದೆ. ಈ ಘಟನೆ ಒಡಿಶಾದ ಬಂಕಿಯಲ್ಲಿ ನಡೆದಿದೆ ಎಂದು ಹೇಳಲಾಗ್ತಿದೆ. ಈ ಪ್ರದೇಶದಲ್ಲಿ ವಾಸಿಸುವ ಜನರು ಪರಿಸ್ಥಿತಿಯನ್ನು ನಿಭಾಯಿಸಲು ಹಾವು ರಕ್ಷಣಾ ತಂಡಕ್ಕೆ ಕರೆ ಮಾಡಿದರು. ವರದಿಗಳ ಪ್ರಕಾರ, ಹಾವುಗಳನ್ನು ನಂತರ ಅವುಗಳ ನೈಸರ್ಗಿಕ ಆವಾಸಸ್ಥಾನದಲ್ಲಿ ಬಿಡಲಾಯಿತು. ನಾಗರಹಾವಿನ ನ್ಯೂರೋಟಾಕ್ಸಿಕ್ ವಿಷದಿಂದ ತಪ್ಪಿಸಿಕೊಳ್ಳಲು ಕೊಳಕ ಮಂಡಲ ಹಾವಿಗೆ ಕಷ್ಟವಾಗುತ್ತದೆ ಎಂದು ತಜ್ಞರು ನಂಬಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Viral Video : ಮೊಸಳೆಯ ಮೇಲೆ ಚಿರತೆ ದಾಳಿ.. ರಣಬೇಟೆಯಲ್ಲಿ ಗೆದ್ದವರು ಯಾರು? ವಿಡಿಯೋ ನೋಡಿ


ಅಪಾಯಕಾರಿ ಹಾವನ್ನು ಬಾಯಲ್ಲಿ ನುಂಗಿದ್ದ ನಾಗರ ಹಾವು ಇದೀಗ ಬಯಲು ಪ್ರದೇಶದಲ್ಲಿ ಉಗುಳುತ್ತಿರುವುದು ವಿಡಿಯೋದಲ್ಲಿ ಕಂಡು ಬರುತ್ತಿದೆ. ಕೆಲವು ಸೆಕೆಂಡುಗಳ ಈ ವಿಡಿಯೋ ನೋಡಿದ ಯಾರನ್ನಾದರೂ ಹೆದರಿಸಬಹುದು. ಈ ವಿಡಿಯೋದಲ್ಲಿ ಹಾವಿನ ಘಟನೆಯನ್ನು ನೋಡಿದ ಸ್ಥಳೀಯರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಆದರೆ, ಸುತ್ತಮುತ್ತಲಿನ ಜನರು ಇದರಿಂದ ಭಯಭೀತರಾಗಿದ್ದರು. ಜನರು ಹಾವು ಹಿಡಿಯುವವರಿಗೆ ಕರೆ ಮಾಡಿದ್ದು, ನಂತರ ರಕ್ಷಣಾ ತಂಡ ಬಂದು ಎರಡೂ ಉರಗಗಳನ್ನು ರಕ್ಷಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಈ ಘಟನೆಯನ್ನು ನೋಡಿದ ಜನರು ಆಶ್ಚರ್ಯಚಕಿತರಾಗಿದ್ದಾರೆ.


ವಿಡಿಯೋ ನೋಡಿ:


ಸೀರೆಯುಟ್ಟು ಫುಟ್‌ಬಾಲ್‌ ಆಡಿದ ಸಂಸದೆ, ವಿಡಿಯೋ ವೈರಲ್‌


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.