ಕೋತಿಯನ್ನು ಬೇಟೆಯಾಡಿದ ಚಿರತೆ ವೈರಲ್ ವಿಡಿಯೋ: ಪ್ರಾಣಿಗಳೆಂದರೆ ಏನೋ ಒಂದು ರೀತಿಯ ಆಕರ್ಷಣೆ. ಹಲವರಿಗೆ ಸಾಕು ಪ್ರಾಣಿಗಳೆಂದರೆ ಹೆಚ್ಚು ಪ್ರೀತಿ. ಇನ್ನೂ ಕೆಲವರಿಗೆ ಭಯಾನಕ ಕಾಡು ಪ್ರಾಣಿಗಳ ಮೋಜು, ಮಸ್ತಿ, ಬೇಟೆ ನೋಡುವುದೆಂದರೆ ಒಂದು ರೀತಿಯ ಕುತೂಹಲ. ಮೊದಲೆಲ್ಲಾ ಇದಕ್ಕಾಗಿ ಕೆಲವು ಚಾನಲ್ಗಳನ್ನು ಅವಲಂಬಿಸಬೇಕಿತ್ತು. ಆದರೆ ಇದು ಇಂಟರ್ನೆಟ್ ಯುಗ, ನಮಗೆ ಬೇಕಾಗಿದ್ದೆಲ್ಲಾ ಬೆರಳ ತುದಿಯಲ್ಲೇ ಸಿಗುತ್ತದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಅವುಗಳಲ್ಲಿ ಕಾಡಿನ ಪ್ರಾಣಿಗಳ ವಿಡಿಯೋಗಳು ಸೇರಿವೆ. ಇತ್ತೀಚಿಗೆ ಟ್ವಿಟ್ಟರ್‌ನಲ್ಲಿ ಕೋತಿಯನ್ನು ಬೇಟೆಯಾಡಿದ ಚಿರತೆ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದೆ. ಈ ಅಪರೂಪದ ಭಯಾನಕ ವಿಡಿಯೋವನ್ನು ಮಧ್ಯಪ್ರದೇಶದ ಪನ್ನಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಚಿತ್ರೀಕರಿಸಲಾಗಿದೆ ಎಂದು ತಿಳಿದುಬಂದಿದೆ.


COMMERCIAL BREAK
SCROLL TO CONTINUE READING

ಮರ ಹತ್ತಿದ ಮಂಗನ ಮೇಲೆ ಚಿರತೆ ದಾಳಿ:
ಸಣ್ಣ ವಿಡಿಯೋ  ಕ್ಲಿಪ್‌ನಲ್ಲಿ ಹಸಿದ ಚಿರತೆ ಮರವನ್ನು ಹತ್ತಿ ಕೋತಿಯ ಮೇಲೆ ದಾಳಿ ಮಾಡುವುದನ್ನು ಕಾಣಬಹುದು.   ಮರದಿಂದ ಇಳಿಯುವಾಗ ಚಿರತೆ ತನ್ನ ಬೇಟೆಯನ್ನು ಬಾಯಿಯಲ್ಲಿ ಬಿಗಿಯಾಗಿ ಹಿಡಿದುಕೊಂಡಿರುವುದು ಕಂಡುಬರುತ್ತದೆ. 


ಇದನ್ನೂ ಓದಿ- Parrot Video: ಟೀಗಾಗಿ ಹಿಂದಿಯಲ್ಲಿ 'ಅಮ್ಮಾ' ಎಂದು ಕರೆದ ವಿದೇಶಿ ಗಿಳಿ, ಅಮ್ಮನ ಉತ್ತರ ಕೇಳಿ ಮನಸೋತ ನೆಟ್ಟಿಗರು


ಪನ್ನಾ ಟೈಗರ್ ರಿಸರ್ವ್ ಅಧಿಕಾರಿಗಳು ಈ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ ಮತ್ತು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೊವನ್ನು ಹಂಚಿಕೊಂಡ ಅವರು, 'ಪನ್ನಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಚಿರತೆ ಮಂಗಗಳನ್ನು ಬೇಟೆಯಾಡುವ ಅಪರೂಪದ ದೃಶ್ಯ' ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ.


ಭಯಾನಕ ವಿಡಿಯೋ ಕಂಡು ಬೆಚ್ಚಿಬಿದ್ದ ನೆಟ್ಟಿಗರು:
ಟ್ವಿಟರ್‌ನಲ್ಲ ಹಂಚಿಕೊಂಡ ನಂತರ, ಈ ವೀಡಿಯೊವನ್ನು ಇದುವರೆಗೂ 3,000 ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಇದಲ್ಲದೆ, ನೂರಾರು ನೆಟ್ಟಿಗರು ಇದನ್ನು ಲೈಕ್ ಮಾಡಿದ್ದಾರೆ. ಈ ಭಯಾನಕ ವೀಡಿಯೊವನ್ನು ನೋಡಿದ ತಕ್ಷಣ ಇಂಟರ್ನೆಟ್ ಬಳಕೆದಾರರು ಆಶ್ಚರ್ಯಚಕಿತರಾದರು. ಒಬ್ಬ ಬಳಕೆದಾರರು, 'ಚಿರತೆ ತನ್ನ ಬೇಟೆಯನ್ನು ಹೇಗೆ ಬೇಟೆಯಾಡುತ್ತದೆ ಎಂಬುದನ್ನು ಹಂಚಿಕೊಂಡ ವೀಡಿಯೊದಲ್ಲಿ ಕಾಣಬಹುದು. ಮರದಿಂದ ಕೆಳಗಿಳಿದ ಚಿರತೆ ಬಾಯಲ್ಲಿ ಮಂಗನ ಶವವಿದ್ದು, ನೋಡಿದರೆ ಭಯವಾಗುತ್ತದೆ ಎಂದು  ಬರೆದಿದ್ದಾರೆ. ಈ ವಿಡಿಯೋ ನೋಡಿ ಮತ್ತೊಬ್ಬರು ‘ಅದ್ಭುತ’ ಎಂದು ಬರೆದಿದ್ದಾರೆ.


ಇದನ್ನೂ ಓದಿ- Crocodile Video- ನೀರಿನಲ್ಲಿ ಮೊಸಳೆಯೊಂದಿಗೆ ವ್ಯಕ್ತಿ ನೃತ್ಯ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.