Crocodile Video- ನೀರಿನಲ್ಲಿ ಮೊಸಳೆಯೊಂದಿಗೆ ವ್ಯಕ್ತಿ ನೃತ್ಯ!

Crocodile Viral video: ಅಪಾಯಕಾರಿ ಮೊಸಳೆ ಮತ್ತು ವ್ಯಕ್ತಿಗೆ ಸಂಬಂಧಿಸಿದ ವಿಡಿಯೋವನ್ನು ಕಡಿಮೆ ಸಮಯದಲ್ಲಿ ಸಾವಿರಾರು ಬಾರಿ ನೋಡಲಾಗಿದೆ ಮತ್ತು ಹೆಚ್ಚಿನ ಸಂಖ್ಯೆಯ ಜನರು ಇದಕ್ಕೆ ಪ್ರತಿಕ್ರಿಯೆಯನ್ನೂ ನೀಡುತ್ತಿದ್ದಾರೆ.

Written by - Yashaswini V | Last Updated : Jun 3, 2022, 01:26 PM IST
  • ಕೊಳದ ಮಧ್ಯೆ ನಿಂತಿರುವ ವ್ಯಕ್ತಿ ಬಳಿಗೆ ಅಪಾಯಕಾರಿ ಮೊಸಳೆ ಬಂದಾಗ ಏನಾಗಬಹುದು?
  • ಬೃಹತ್ ಮೊಸಳೆ ಆತನ ಸಮೀಪಕ್ಕೆ ಬಂದಾಗ ವ್ಯಕ್ತಿಯ ಮೇಲೆ ದಾಳಿ ಮಾಡಿರಬಹುದು ಎಂದು ನೀವು ಯೋಚಿಸುತ್ತಿದ್ದೀರಾ...
  • ಆಘಾತಕಾರಿ ವಿಡಿಯೋದಲ್ಲಿನ ಈ ದೃಶ್ಯವನ್ನು ನೀವೂ ಒಮ್ಮೆ ನೋಡಿ...
Crocodile Video- ನೀರಿನಲ್ಲಿ ಮೊಸಳೆಯೊಂದಿಗೆ ವ್ಯಕ್ತಿ ನೃತ್ಯ! title=
Crocodile dance with man video

ಮೊಸಳೆಯ ವೈರಲ್ ವಿಡಿಯೋ: ಇಂಟರ್ನೆಟ್‌ನ ಬೆರಗುಗೊಳಿಸುವ ಜಗತ್ತಿನಲ್ಲಿ ಯಾವಾಗ ಎಂತಹ ವಿಡಿಯೋ ವೈರಲ್ ಆಗುತ್ತದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಕೆಲವೊಮ್ಮೆ ಅಂತಹ ವಿಡಿಯೋಗಳು ಮನಸ್ಸನ್ನು ಸಂತೋಷಪಡಿಸಿದರೆ, ಇನ್ನೂ ಕೆಲವು ಬಾರಿ ಅವು ಎದೆಯಲ್ಲಿ ನಡುಕ ಹುಟ್ಟಿಸುವಂತೆ ಇರುತ್ತವೆ. ಇದೀಗ ಅಂತಹದ್ದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ಅಪಾಯಕಾರಿ ಮೊಸಳೆ ಮತ್ತು ಮನುಷ್ಯನಿಗೆ ಸಂಬಂಧಿಸಿದ್ದು, ಇದನ್ನು ಕಡಿಮೆ ಸಮಯದಲ್ಲಿ ಸಾವಿರಾರು ಬಾರಿ ನೋಡಲಾಗಿದೆ ಮತ್ತು ಹೆಚ್ಚಿನ ಸಂಖ್ಯೆಯ ಜನರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. 

ವ್ಯಕ್ತಿಯು ಮೊಸಳೆಯೊಂದಿಗೆ ನೃತ್ಯ ಮಾಡಲು ಪ್ರಾರಂಭಿಸಿದಾಗ...
ಕೊಳದ ಮಧ್ಯೆ ನಿಂತಿರುವ ವ್ಯಕ್ತಿ ಬಳಿಗೆ ಅಪಾಯಕಾರಿ ಮೊಸಳೆ ಬಂದಾಗ ಏನಾಗಬಹುದು? ಬೃಹತ್ ಮೊಸಳೆ ಆತನ ಸಮೀಪಕ್ಕೆ ಬಂದಾಗ ವ್ಯಕ್ತಿಯ ಮೇಲೆ ದಾಳಿ ಮಾಡಿರಬಹುದು ಎಂದು ನೀವು ಯೋಚಿಸುತ್ತಿದ್ದರೆ... ಸ್ವಲ್ಪ ತಡೆಯಿರಿ... ವಾಸ್ತವವಾಗಿ, ಮೊಸಳೆಯು ವ್ಯಕ್ತಿಯ ಮೇಲೆ ದಾಳಿ ಮಾಡಲಿಲ್ಲ, ಬದಲಿಗೆ ಆ ವ್ಯಕ್ತಿಯೊಂದಿಗೆ ನೃತ್ಯ ಮಾಡಿದೆ. ಹೌದು, ಕೆಲವೇ ಸೆಕೆಂಡುಗಳ ಈ ವೈರಲ್ ವಿಡಿಯೋದಲ್ಲಿ ಕೊಳದ ಮಧ್ಯೆ ನಿಂತಿರುವ ವ್ಯಕ್ತಿಯೋರ್ವ ಅಪಾಯಕಾರಿ ಮೊಸಳೆ ಜೊತೆ ಡಾನ್ಸ್ ಮಾಡುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ- Snake Viral Video: ನದಿಯಲ್ಲಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡ ವಿಷಪೂರಿತ ಹಾವು...

ಆಘಾತಕಾರಿ ವಿಡಿಯೋದಲ್ಲಿ, ವ್ಯಕ್ತಿ ತನ್ನ ಗೆಳತಿಯೊಂದಿಗೆ ಡಾನ್ಸ್ ಮಾಡುವ ರೀತಿಯಲ್ಲಿ ನೀರಿನಲ್ಲಿ ಮೊಸಳೆಯೊಂದಿಗೆ ನೃತ್ಯ ಮಾಡುವುದನ್ನು ಕಾಣಬಹುದು. ಮೊಸಳೆ ಕೂಡ ಅವನಿಗೆ ಹಾನಿ ಮಾಡುವುದಿಲ್ಲ, ಆದರೆ ಅವನ ತಮಾಷೆಯ ವರ್ತನೆಗಳನ್ನು ಆನಂದಿಸುತ್ತದೆ ಎಂಬುದು ವಿಶಿಷ್ಟವಾಗಿದೆ. ವೀಡಿಯೊದಲ್ಲಿನ ಈ ದೃಶ್ಯವು ಎಂತಹವರಿಗೂ ಅಚ್ಚರಿ ಮೂಡಿಸದೇ ಇರದು.

ಈ ವಿಡಿಯೋವನ್ನು ಇಲ್ಲಿ ವೀಕ್ಷಿಸಿ:

ಇದನ್ನೂ ಓದಿ- Viral Video : ಚಿಪ್ಸ್ ಕದಿಯಲು ಹೋಗುವಾಗ ನಾಯಿಯನ್ನು ಕೂಡಾ ಜೊತೆಗಾರನನ್ನಾಗಿಸಿತು ಕೋತಿ

ಮೊಸಳೆ ಹಾಗೂ ಮನುಷ್ಯನ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ವಂಡರ್ಡಿಕ್ಸ್ ಹೆಸರಿನ ಪುಟದಲ್ಲಿ ಅಪ್‌ಲೋಡ್ ಮಾಡಲಾಗಿದೆ. ನೆಟಿಜನ್‌ಗಳು ಕೂಡ ವಿಡಿಯೋಗೆ ತೀವ್ರ ಕಮೆಂಟ್ ಮಾಡುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News