Viral Video : ಮುನಿಸಿಕೊಂಡ ಪ್ರೇಯಸಿಯನ್ನು ಓಲೈಸಲು ಕಾಲಿಗೆ ಬಿದ್ದು ಬೇಡುತ್ತಿರುವ ಪ್ರೇಮಿ
Viral Video : ಕೋಪಗೊಂಡಿರುವ ಗೆಳತಿಯ ಮನವೊಲಿಸಲು ಪ್ರೇಮಿ ತನ್ನ ಕೈಲಾದಷ್ಟು ಪ್ರಯತ್ನಿಸುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಆ ಹುಡುಗ ಎಲ್ಲಿಯವರೆಗೆ ಪ್ರಯತ್ನಿಸುತ್ತಾನೆ ಎಂದರೆ ಹುಡುಗಿಯ ಕಾಲಿಗೆ ಬಿದ್ದು ಅಂಗಲಾಚಿ ಬೇಡುತ್ತಿರುವುದನ್ನು ಇಲ್ಲಿ ಕಾಣಬಹುದು.
Viral Video : ಪ್ರೀತಿಯಲ್ಲಿ ಮುನಿಸು, ತಕರಾರು ಎಲ್ಲವೂ ಸಹಜ. ತನ್ನ ಸಂಗಾತಿ ಮುನಿಸಿಕೊಂಡಾಗ ಆಕೆಯನ್ನು ಅಥವಾ ಆತನನ್ನು ಓಲೈಸಿಕೊಳ್ಳುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತದೆ. ಗುಲಾಬಿ ನೀಡಿ, ಉಡುಗೊರೆ ನೀಡಿ ಪ್ರೇಯಸಿಯ ಮುನಿಸನ್ನು ತಣ್ಣಗಾಗಿಸುವ ಹುಡುಗರ ಪ್ರಯತ್ನದ ಬಗ್ಗೆ ಕೇಳಿರಬಹುದು, ನೋಡಿರಲೂಬಹುದು. ಆದರೆ ಇಲ್ಲೊಬ್ಬ ಪ್ರೇಮಿ ತನ್ನ ಹುಡುಗಿಯ ಮನವೊಲಿಸಲು ಮಾಡಿರುವ ಕೆಲಸ ಇದೀಗ ವೈರಲ್ ಆಗಿದೆ.
ಕೋಪಗೊಂಡಿರುವ ಗೆಳತಿಯ ಮನವೊಲಿಸಲು ಪ್ರೇಮಿ ತನ್ನ ಕೈಲಾದಷ್ಟು ಪ್ರಯತ್ನಿಸುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಆ ಹುಡುಗ ಎಲ್ಲಿಯವರೆಗೆ ಪ್ರಯತ್ನಿಸುತ್ತಾನೆ ಎಂದರೆ ಹುಡುಗಿಯ ಕಾಲಿಗೆ ಬಿದ್ದು ಅಂಗಲಾಚಿ ಬೇಡುತ್ತಿರುವುದನ್ನು ಇಲ್ಲಿ ಕಾಣಬಹುದು. ಕೆಲವೇ ಸೆಕೆಂಡುಗಳ ಈ ವಿಡಿಯೋ ಭಾರೀ ವೈರಲ್ ಆಗಿದೆ. ಇದನ್ನೂ ಅಪ್ಲೋಡ್ ಮಾಡಿದ ಕೆಲವೇ ನಿಮಿಷಗಳಲ್ಲಿ ಅತಿ ಹೆಚ್ಚು ಜನರು ವಿಡಿಯೋವನ್ನು ವೀಕ್ಷಿಸಿದ್ದಾರೆ.
ಇದನ್ನೂ ಓದಿ : Viral Video: ಮನೆಯ ಮಹಡಿಯ ಮೇಲೆ ಕುಳಿತು ಬಟ್ಟೆ ವಾಶ್ ಮಾಡಿದ ಕೋತಿ...ವಿಡಿಯೋ ನೋಡಿ
ಹುಡುಗ ಆ ಹುಡುಗಿಯ ಕಾಲಿಗೆ ಬಿದ್ದು ಗೋಳಾಡಿದರೂ ಹುಡುಗಿ ಮಾತ್ರ ಕರಗುವುದಿಲ್ಲ. ಹುಡುಗ ಕೂಡಾ ಕಾಲು ಹಿಡಿದು ಅ ಹುಡುಗಿಯನ್ನು ತಡೆಯುವ ಪ್ರಯತ್ನ ಮಾಡುತ್ತಾನೆ. ಆದರೆ ಆ ಹುಡುಗಿ ಕೂಡಾ ಯಾವುದನ್ನು ಲೆಕ್ಕಿಸದೆ ಮುಂದೆ ಮುಂದೆ ಹೋಗುತ್ತಾಳೆ. ಅಷ್ಟರಲ್ಲಿ ಇನ್ನೊಬ್ಬ ವ್ಯಕ್ತಿ ಬರುವುದನ್ನು ಕೂಡಾ ವಿಡಿಯೋದಲ್ಲಿ ಕಾಣಬಹುದು. ಆ ವ್ಯಕ್ತಿ ಬರುತ್ತಿದಂತೆ ಹುಡುಗ ಅಲ್ಲಿಂದ ಜಾಗ ಖಾಲಿ ಮಾಡುತ್ತಾನೆ. ಹುಡುಗಿ ಕೂಡಾ ತೆರಳುತ್ತಾಳೆ.
ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಇನ್‌ಸ್ಟಾಗ್ರಾಮ್‌ನಲ್ಲಿ funtaap ಹೆಸರಿನ ಪುಟದಲ್ಲಿ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ. ವಿಡಿಯೋ ವೀಕ್ಷಣೆ ಮಾಡಿದವರು ಹುಡುಗನ ವರ್ತನೆಗೆ ವಿವಿಧ ರೀತಿಯಲ್ಲಿ ಕಾಮೆಂಟ್ ಕೂಡಾ ಮಾಡುತ್ತಿದ್ದಾರೆ.
ಇದನ್ನೂ ಓದಿ : Viral Video: ಮಡಿಲಲ್ಲಿ ಮಗು ಹೊತ್ತು ಫುಡ್ ತಲುಪಿಸುವ Zomato ಡೆಲಿವರಿ ಏಜೆಂಟ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.