ವೈರಲ್ ವಿಡಿಯೋ:  ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ತಮಾಷೆಯ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಜನರ ಬೇಡಿಕೆಯ ಮೇರೆಗೆ ಹೆಚ್ಚಿನ ಸಂಖ್ಯೆಯ ಅಂತಹ ವೀಡಿಯೊಗಳನ್ನು ಅಪ್‌ಲೋಡ್ ಮಾಡಲಾಗುತ್ತದೆ. ಅವುಗಳಲ್ಲಿ ಕೆಲವು ವೀಡಿಯೊಗಳನ್ನು ವೀಕ್ಷಿಸಿದ ಬಳಿಕ ಎಂತಹವರಿಗೂ ಸಹ ನಗದೇ ಇರಲು ಸಾಧ್ಯವೇ ಇಲ್ಲ. ಇದೀಗ ಅಂತಹುದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದನ್ನು ನೋಡಿ ಎಲ್ಲರೂ ಅಚ್ಚರಿಗೊಂಡಿದ್ದಾರೆ. ಈ ವಿಡಿಯೋವನ್ನು ನೋಡಿದರೆ ಗ್ರಾಮದ ಕಾರ್ಯಕ್ರಮದಲ್ಲಿ ಇದನ್ನು  ಚಿತ್ರೀಕರಿಸಲಾಗಿದೆ ಎಂದು ತೋರುತ್ತದೆ.  ಇದೀಗ ಸೋಶಿಯಲ್ ಮೀಡಿಯಾದಲ್ಲಿ ಈ ತಮಾಷೆಯ ವಿಡಿಯೋ ಸಖತ್ ವೈರಲ್ ಆಗುತ್ತಿದೆ. 


COMMERCIAL BREAK
SCROLL TO CONTINUE READING

ಸಾಮಾನ್ಯವಾಗಿ ಹಳ್ಳಿ ಹಳ್ಳಿಗಳಲ್ಲಿ ಮದುವೆಯ ಸಮಾರಂಭದಲ್ಲಿ ನೃತ್ಯ ಕಾರ್ಯಕ್ರಮವನ್ನು ಆಯೋಜಿಸುವುದನ್ನು ನೀವು ನೋಡಿರಬೇಕು. ಮದುವೆಗೆ ಬರುವವರು ಬಹಳ ಉತ್ಸಾಹದಿಂದ ನೃತ್ಯವನ್ನು ವೀಕ್ಷಿಸಲು ಇಷ್ಟಪಡುತ್ತಾರೆ. ಅವರಲ್ಲಿ ಬಹಳಷ್ಟು ಮಂದಿ ವೇದಿಕೆ ಮೇಲೆ ಬಂದು ಒಂದೆರಡು ಸ್ಟೆಪ್ ಹಾಕುವುದನ್ನು ನಾವು ನೋಡಿಯೇ ಇರುತ್ತೇವೆ. ಈ ವಿಡಿಯೋದಲ್ಲೂ ಅಂಥದ್ದೇ ದೃಶ್ಯ ಕಂಡು ಬರುತ್ತಿದೆ. ನೃತ್ಯ ಮಾಡುವ ಆಸೆಯಿಂದ ವ್ಯಕ್ತಿಯೊಬ್ಬರು ವೇದಿಕೆಯನ್ನು ತಲುಪಿದರು. ಆದರೆ ಅಲ್ಲಿದ್ದ ನರ್ತಕಿಯ ಮುಸುಕು ತೆಗೆದಾಗ ಆತ ಶಾಕ್ ಆಗಿದ್ದಾನೆ. 


ಇದನ್ನೂ ಓದಿ- ಕೊರೊನಾ ನಿಯಂತ್ರಣಕ್ಕೆ ಚೀನಾ ಏನು ಮಾಡುತ್ತಿದೆ! ವಿಡಿಯೋ ನೋಡಿದ್ರೆ ಶಾಕ್ ಆಗ್ತೀರ...


ವಾಸ್ತವವಾಗಿ, ಈ ವೈರಲ್  ವಿಡಿಯೋದಲ್ಲಿ ಹುಡುಗನೊಬ್ಬ ಹುಡುಗಿಯ ಗೆಟಪ್‌ನಲ್ಲಿ ಸ್ಟೇಜ್ ಮೇಲೆ ಡ್ಯಾನ್ಸ್ ಮಾಡುತ್ತಿರುವುದು ಕಂಡು ಬಂದಿದೆ. ಆದರೆ ಅಲ್ಲಿದ್ದ ಜನರೆಲ್ಲರಿಗೂ ಇದರ ಅರಿವಿರಲಿಲ್ಲ.  ಹಾಗೆಯೇ ಒಬ್ಬ ವ್ಯಕ್ತಿ ನಾರಿ ಜೊತೆ ಡ್ಯಾನ್ಸ್ ಮಾಡುವ ಆಸೆಯಿಂದ ಸ್ಟೇಜ್ ಬಳಿ ಬಂದಿದ್ದಾನೆ. ಈ ಸಂದರ್ಭದಲ್ಲಿ ಮುಂದೆ ಬಂದ ಡ್ಯಾನ್ಸರ್ ತನ್ನ ಮುಸುಕು ತೆರೆಯುತ್ತಾರೆ. ಇದನ್ನು ಕಂಡ ವ್ಯಕ್ತಿ ಆ ಡ್ಯಾನ್ಸರ್ ಯುವತಿಯಲ್ಲಿ ಹುಡುಗ ಎಂದು ತಿಳಿದು ಆಘಾತಕ್ಕೊಳಗಾಗಿದ್ದಾನೆ. ಮಾತ್ರವಲ್ಲ, ಅಲ್ಲಿ ನೆರೆದಿದ್ದವರೂ ಸಹ ಬೆರಗಾಗಿದ್ದಾರೆ. 


ವೀಡಿಯೊವನ್ನು ಇಲ್ಲಿ ವೀಕ್ಷಿಸಿ:


 

 

 

 



 

 

 

 

 

 

 

 

 

 

 

A post shared by Bhutni_ke (@bhutni_ke_memes)


ಇದನ್ನೂ ಓದಿ - ವೈರಲ್ ವಿಡಿಯೋ: ಮಹಿಳೆಯ ಆತ್ಮ ಆಕೆಯ ದೇಹದಿಂದ ಹೊರಬಂದಾಗ...


ವೇದಿಕೆ ಮೇಲೆ ಮಹಿಳೆಯ ವೇಷಧಾರಿಯಾಗಿ ನೃತ್ಯ ಮಾಡುತ್ತಿದ್ದದ್ದು ಓರ್ವ ಪುರುಷ ಎಂದು ಅಲ್ಲಿದ್ದವರಿಗೆ ಊಹಿಸಲು ಸಾಧ್ಯವಾಗಿಲ್ಲ ಎನ್ನಲಾಗಿದೆ.  ಈ ತಮಾಷೆಯ ವೀಡಿಯೋ ನೋಡಿದ ನಂತರ ಯಾರಿಗೂ ನಗು ತಡೆಯಲು ಸಾಧ್ಯವಾಗುವುದಿಲ್ಲ. bhutni_ke_memes ಹೆಸರಿನ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ತಮಾಷೆಯ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿದೆ. ಈ ವಿಡಿಯೋಗೆ ಇದುವರೆಗೆ ಸಾವಿರಾರು ಲೈಕ್‌ಗಳು ಮತ್ತು ವೀಕ್ಷಣೆಗಳು ಬಂದಿವೆ.
 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.