ವೈರಲ್ ವಿಡಿಯೋ: ಮಹಿಳೆಯ ಆತ್ಮ ಆಕೆಯ ದೇಹದಿಂದ ಹೊರಬಂದಾಗ...

ವೈರಲ್ ವಿಡಿಯೋ: ಮಹಿಳೆಯ ಆತ್ಮವು ದೇಹ ತೊರೆದು ಹೊರಬಂದು ಮತ್ತೆ ಹಿಂತಿರುಗಿ ನೋಡಿದರೆ ಹೇಗಿರುತ್ತೆ... ಅಬ್ಬಬ್ಬಾ... ಇದನ್ನು ನೆನೆಸಿಕೊಂಡರೆ ಎದೆ ನಡುಗುತ್ತದೆ. ಇಂತಹ ಒಂದು ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

Written by - Yashaswini V | Last Updated : Apr 20, 2022, 07:32 AM IST
  • ದೇಹ ತೊರೆದು ಹೊರಬರುವ ಆತ್ಮ
  • ಆತ್ಮವು ಮತ್ತೆ ಹಿಂದೆ ತಿರುಗಿ ನೋಡಿವ ದೃಶ್ಯ
  • ಎದೆ ನಡುಗಿಸುವ ವಿಡಿಯೋ ವೈರಲ್
ವೈರಲ್ ವಿಡಿಯೋ: ಮಹಿಳೆಯ ಆತ್ಮ ಆಕೆಯ ದೇಹದಿಂದ ಹೊರಬಂದಾಗ... title=
Woman spirit out from body video

ವೈರಲ್ ವಿಡಿಯೋ: ಅಂತರ್ಜಾಲವು ಒಂದು ಮೋಜಿನ ಜಗತ್ತು. ಪ್ರತಿನಿತ್ಯ ಇಲ್ಲಿ ವಿಭಿನ್ನ ಬಗೆಯ ನೂರಾರು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಇಂತಹ ವಿಡಿಯೋಗಳು ಕೆಲವೊಮ್ಮೆ ನಗುವಂತೆ ಮಾಡುತ್ತವೆ, ಇನ್ನೂ ಕೆಲವೊಮ್ಮೆ ಆಶ್ಚರ್ಯವನ್ನು ಉಂಟು ಮಾಡುತ್ತವೆ. ಹಲವು ಬಾರಿ ಭಯವನ್ನೂ ಹುಟ್ಟಿಸುತ್ತವೆ. ಸದ್ಯ ಇಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. 

ವಾಸ್ತವವಾಗಿ, ಮರಣದ ನಂತರ ಆತ್ಮವು ದೇಹವನ್ನು ತೊರೆಯುತ್ತದೆ ಎಂದು ಹೇಳುವುದನ್ನು ನಾವು ಕೇಳಿಯೇ ಇರುತ್ತೇವೆ. ಆದರೆ ಎಂದಾದರೂ ಮೃತ ದೇಹದಿಂದ ಆತ್ಮ ಹೊರಬರುವುದನ್ನು ಯಾರಾದರೂ ನೋಡಿದ್ದೀರಾ... ಅಂತಹ ಒಂದು ಭಯಾನಕ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. 

ಇದನ್ನೂ ಓದಿ- Snake Video: ಸ್ನಾನದ ಮನೆಯಲ್ಲಿ ಅಡಗಿ ಕೂತಿದ್ದ ಕಾಳಿಂಗ ಸರ್ಪ!

ವೈರಲ್ ವಿಡಿಯೋದಲ್ಲಿ ಕೆಂಪು ಸೀರೆಯುತ್ತಿರುವ ಮಹಿಳೆಯೊಬ್ಬರು ಅಗಲವಾದ ಕಣ್ಣುಗಳನ್ನು ತೆರೆದು ನೆಲದ ಮೇಲೆ ಮಲಗಿದ್ದಾರೆ. ನೋಡಲು ಈ ದೃಶ್ಯವು ಮೃತ ದೇಹದಂತೆ ಭಾಸವಾಗುತ್ತದೆ. ಇದ್ದಕ್ಕಿದ್ದಂತೆ ಈ ಮಹಿಳೆಯ ದೇಹದಿಂದ ಚೈತನ್ಯವೊಂದು (ಆತ್ಮ) ಹೊರಬರುತ್ತದೆ. ಥೇಟ್ ಮಹಿಳೆಯಂತೆಯೇ ಕಾಣುವ ಒಂದು ಆತ್ಮವು ನಿಧಾನವಾಗಿ ಅವಳ ದೇಹದಿಂದ ಹೊರಬಂದು ಗಾಳಿಯಲ್ಲಿ ಮುಂದೆ ಬಂದಂತೆ ತೋರುತ್ತದೆ. ಬಳಿಕ ಆ ಆತ್ಮವು ಹಿಂದಿರುಗಿ ಮತ್ತೆ ದೇಹವನ್ನು ನೋಡುತ್ತದೆ. ಮತ್ತು ನಂತರ ಮುಂಭಾಗದಲ್ಲಿರುವ ಕ್ಯಾಮೆರಾದತ್ತ ನೋಡುತ್ತದೆ. 

ಇದನ್ನೂ ಓದಿ- Thief Dance Video: CCTV ಫೂಟೇಜ್ ನಲ್ಲಿ ಕಂಡ ಕಳ್ಳನ ವಿಶಿಷ್ಟ ಡಾನ್ಸ್, ನೀವೂ ನೋಡಿ

ಈ ವಿಡಿಯೋವನ್ನು ಯಾರೇ ಆದರೂ ನೋಡಿದ ತಕ್ಷಣ ಮೃತ ದೇಹದಿಂದ ಆತ್ಮವು ಹೊರಬಂದಂತೆ ಭಾಸವಾಗುತ್ತದೆ. ಆದರೆ, ಇದನ್ನು ಆತ್ಮವು ಹಿಂದಿರುಗಿ ದೇಹವನ್ನು ನೋಡಿ ಮತ್ತೆ ಕ್ಯಾಮರಾ ಕಡೆ ತಿರುಗಿ ಭಯಾನಕ ಸ್ಮೈಲ್ ನೀಡುವುದನ್ನು ಸೂಕ್ಷ್ಮವಾಗಿ ಗಮನಿಸಿದರೆ ಹಾಸ್ಯದ ಉದ್ದೇಶದಿಂದ ಯಾರಾದರೂ ಇದನ್ನು ಎಡಿಟ್ ಮಾಡಿರಬಹುದು ಎಂದು ತೋರುತ್ತದೆ. ಆದಾಗ್ಯೂ, ಈ ವಿಡಿಯೋವನ್ನು ಸೆರೆಹಿಡಿದಿರುವವರು ಯಾರು ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ.  

ವಿಶೇಷ ಸೂಚನೆ: ನಿಮಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಇಲ್ಲದಿದ್ದರೆ ಹಾಗೂ ನೀವು ಧೈರ್ಯವಂತರಾಗಿದ್ದರೆ ಮಾತ್ರ ನಿಮ್ಮ ಸ್ವಂತ ಜವಾಬ್ದಾರಿಯ ಮೇಲೆ ಈ ವಿಡಿಯೋ ತುಣುಕನ್ನು ವೀಕ್ಷಿಸಿ... 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News