Viral news latest : ಜೀವನ ನಮ್ಮ ಜೊತೆ ಒಮ್ಮೊಮ್ಮೆ ಆಟವಾಡಿ ಬಿಡುತ್ತದೆ ಎಂದು ಕೆಲವರು ಹೇಳುವುದನ್ನು ನೀವು ಕೂಡಾ ಕೇಳಿರಬಹುದು. ಈ ಮಾತನ್ನು ಅಷ್ಟು ಗಂಭೀರವಾಗಿ ಎಷ್ಟು ಜನ ತೆಗೆದುಕೊಳ್ಳುತ್ತಾರೆಯೋ ಗೊತ್ತಿಲ್ಲ. ಕೆಲವರು ತಮ್ಮ ಜೀವನದಲ್ಲಿಯೇ ಇದನ್ನು ಅನುಭವಿಸಿ ಬಿಡುತ್ತಾರೆ. ಇಲ್ಲೊಬ್ಬ ಯುವಕನ ಜೊತೆ ಹೀಗೆಯೇ ಆಗಿದೆ. ಮದುವೆಯಾದ ಆರು ವರ್ಷಗಳ ನಂತರ ತಾನು ವಿವಾಹವಾಗಿದ್ದು, ತನ್ನ ಸ್ವಂತ ಸಹೋದರಿಯನ್ನು ಎನ್ನುವ ಅಂಶ ಬೆಳಕಿಗೆ ಬಂದಿದೆ. ಈ ಸತ್ಯ ಹೊರಗೆ ಬಂದಿರುವುದು ಕೂಡಾ ಒಂದು ರೋಚಕ ಕತೆ. 


COMMERCIAL BREAK
SCROLL TO CONTINUE READING

ಹೆರಿಗೆ ನಂತರ ಆರೋಗ್ಯ ಸಮಸ್ಯೆ : 
ವ್ಯಕ್ತಿಯ ಪತ್ನಿಗೆ ಹೆರಿಗೆ ನಂತರ ಕೆಲವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ಕಿಡ್ನಿ ದಾನಿಗಳ ಹುಡುಕಾಟದಲ್ಲಿದ್ದರು. ಆ ಮಹಿಳೆಯ ಸಂಬಂಧಿಕರನ್ನು ಕಿಡ್ನಿಗಾಗಿ ಪ್ರಯತ್ನಿಸಿದರೂ ಯಾರ ಕಿಡ್ನಿಯೂ ಮ್ಯಾಚ್ ಆಗುತ್ತಿರಲಿಲ್ಲ. ಕೊನೆಗೆ ಬೇಸತ್ತ ಪತಿ, ತನ್ನ ಪತ್ನಿಯ ಪ್ರಾಣ ಉಳಿಸುವ ಸಲುವಾಗಿ ತನ್ನದೇ ಕಿಡ್ನಿ ದಾನಕ್ಕೆ ಮುಂದಾಗುತ್ತಾನೆ. ಇದಕ್ಕಾಗಿ ಎಲ್ಲಾ ರೀತಿಯ ವೈದ್ಯಕೀಯ ಪರೀಕ್ಷೆಗೆ ಒಳಪಡುತ್ತಾನೆ. ಪ್ರಾಥಮಿಕ ಟೆಸ್ಟ್ ವರದಿಯ ಅನುಸಾರ ವ್ಯಕ್ತಿ ತನ್ನ ಪತ್ನಿಗೆ ಕಿಡ್ನಿ ದಾನ ಮಾಡಬಹುದು ಎನ್ನುವ ಫಲಿತಾಂಶ ಬರುತ್ತದೆ. ಆದರೆ ಹೆಚ್ಚಿನ ಮಾಹಿತಿಗಾಗಿ ಎಚ್‌ಎಲ್‌ಎ  (human leukocyte antigen) ಅಂಗಾಂಶ ಪರೀಕ್ಷೆಗೆ ಒಳಪಡುವಂತೆ ವೈದ್ಯರು ಸಲಹೆ ನೀಡುತ್ತಾರೆ.


ಇದನ್ನೂ ಓದಿ : Trending Video: ದೊಡ್ಡವನಾದ ಮೇಲೆ ಪಾನಿಪುರಿ ಮಾರುವವನಾಗಬೇಕಂತೆ ಈ ತುಂಟ, ಕಾರಣ ಏನು ನೀವೇ ಕೇಳಿ!


ಟೆಸ್ಟ್ ನಲ್ಲಿ ಸತ್ಯ ಬಹಿರಂಗ : 
ಆದರೆ ಈ ಟೆಸ್ಟ್ ವರದಿ ಬಂದಾಗ ವ್ಯಕ್ತಿಗೆ ಆಕಾಶವೇ ಕಳಚಿ ಬಿದ್ದಂತ ಅನುಭವ. ಈ ಟೆಸ್ಟ್ ನಲ್ಲಿ ವ್ಯಕ್ತಿಗೆ ತಾನು ಮದುವೆಯಾಗಿರುವುದು ತನ್ನ ಸಹೋದರಿಯನ್ನೇ ಎನ್ನುವುದು ಗೊತ್ತಾಗುತ್ತದೆ. 


ದತ್ತು ಪಡೆದಿದ್ದ ದಂಪತಿ : 
ವಾಸ್ತವವಾಗಿ ಆ ವ್ಯಕ್ತಿಯ ಜನನದ ಎರಡು ನಿಮಿಷಗಳಲ್ಲಿಯೇ ಅವರನ್ನು ದಂಪತಿಯೊಂದು ದತ್ತು ಸ್ವೀಕಾರ ಮಾಡುತ್ತದೆ. ದತ್ತು ಪಡೆದ ನಂತರ ಆ ಮಗುವಿನ ನಿಜವಾದ ಪೋಷಕರ ಜೊತೆಗೆ ದತ್ತು ಪೋಷಕರು ಯಾವುದೇ ಸಂಬಂಧ ಹೊಂದಿರಲಿಲ್ಲ.  ಹಾಗಾಗಿ ಆ ವ್ಯಕ್ತಿಗೂ ತನ್ನ ನಿಜವಾದ ಪೋಷಕರು ಯಾರು ಎನ್ನುವುದೇ ತಿಳಿದಿರಲಿಲ್ಲ.ಹೀಗಾಗಿ ಆ ವ್ಯಕ್ತಿ ಮದುವೆಯಾದಾಗ ತನ್ನ ಸಹೋದರಿಯನ್ನೇ ವಿವಾಹವಾಗುತ್ತಿರುವುದು ಎನ್ನುವ ಸತ್ಯ ತಿಳಿದಿರಲಿಲ್ಲ.  


ಇದನ್ನೂ ಓದಿ : Kaju Katli Bhajji: ಬೇಸನ್ ಹಿಟ್ಟಲ್ಲಿ ಕಾಜು ಕತ್ಲಿ ಅದ್ದಿ ಭಜ್ಜಿ ತಯಾರಿಸಿದ ಆಂಟಿ.... ತಲೆ ಕೆಟ್ಟು ನೆಟ್ಟಿಗರು ಹೇಳಿದ್ದೇನು ಗೊತ್ತಾ?


ಈ ವ್ಯಕ್ತಿ  ತನ್ನ ಕಥೆಯನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ರೆಡ್ಡಿಟ್‌ನಲ್ಲಿಯೂ ಹಂಚಿಕೊಂಡಿದ್ದಾರೆ. ಇವರ ಈ ಕತೆಯನ್ನು ಓದಿದ ಅನೇಕರು ಭಾರೀ ಸಂಖ್ಯೆಯಲ್ಲಿ ಪ್ರತಿಕ್ರೆಯೆ ನೀಡುತ್ತಿದ್ದಾರೆ. ಕೆಲವರು ನಿಮ್ಮ ಮಕ್ಕಳು ಆರೋಗ್ಯವಾಗಿರುವುದರಿಂದ ಈ ಬಗ್ಗೆ ಹೆಚ್ಚು ಯೋಚನೆಮಾಡುವ ಅಗತ್ಯ ಇಲ್ಲ ಎಂದಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ