Viral News: ಗಿನ್ನೆಸ್ ದಾಖಲೆಯ ಹುಚ್ಚಿಗೆ 4 ದಿನ ಅತ್ತು ದೃಷ್ಟಿಯನ್ನೇ ಕಳೆದುಕೊಂಡ ಯುವಕ!
Guinness World Record: ನಿರಂತರವಾಗಿ ಅತ್ತ ಪರಿಣಾಮ ಆತನಿಗೆ ತಲೆ ನೋವು, ಕಣ್ಣು ಉರಿಯಿಂದ ಮುಖ ಊದಿಕೊಂಡಿದ್ದು, ಅಳು ನಿಲ್ಲಿಸಿದ ಬಳಿಕ 45 ನಿಮಿಷಗಳ ಕಾಲ ಆತನಿಗೆ ಕಣ್ಣು ಸರಿಯಾಗಿ ಕಾಣಿಸಿಲ್ಲ.
ನವದೆಹಲಿ: ಪ್ರಪಂಚದಲ್ಲಿ ಚಿತ್ರ-ವಿಚಿತ್ರ ಜನರು ಇರುತ್ತಾರೆ. ಪ್ರತಿದಿನ ಏನಾದರೂ ಹುಚ್ಚು ಸಾಹಸ ಮಾಡುತ್ತಾ ಸುದ್ದಿಯಲ್ಲಿರುತ್ತಾರೆ. ಹೆಸರು ಮಾಡಲು ಪ್ರಾಣವನ್ನೇ ಒತ್ತೇ ಇಡುವ ಜನರು ಇದ್ದಾರೆ. ಅದೇ ರೀತಿ ವ್ಯಕ್ತಿಯೊಬ್ಬ ಗಿನ್ನೆಸ್ ದಾಖಲೆಯ ಹುಚ್ಚಿಗೆ 4 ದಿನಗಳ ಕಾಲ ನಿರಂತರವಾಗಿ ಅತ್ತು ತನ್ನ ದೃಷ್ಟಿಯನ್ನೇ ಕಳೆದುಕೊಂಡಿದ್ದಾನೆ.
ಹೌದು, ನೈಜಿರಿಯಾ ಮೂಲದ ತೆಂಬು ಎಬೆರೆ ಎಂಬಾತ ಏನಾದರೂ ಮಾಡಿ ಗಿನ್ನೆಸ್ ದಾಖಲೆ ಮಾಡಿ ಸಾಧನೆ ಮಾಡಬೇಕು ಅಂತಾ ಕನಸು ಕಂಡಿದ್ದ. ಇದಕ್ಕಾಗಿ ಆತ ಆಯ್ದುಕೊಂಡಿದ್ದು ಅಳೋದನ್ನು. ಗಿನ್ನೆಸ್ ರೆಕಾರ್ಡ್ ಮಾಡಲು ನಿರ್ಧಾರ ಮಾಡಿದ ಆತನಿಗೆ ಅದುವೇ ಮುಳುವಾಗಿದೆ. ಯಾಕೆಂದ್ರೆ ಇದೀಗ ಆತನ ತನ್ನ ಕಣ್ಣೀನ ದೃಷ್ಟಿಯನ್ನೇ ಕಳೆದುಕೊಂಡಿದ್ದಾನೆ.
ತೆಂಬು ಎಬೆರೆ ಬರೋಬ್ಬರಿ 100 ಗಂಟೆಗಳ ಕಾಲ ಅಂದರೆ 4 ದಿನ 4 ಗಂಟೆಗಳ ಕಾಲ ನಿರಂತರವಾಗಿ ಅತ್ತಿದ್ದಾನೆ. ನಿರಂತರವಾಗಿ ಅತ್ತ ಪರಿಣಾಮ ಆತನಿಗೆ ತಲೆ ನೋವು, ಕಣ್ಣು ಉರಿಯಿಂದ ಮುಖ ಊದಿಕೊಂಡಿದ್ದು, ಅಳು ನಿಲ್ಲಿಸಿದ ಬಳಿಕ 45 ನಿಮಿಷಗಳ ಕಾಲ ಆತನಿಗೆ ಕಣ್ಣು ಸರಿಯಾಗಿ ಕಾಣಿಸಿಲ್ಲ. ಗಿನ್ನೆಸ್ ದಾಖಲೆಯ ಹುಚ್ಚಿಗೆ ದೃಷ್ಟಿ ಕಳೆದುಕೊಂಡ ಆತ ಪಡಬಾರದ ಪಡಿಪಾಟಲು ಪಟ್ಟಿದ್ದಾನೆ.
ಕಣ್ಣಿನ ದೃಷ್ಟಿ ಹೋದರೂ ಛಲ ಬಿಡದ ತೆಂಬು ಎಬೆರೆ ಮತ್ತೆ 7 ದಿನಗಳ ಕಾಲ ನಿರಂತರವಾಗಿ ಅತ್ತು ವಿಶ್ವ ದಾಖಲೆ ಮಾಡಲು ಮುಂದಾಗದ್ದಾನಂತೆ. ವಿಚಿತ್ರ ಸಾಹಸದ ಹುಚ್ಚಿನಿಂದಾಗಿ ಈತ ಇದೀಗ ಸೋಷಿಯಲ್ ಮೀಡಿಯಾ ಸೇರಿದಂತೆ ಪ್ರಪಂಚದಾದ್ಯಂತ ಸುದ್ದಿಯಾಗಿದ್ದಾನೆ.
ಇದನ್ನೂ ಓದಿ: ಇನ್ನ್ಮುಂದೆ ಲೈಂಗಿಕ ಕ್ರಿಯೆಗೆ ಪುರುಷ-ಮಹಿಳೆಯರೇ ಬೇಡ, ಅದಕ್ಕೂ ಬಂತು ರೋಬೋಟ್!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.