Snake Video : ಹಾವುಗಳಲ್ಲಿ ಸಾವಿರಾರು ಪ್ರಭೇದಗಳಿವೆ. ಅವುಗಳಲ್ಲಿ ಕೆಲವೊಂದು ಅಪಾಯಕಾರಿಯಾಗಿದ್ದರೆ, ಇನ್ನು ಕೆಲವು ವಿಷರಹಿತವಾಗಿರುತ್ತವೆ. ಕೆಲವೊಂದು ನೋಡಲು ಅತ್ಯಂತ ಚಿಕ್ಕದಾಗಿದ್ದರೆ, ಇನ್ನು ಕೆಲವು ಬಹಳ ಉದ್ದವಾಗಿರುತ್ತದೆ.  ಹೆಬ್ಬಾವು ಪ್ರಾಣಿಗಳು, ಪಕ್ಷಿಗಳು ಮತ್ತು ಮನುಷ್ಯರನ್ನು ಜೀವಂತವಾಗಿ ನುಂಗಿ ಬಿಡುತ್ತದೆ. ಇನ್ನು ನಾಗರಹಾವು, ಕಾಳಿಂಗ ಸರ್ಪದಂತಹವುಗಳು ಅತ್ಯಂತ ವಿಷಕಾರಿಯಾಗಿರುತ್ತದೆ. ಕೆಲವರಿಗೆ ವಿಷಕಾರಿ ಹಾವುಗಳನ್ನು ಕಂಡರೂ ಆಟವಾಡುವ ಬುದ್ದಿ ಇರುತ್ತದೆ. ಅಪಾಯವನ್ನು ಲೆಕ್ಕಿಸದೆ ಚೆಲ್ಲಾಟಕ್ಕೆ ಇಳಿದು ಬಿಡುತ್ತಾರೆ. 


COMMERCIAL BREAK
SCROLL TO CONTINUE READING

ನಾಗರಹಾವಿನ ಜೊತೆ ಯುವಕನ ನೃತ್ಯ :
ಇದೀಗ ಬಂದಿರುವ ವೀಡಿಯೋದಲ್ಲಿ ಕೂಡಾ ಯುವಕನೊಬ್ಬ ಸುಮಾರು 10 ಅಡಿ ಉದ್ದದ ನಾಗರಹಾವಿನೊಂದಿಗೆ ಆಟ ಆಡುವುದನ್ನು ಕಾಣಬಹುದು. ಕೆಲವು ಸೆಕೆಂಡುಗಳ ಈ ವೀಡಿಯೊದಲ್ಲಿ, ಯುವಕ ಅತ್ಯಂತ ಅಪಾಯಕಾರಿ  ಹಾವಿನೊಂದಿಗೆ ನೃತ್ಯ ಮಾಡುತ್ತಿರುವುದನ್ನು ಕಾಣಬಹುದು. ಹಾವನ್ನು ಪಕ್ಕದಲ್ಲಿ ಮಲಗಿಸಿಕೊಂಡು, ಸ್ವಲ್ಪವೂ ಹೆದರದೆ ನೃತ್ಯ ಮಾಡುತ್ತಿರುತ್ತಾನೆ. ಹಾವನ್ನು ಬರೀ ಗೈಯ್ಯಲ್ಲಿ ಹಿಡಿದುಕೊಳ್ಳುತ್ತಾನೆ. 


ಇದನ್ನೂ ಓದಿ : ತೀವ್ರ ಹೃದಯಾಘಾತದಿಂದ ವಾಕಿಂಗ್ ಮಾಡುವಾಗಲೇ ಯುವ ಕುಸ್ತಿಪಟು ಸಾವು!


ನಾಗರಹಾವಿನ ವೀಡಿಯೊವನ್ನು ಇಲ್ಲಿ ವೀಕ್ಷಿಸಿ :


 

 

 

 



 

 

 

 

 

 

 

 

 

 

 

A post shared by Earth Reels (@earth.reel)


 


ಈ ವೀಡಿಯೋದಲ್ಲಿ ಇಬ್ಬರು ಮಕ್ಕಳು ಕೂಡ ದೂರದಲ್ಲಿ ನಿಂತು ಹುಡುಗ ಹಾವಿನೊಂದಿಗೆ ಆಟವಾಡುವುದನ್ನು ನೋಡುತ್ತಿರುವುದನ್ನು ಕಾಣಬಹುದು. ಕಿಂಗ್ ಕೋಬ್ರಾಗೆ ಸಂಬಂಧಿಸಿದ ಈ ವಿಡಿಯೋವನ್ನು earth.reel ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ. ಈ ವಿಡಿಯೋ ವೀಕ್ಷಿಸಿದವರು ಬೇರೆ ಬೇರೆ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.  


ಇದನ್ನೂ ಓದಿ : Bull Fight Video: ನಡು ರಸ್ತೆಯಲ್ಲೇ ನಡೆಯಿತು ಗೂಳಿಗಳ ನಡುವೆ ಭಾರೀ ಕಾಳಗ.!


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.