Bull Fight Video: ನಡು ರಸ್ತೆಯಲ್ಲೇ ನಡೆಯಿತು ಗೂಳಿಗಳ ನಡುವೆ ಭಾರೀ ಕಾಳಗ.!

Bull Fight Video: ನಡುರಸ್ತೆಯಲ್ಲಿ ನಡೆದ ಗೂಳಿ ಕಾಳಗದಲ್ಲಿ ಹಲವು ವಾಹನಗಳು ಜಖಂಗೊಂಡಿದ್ದು, ಹಲವೆಡೆ ಅಂಗಡಿಕಾರರ ಬೋರ್ಡ್‌ಗಳು ಮುರಿದು ಬಿದ್ದಿವೆ. ಗೂಳಿಗಳ ಕಾಳಗ ಕಂಡು ದಾರಿಹೋಕರು ಸ್ಥಳೀಯರು ಭಯಭೀತರಾಗಿದ್ದರು.

Written by - Chetana Devarmani | Last Updated : Sep 27, 2022, 01:31 PM IST
  • ಗೂಳಿಗಳ ನಡುವೆ ಭಾರೀ ಕಾಳಗ
  • ನಡು ರಸ್ತೆಯಲ್ಲೇ ನಡೆಯಿತು ಫೈಟ್
  • ಹಲವು ವಾಹನಗಳು ಜಖಂ
Bull Fight Video: ನಡು ರಸ್ತೆಯಲ್ಲೇ ನಡೆಯಿತು ಗೂಳಿಗಳ ನಡುವೆ ಭಾರೀ ಕಾಳಗ.!   title=
ಬುಲ್‌ ಫೈಟ್‌

Bull Fight Video: ಉತ್ತರ ಪ್ರದೇಶದ ಹರ್ದೋಯಿ ಎಂಬಲ್ಲಿ ನಡುರಸ್ತೆಯಲ್ಲಿ ಎರಡು ಗೂಳಿಗಳ ನಡುವೆ ಭೀಕರ ಕಾಳಗ ನಡೆದಿದೆ. ಬಹಳ ಹೊತ್ತಿನವರೆಗೆ ಎರಡೂ ಗೂಳಿಗಳು ಪರಸ್ಪರ ಜಗಳವಾಡುತ್ತಿದ್ದು, ಯಾವ ಗೂಳಿಯೂ ಸೋಲಲು ಸಿದ್ಧವಾಗಿರಲಿಲ್ಲ. ನಡುರಸ್ತೆಯಲ್ಲಿ ನಡೆದ ಗೂಳಿ ಕಾಳಗದಲ್ಲಿ ಹಲವು ವಾಹನಗಳು ಜಖಂಗೊಂಡಿದ್ದು, ಹಲವೆಡೆ ಅಂಗಡಿಕಾರರ ಬೋರ್ಡ್‌ಗಳು ಮುರಿದು ಬಿದ್ದಿವೆ. ಸ್ಥಳದಲ್ಲೇ ಗೂಳಿಗಳ ಘರ್ಷಣೆ ವೇಳೆ ದಾರಿಹೋಕರು ಸ್ಥಳೀಯರು ಭಯಭೀತರಾಗಿದ್ದರು. ಬಹಳ ಹೊತ್ತು ಇಬ್ಬರ ನಡುವೆ ಜಗಳ ನಡೆದಿತ್ತು. ಸ್ಥಳೀಯರು ಗೂಳಿಗಳನ್ನು ಓಡಿಸಲು ಹರಸಾಹಸ ಪಡಬೇಕಾಯಿತು. ನಂತರ ಗೂಳಿಗಳ ನಡುವಿನ ಕಾಳಗವು ಕೊನೆಗೊಂಡಿತು. ಆದರೆ, ಈ ವೇಳೆ ಸ್ಥಳದಲ್ಲಿದ್ದವರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ : Bride Groom Video: ಸುಂದರ ಯುವತಿಯ ಮದುವೆಯಾದ ಖುಷಿಯಲ್ಲಿ ಈ ಅಂಕಲ್‌ ಮಾಡಿದ್ದೇನು ನೋಡಿ.!

ಮಧ್ಯ ರಸ್ತೆಯಲ್ಲಿ 2 ಗೂಳಿಗಳ ನಡುವಿನ ಈ ಕದನವು ಹರ್ದೋಯಿ ಜಿಲ್ಲೆಯ ಬಿಲ್ಗ್ರಾಮ್ ಪಟ್ಟಣದ ಸದರ್ ಬಜಾರ್‌ನಲ್ಲಿ ನಡೆದಿದೆ. ಅಲ್ಲಿ ಎರಡು ಗೂಳಿಗಳ ನಡುವೆ ಭೀಕರ ಕಾಳಗ ನಡೆದಿದೆ. ಈ ಎರಡೂ ಗೂಳಿಗಳು ಬಹಳ ಹೊತ್ತು ಪರಸ್ಪರ ಕಾದಾಡುತ್ತಲೇ ಇದ್ದವು. ಗೂಳಿಗಳ ಕಾದಾಟದಿಂದಾಗಿ ಹಲವು ಅಂಗಡಿಕಾರರ ಅಂಗಡಿಗಳ ಬೋರ್ಡ್‌ಗಳು ಮುರಿದು ಬಿದ್ದಿದ್ದು, ದ್ವಿಚಕ್ರ ವಾಹನಗಳಿಗೂ ಹಾನಿಯಾಗಿದೆ. ಈ ಹೊಡೆದಾಟದಿಂದ ಕೆಲವರಿಗೆ ಸಣ್ಣಪುಟ್ಟ ಗಾಯಗಳೂ ಆಗಿರುವುದನ್ನು ವಿಡಿಯೋದಲ್ಲಿ ನೋಡಬಹುದು.

 

 
 
 
 

 
 
 
 
 
 
 
 
 
 
 

A post shared by Zee News (@zeenews)

 

ಈ ವೇಳೆ ಸ್ಥಳೀಯರು ಹಾಗೂ ಅಂಗಡಿಕಾರರು ಭಯಭೀತರಾಗಿ ಇಬ್ಬರ ನಡುವೆ ಕೆಲಕಾಲ ಘರ್ಷಣೆ ನಡೆದು ವಾಹನ ಸಂಚಾರಕ್ಕೂ ಅಡ್ಡಿಯಾಯಿತು. ಕೊನೆಗೆ ಸ್ಥಳೀಯರು  ಹರಸಾಹಸಪಟ್ಟು ಎರಡೂ ಗೂಳಿಗಳನ್ನು ಓಡಿಸಿದರು, ನಂತರ ಗೂಳಿಗಳು ಶಾಂತವಾದವು. ಈ ವೇಳೆ ಜನರು ತಮ್ಮ ಮೊಬೈಲ್‌ನಲ್ಲಿ ಗೂಳಿಗಳ ಕಾಳಗದ ದೃಶ್ಯಗಳನ್ನು ಸೆರೆ ಹಿಡಿದರು. ಮಾಹಿತಿ ಪ್ರಕಾರ, ಗೂಳಿ ಕಾಳಗದ ವೇಳೆ ಅಕ್ಕಪಕ್ಕದಲ್ಲಿದ್ದವರೂ ಗಾಯಗೊಂಡಿದ್ದಾರೆ. ಗೂಳಿ ಕಾಳಗ ನಡೆದಾಗಲೆಲ್ಲ ಸೂಕ್ತ ಅಂತರ ಕಾಯ್ದುಕೊಳ್ಳಬೇಕು ಇಲ್ಲದಿದ್ದರೆ ಪ್ರಾಣಾಪಾಯವಾಗಬಹುದು. 

ಇದನ್ನೂ ಓದಿ : Viral Video : ಮೆಟ್ರೋದಲ್ಲಿ ಯುವಕನ ಏರ್‌ವಾಕ್.! ಈತನ ಹುಚ್ಚಾಟ ಕಂಡು ದಂಗಾದ‌ ಜನ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News