Cloth Iron With LPG Gas: ಸಾಮಾಜಿಕ ಮಾಧ್ಯಮಗಳಲ್ಲಿ ನೀವು ವಿವಿಧ ರೀತಿಯ ವಿಡಿಯೋಗಳನ್ನು ನೋಡಬಹುದು. ಇವುಗಳಲ್ಲಿನ ಕೆಲ ವಿಡಿಯೋಗಳನ್ನು ನೋಡಿ ಜನರು ನಿಬ್ಬೇರಗಾಗುತ್ತಾರೆ. ಇಂತಹುದೇ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದ್ದು, ವಿಡಿಯೋದಲ್ಲಿ ವ್ಯಕ್ತಿ ಅಡುಗೆ ಅನಿಲದ ಮೂಲಕ ಬಟ್ಟೆ ಪ್ರೆಸ್ ಮಾಡುತ್ತಿರುವುದನ್ನು ನೀವು ನೋಡಬಹುದು. ಇದನ್ನು ವೀಕ್ಷಿಸಿದ ನೆಟ್ಟಿಗರು ಕೂಡ ಆಶ್ಚರ್ಯಚಕಿತರಾಗಿದ್ದಾರೆ. ಅಷ್ಟೇ ಅಲ್ಲ ವಿಡಿಯೋವನ್ನು ತಯಾರಿಸಿದ ವ್ಯಕ್ತಿ ಕೂಡ ಆಶರ್ಯಕ್ಕೆ ಒಳಗಾಗಿದ್ದಾನೆ.


COMMERCIAL BREAK
SCROLL TO CONTINUE READING

ಎಲ್ಪಿಜಿ ಗ್ಯಾಸ್ ನಿಂದ ಬಟ್ಟೆಗೆ ಇಸ್ತ್ರಿ ಹಾಕಿದ ವ್ಯಕ್ತಿ
ವ್ಯಕ್ತಿಯೊಬ್ಬ ಬಟ್ಟೆ ಪ್ರೆಸ್ ಮಾಡುತ್ತಿರುವುದನ್ನು ನೀವು ವಿಡಿಯೋದಲ್ಲಿ ವೀಕ್ಷಿಸಬಹುದು. ಇಲ್ಲಿ ನಿಬ್ಬೇರಗಾಗಿಸುವ ಸಂಗತಿ ಎಂದರೆ, ಬಟ್ಟೆ ಪ್ರೆಸ್ ಮಾಡಲು ಆತ ಇದ್ದಿಲು ಅಥವಾ ಇಲೆಕ್ಟ್ರಿಕ್ ಸಿಟಿ ಬಳಸುತ್ತಿಲ್ಲ. ಅಡುಗೆ ಅನಿಲ ಸಿಲಿಂಡರ್ ಮೇಲೆ ಬಟ್ಟೆಗಳ ಇಸ್ತ್ರೀ ಮಾಡುತ್ತಿದ್ದಾನೆ. ಹೇಗೆ ಓರ್ವ ವ್ಯಕ್ತಿ ಅಡುಗೆ ಅನಿಲದಿಂದ ಬಟ್ಟೆ ಪ್ರೆಸ್ ಮಾಡಬಹುದು ಎಂಬುದರ ಬಗ್ಗೆ ವಿಡಿಯೋ ತಯಾರಿಸಿದ ವ್ಯಕ್ತಿ ಕೂಡ ಆಶ್ಚರ್ಯಕ್ಕೆ ಒಳಗಾಗಿದ್ದಾನೆ. ಅಷ್ಟೇ ಅಲ್ಲ ಇದನ್ನು ಹೇಗೆ ಆವಿಷ್ಕರಿಸಲಾಗಿದೆ? ಎಂದು ಆ ವ್ಯಕ್ತಿ ಇಸ್ತ್ರೀ ಹಾಕುವವನಿಗೆ ಪ್ರಶ್ನಿಸುತ್ತಿದ್ದಾನೆ.


ಇದನ್ನೂ ಓದಿ-Viral Video: ತಂದೆ ಸೆಕೆಂಡ್ ಹ್ಯಾಂಡ್ ಸೈಕಲ್ ಖರೀದಿಸಿದ್ದಕ್ಕೆ ಕುಣಿದು ಕುಪ್ಪಳಿಸಿದ ಬಾಲಕ!

ಇನ್ನೊಂದೆಡೆ ವ್ಯಕ್ತಿಯ ಪ್ರಶ್ನೆಗೆ ಉತ್ತರಿಸಿದ ಇಸ್ತ್ರೀ ಅಂಗಡಿಯವ. ಈ ಕುರಿತು ತನಗೆ ಹೆಚ್ಚೇನೂ ಮಾಹಿತಿ ಇಲ್ಲ ಆದರೆ, ಕಳೆದ ನಾಲ್ಕು ವರ್ಷಗಳಿಂದ ತಾನು ಅಡುಗೆ ಅನಿಲ ಬಳಸಿ ಇಸ್ತ್ರೀ ಮಾಡುತ್ತಿರುವುದಾಗಿ ಹೇಳುತ್ತಾನೆ. ವೈರಲ್ ವಿಡಿಯೋದಲ್ಲಿ ವ್ಯಕ್ತಿ ನೇರವಾಗಿ ಅಡುಗೆ ಅನಿಲ ಸಿಲಿಂಡರ್ ಮೂಲಕ ಪೈಪನ್ನು ತನ್ನು ತನ್ನ ಇಸ್ತ್ರಿಪೆಟ್ಟಿಗೆಗೆ ಜೋಡಿಸಿರುವುದನ್ನು ನೀವು ವಿಡಿಯೋದಲ್ಲಿ ಗಮನಿಸಬಹುದು. ಅಷ್ಟೇ ಅಲ್ಲ ಆತ ಬಟ್ಟೆಗಳನ್ನು ಕೂಡ ಪ್ರೆಸ್ ಮಾಡುತ್ತಿದ್ದಾನೆ. ಆದರೆ, ಇಸ್ತ್ರೀ ಪೆಟ್ಟಿಗೆ ಅಡುಗೆ ಅನಿಲದಿಂದ ಹೇಗೆ ಬಿಸಿಯಾಗುತ್ತಿದೆ ಎಂಬುದು ಮಾತ್ರ ಗೊತ್ತಾಗುತ್ತಿಲ್ಲ. ಆದರೆ, ವ್ಯಕ್ತಿ ಮಾತ್ರ ಅದರಿಂದಲೇ ತನ್ನ ಬಟ್ಟೆಗಳನ್ನು ಪ್ದ್ರೆಸ್ ಮಾಡುವುದನ್ನು ನೀವು ನೋಡಬಹುದು.


ಇದನ್ನೂ ಓದಿ-Viral Video: ಮನೆಯ ಮಾಳಿಗೆ ಮೇಲೆ ಅಜ್ಜಿಯ ವರ್ಕೌಟ್‌, ವಿಡಿಯೋ ಸಖತ್‌ ವೈರಲ್‌


ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ
ನಿಬ್ಬೇರಗಾಗಿಸುವ ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಹಂಚಿಕೊಳ್ಳಲಾಗಿದೆ. ಲಕ್ಷಾಂತರ ಜನರು ಈಗಾಗಲೇ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಸಾವಿರಾರು ಜನರು ಈ ವಿಡಿಯೋಗೆ ಕಾಮೆಂಟ್ ಕೂಡ ಮಾಡುತ್ತಿದ್ದಾರೆ. ಈ ತಂತ್ರಜ್ಞಾನ ತುಂಬಾ ಹಳೆ ತಂತ್ರಜ್ಞಾನವಾಗಿದ್ದು, ಹಲವು ಕಡೆ ಇದನ್ನು ಬಳಸಲಾಗುತ್ತದೆ ಎಂದು ವ್ಯಕ್ತಿಯೊಬ್ಬ ಕಾಮೆಂಟ್ ಮಾಡಿದರೆ, ವಿಡಿಯೋ ನೋಡಿದ ಬಹುತೇಕರು ನಿಬ್ಬೇರಗಾಗಿ, ಇಸ್ತ್ರೀ ಪೆಟ್ಟಿಗೆಗೆ ಶಾಖ ಎಲ್ಲಿಂದ ಬರುತ್ತಿದೆ ಎಂದು ಪ್ರಶ್ನಿಸಿ ಇದೊಂದು ಫೇಕ್ ವಿಡಿಯೋ ಆಗಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.


 

 

 

 



 

 

 

 

 

 

 

 

 

 

 

A post shared by BrainChod (@brainchod)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.