Man Kisses Lion: ಸ್ನೇಹವೇ ಹಾಗೆ. ಅದಕ್ಕೆ ವಯಸ್ಸಿನ ಮಿತಿಯಿಲ್ಲ, ಜಾತಿ - ಧರ್ಮದ ಬೇಧವಿಲ್ಲ. ಯಾವ ಹಂಗೂ ಇರದ ಸುಂದರ ಭಾವನೆಯೇ ಗೆಳೆತನ. ಈ ಸ್ನೇಹ ಯಾರೊಂದಿಗೆ, ಹೇಗೆ, ಎಲ್ಲಿ ಶುರುವಾಗುತ್ತೋ ಗೊತ್ತಿಲ್ಲ. ಆದರೆ ಒಮ್ಮೆ ಆರಂಭವಾದರೆ ಅಂತ್ಯ ಎಂಬುದಿಲ್ಲ. ಇದೀಗ ನಾವು ಹೇಳ ಹೊರಟಿಸರೋದು ಸಿಂಹ - ಮಾನವನ ಸ್ನೇಹದ ಬಗ್ಗೆ. ಸಾಮಾನುವಾಗಿ ಸಿಂಹಗಳು ಮನುಷ್ಯರನ್ನ ನೋಡಿದಾಕ್ಷಣ ದಾಳಿಗೆ ಮುಂದಾಗುತ್ತವೆ. ಆದರೆ ಇಂಟರ್‌ನೆಟ್‌ನಲ್ಲಿ ವೈರಲ್‌ ಆಗುತ್ತಿರುವ ಈ ವಿಡಿಯೋ ನಿಮಗೆ ಅಚ್ಚರಿ ಮೂಡಿಸುತ್ತೆ. ಯಾರಾದರೂ ಸಿಂಹವನ್ನು ಚುಂಬಿಸುವುದನ್ನು ನೋಡಿದ್ದೀರಾ? ಇಂತಹ ದೃಶ್ಯಗಳನ್ನು ನಾವು ಸಿನಿಮಾದಲ್ಲಿ ನೋಡಲು ಸಾಧ್ಯ. ಆದರೆ ಇಲ್ಲೊಬ್ಬ ವ್ಯಕ್ತಿ ಸಿಂಹವನ್ನು ತನ್ನ ಮಗುವಿನಂತೆ ಮುದ್ದಿಸುವ ವಿಡಿಯೋ ಎಲ್ಲರ ಗಮನಸೆಳೆಯುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ : Dangerous Encounter: ನಡು ರಸ್ತೆಯಲ್ಲಿಯೇ ಹಸು-ಗೂಳಿಯ ಮಧ್ಯೆ ಭೀಕರ ಕಾಳಗ... ವಿಡಿಯೋ ನೋಡಿ


ವ್ಯಕ್ತಿಯು ಸಿಂಹವನ್ನು ಚುಂಬಿಸುವುದನ್ನು ನೀವು ನೋಡಿರದಿದ್ದರೆ ಈ ವಿಡಿಯೋ ನೋಡಿ. ಈ ವಿಡಿಯೋ ಒಮ್ಮೆ ನೋಡಿದ್ರೆ ಮತ್ತೆ ಮತ್ತೆ ನೋಡಬೇಕು ಎನಿಸುತ್ತೆ. ನಿಮ್ಮ ಕಣ್ಣುಗಳನ್ನು ನೀವು ನಂಬುವುದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ನೀವೇ ಒಮ್ಮೆ ನೋಡಿ.


 


 

 

 

 



 

 

 

 

 

 

 

 

 

 

 

A post shared by Lion Lovers (@lionlovershub)


 


ಕಾಡಿನಲ್ಲಿ ಬೇಟೆಯಾಡುವ ಡೇಂಜರಸ್‌ ಪ್ರಾಣಿಯ ಜೊತೆ ಈ ವ್ಯಕ್ತಿಯ ಸ್ನೇಹ ನೋಡಿದ್ರೆ ಬೆರಗಾಗುತ್ತೆ. ಆ ಸಿಂಹ ಕೂಡ ಏನನ್ನೂ ಮಾಡದೆ ಅವನನ್ನು ನೋಡಿ ತಾಯಿಯನ್ನು ಕಂಡಂತೆ ಅವನ ತೆಕ್ಕೆಗೆ ಹೋಯಿತು. ಸಿಂಹವು ತನ್ನ ತಾಯಿಯ ಮಡಿಲಲ್ಲಿ ಮಗುವಿನಂತೆ ಸಂತೋಷ ಪಡುವ ರೀತಿ ಅವನ ತೋಳಿನಲ್ಲಿ ಆನಂದಿಸಿತು. ಈ ವೀಡಿಯೊದಲ್ಲಿ ನೀವು ಅದನ್ನು ನೋಡಬಹುದು. ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ಈಗಾಗಲೇ 3 ಮಿಲಿಯನ್ ಜನರು ವೀಕ್ಷಿಸಿದ್ದಾರೆ.


ಮೃಗಾಲಯದಲ್ಲಿ ಸಿಂಹಗಳನ್ನು ನೋಡುತ್ತೇವೆ. ಆದರೆ ಇಂತಹ ಸಾಹಸಗಳು ಕೆಲವರಿಗೆ ಮಾತ್ರ ಸಾಧ್ಯ. ಏಕೆಂದರೆ ಸಿಂಹಗಳು ಕಾಲಕಾಲಕ್ಕೆ ಹಸಿವಿನಿಂದ ಬಳಲುತ್ತವೆ ಮತ್ತು ಅವುಗಳ ಯೋಗಕ್ಷೇಮವನ್ನು ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಬೇಟೆಯಾಡಿ ಕೊಲ್ಲುತ್ತವೆ. ಅವರೊಟ್ಟಿಗೆ ಇಂತಹ ಕೆಲಸಗಳು ಪ್ರಾಣವನ್ನು ಪಣಕ್ಕಿಟ್ಟಂತೆ.


ಇದನ್ನೂ ಓದಿ : Girl Dance Video: ಅಕ್ಕನ ಮದುವೆಯಲ್ಲಿ ತಂಗಿಯ ಅದ್ಭುತ ನೃತ್ಯ! ಯುವಕರ ಮನಸೆಳೆದ ಸುಂದರಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.