Funny Viral Video: “ನನ್ನನ್ನು ಬಿಡಬೇಡಿ” ಎನ್ನುತ್ತಾ ರೈಲಿನ ಕಿಟಕಿಯಲ್ಲಿ ನೇತಾಡಿದ ಕಳ್ಳ: ಕಾರಣ ಕೇಳಿದ್ರೆ ಬಿದ್ದು ಬಿದ್ದು ನಗ್ತೀರಾ
ಈ ಕಳ್ಳ ರೈಲ್ವೇ ಪ್ಲಾಟ್‌ಫಾರ್ಮ್ ಮೇಲೆ ನಡೆದುಕೊಂಡು ಹೋಗಿ ಮೊಬೈಲ್ ಕಿತ್ತುಕೊಂಡು ಓಡಿ ಹೋಗುತ್ತಿದ್ದ. ರೈಲು ಹೊರಡುವ ಹಂತದಲ್ಲಿದ್ದಾಗ ಈ ರೀತಿ ಮಾಡುತ್ತಿದ್ದ. ಆದರೆ ಈ ಬಾರಿ ಆತನಿಗೆ ಹಿನ್ನಡೆಯಾಗಿದೆ.
Viral Video: ಸದ್ಯ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದ್ದು, ಇದರಲ್ಲಿ ಕಳ್ಳನ ಮಾತುಗಳು ಕೇಳಿ ಬರುತ್ತಿವೆ. ಸಾಮಾನ್ಯವಾಗಿ ಕಳ್ಳ ಸಿಕ್ಕಿಬಿದ್ದರೆ ನನ್ನನ್ನು ಬಿಟ್ಟುಬಿಡು ಎನ್ನುತ್ತಾನೆ. ಆದರೆ ಈ ವೈರಲ್ ವಿಡಿಯೋದಲ್ಲಿ ಕಳ್ಳ ನನ್ನನ್ನು ಬಿಡಬೇಡ ಎನ್ನುತ್ತಿದ್ದಾನೆ. ಕೇಳೋದಕ್ಕೆ ವಿಚಿತ್ರ ಅನಿಸುತ್ತಿದ್ದರೂ ಇದಕ್ಕೆ ಬಲವಾದ ಕಾರಣವಿದೆ.
ಇದನ್ನೂ ಓದಿ: Viral Video: ಬೈಕ್ ನಲ್ಲಿ ಪತಿಯನ್ನು ಕೂರಿಸಿಕೊಂಡು ಜಾಲಿ ರೈಡ್ ಹೊರಟ ಅಜ್ಜಿ! ನಾಚಿ ನೀರಾದ ತಾತ…
ಈ ಕಳ್ಳ ರೈಲ್ವೇ ಪ್ಲಾಟ್‌ಫಾರ್ಮ್ ಮೇಲೆ ನಡೆದುಕೊಂಡು ಹೋಗಿ ಮೊಬೈಲ್ ಕಿತ್ತುಕೊಂಡು ಓಡಿ ಹೋಗುತ್ತಿದ್ದ. ರೈಲು ಹೊರಡುವ ಹಂತದಲ್ಲಿದ್ದಾಗ ಈ ರೀತಿ ಮಾಡುತ್ತಿದ್ದ. ಆದರೆ ಈ ಬಾರಿ ಆತನಿಗೆ ಹಿನ್ನಡೆಯಾಗಿದೆ. ರೈಲಿನ ಕಿಟಕಿ ಬಳಿ ವ್ಯಕ್ತಿಯೊಬ್ಬರ ಮೊಬೈಲ್ ಕಳ್ಳತನ ಮಾಡಲು ಮುಂದಾಗಿದ್ದಾನೆ. ಈ ಸಂದರ್ಭದಲ್ಲಿ ಆತನನ್ನು ಜನರು ಹಿಡಿದಿದ್ದಾರೆ. ಅಷ್ಟರಲ್ಲಿ ರೈಲು ವೇಗ ಪಡೆದು ಮುಂದಿನ ನಿಲ್ದಾಣದಲ್ಲಿ ತಲುಪಿ ನಿಂತಿದೆ. ಪ್ರಯಾಣದ ಸಮಯದಲ್ಲಿ, ಈ ಕಳ್ಳನು ನನ್ನನ್ನು ಬಿಟ್ಟು ಹೋಗಬೇಡಿ, ಇಲ್ಲದಿದ್ದರೆ ನಾನು ಸಾಯುತ್ತೇನೆ ಎಂದು ಜನರಿಗೆ ಮನವಿ ಮಾಡುತ್ತಾನೆ.
ಪ್ರಯಾಣದಲ್ಲಿ ಕಳ್ಳನ ಮೇಲೆ ಕರುಣೆ ತೋರುತ್ತಿದ್ದಾಗ ಜನರು ಕಳ್ಳನನ್ನು ಬಿಗಿಯಾಗಿ ಹಿಡಿದುಕೊಂಡಿದ್ದಾರೆ. ಕಳ್ಳನ ಕೈ ಸಾಕಷ್ಟು ನೋವಾಗಿದೆ. ಆ ನೋವು ಅವನ ಮುಖದಿಂದ ಗೋಚರಿಸುತ್ತದೆ. ಈ ವೈರಲ್ ವಿಡಿಯೋ ಬಿಹಾರದ ಬೇಗುಸರಾಯ್ ನಲ್ಲಿ ನಡೆದಿದೆ ಎನ್ನಲಾಗಿದೆ. ಈ ಘಟನೆ ಬುಧವಾರ ರಾತ್ರಿ 10.30ಕ್ಕೆ ಸಮಸ್ತಿಪುರ್-ಕತಿಹಾರ್ ಪ್ಯಾಸೆಂಜರ್ ರೈಲಿನಲ್ಲಿ ಸಾಹೇಬುಪರ್ ಕಮಲ್-ಉಮೇಶನಗರ ನಡುವೆ ನಡೆದಿದೆ ಎಂದು ಹೇಳಲಾಗುತ್ತಿದೆ. ಪ್ರಯಾಣಿಕರು ಕಳ್ಳನನ್ನು ಕಿಟಕಿಯ ಮೂಲಕ ಹಿಡಿದುಕೊಂಡು 15 ಕಿ.ಮೀ. ಕರೆದುಕೊಂಡು ಹೋಗಿದ್ದಾರೆ.
ಇದನ್ನೂ ಓದಿ: Video : ಟೋಲ್ ಗೇಟ್ ನಲ್ಲಿ ಮಹಿಳೆಯರಿಬ್ಬರ ಹೊಡೆದಾಟ .! ನೋಡುತ್ತಾ ನಿಂತ ಪುರುಷರು
ವೈರಲ್ ಆಗಿರುವ ವೀಡಿಯೊದಲ್ಲಿ, ಈ ಕಳ್ಳ ಫೋನ್ ಕಿತ್ತುಕೊಳ್ಳಲು ರೈಲಿನ ಕಿಟಕಿಯ ಬಳಿ ಬಂದಿದ್ದಾನೆ. ಸರಗಳ್ಳತನ ಮಾಡಲು ಮುಂದಾದ ಕೂಡಲೇ ರೈಲು ವೇಗ ಪಡೆದುಕೊಂಡಿದೆ. ಕಳ್ಳನ ಅಸಹಾಯಕತೆ ಕಂಡು ಜನ ಕಳ್ಳನನ್ನು ಕೈಬಿಡಲಿಲ್ಲ. ಇದೇ ವೇಳೆ ಕಳ್ಳನೂ ಕೂಡ, ‘ನಾನು ತಪ್ಪು ಮಾಡಿದ್ದೇನೆ ದಯವಿಟ್ಟು ನನ್ನನ್ನು ಬಿಟ್ಟು ಹೋಗಬೇಡಿ’ ಎಂದು ಜನರಲ್ಲಿ ಮನವಿ ಮಾಡುತ್ತಲೇ ಇದ್ದಾನೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.