Video : ಟೋಲ್ ಗೇಟ್ ನಲ್ಲಿ ಮಹಿಳೆಯರಿಬ್ಬರ ಹೊಡೆದಾಟ .! ನೋಡುತ್ತಾ ನಿಂತ ಪುರುಷರು

Toll Booth Employee And Passenger Fight:ಇಬ್ಬರು ಮಹಿಳೆಯರು ಜುಟ್ಟು ಜುಟ್ಟು ಹಿಡಿಸು ಜಗಳವಾಡುತ್ತಿರುವ ವಿಡಿಯೋ ಇದೀಗ ತೀವ್ರ ವೈರಲ್ ಆಗುತ್ತಿದೆ.  ಇಬ್ಬರು ಮಹಿಳೆಯರು ಈ ಪರಿ ಹೊಡೆದಾಡಿಕೊಳ್ಳುವಾಗಲೂ ಅಲ್ಲಿದ್ದ ಅಷ್ಟೂ  ಜನ ಸುಮ್ಮನೆ ನಿಂತು ನೋಡುತ್ತಿರುತ್ತಾರೆ.

Written by - Ranjitha R K | Last Updated : Sep 16, 2022, 01:21 PM IST
  • ರಸ್ತೆ ಮಧ್ಯೆ ಮಹಿಳೆಯರ ಭೀಕರ ಕಾಳಗ
  • ಕೂದಲು ಹಿಡಿದು, ಸಿಕ್ಕಸಿಕ್ಕಲೆಲ್ಲ ಹೊಡೆದಾಡಿಕೊಂಡ ಮಹಿಳೆಯರು
  • ವೈರಲ್ ಆಯಿತು ಹೊಡೆದಾಟದ ವಿಡಿಯೋ
Video : ಟೋಲ್ ಗೇಟ್ ನಲ್ಲಿ ಮಹಿಳೆಯರಿಬ್ಬರ ಹೊಡೆದಾಟ .! ನೋಡುತ್ತಾ ನಿಂತ ಪುರುಷರು   title=
womes fighting (photo twitter)

Toll Booth Employee And Passenger Fight : ಇಬ್ಬರು ಮಹಿಳೆಯರು ಜುಟ್ಟು ಜುಟ್ಟು ಹಿಡಿದು ಜಗಳವಾಡುತ್ತಿರುವ ವಿಡಿಯೋ ಇದೀಗ ತೀವ್ರ ವೈರಲ್ ಆಗುತ್ತಿದೆ. ಈ ವಿಡಿಯೋನಲ್ಲಿರುವ ದೃಶ್ಯ  ನಾಸಿಕ್‌ನ ಪಿಂಪಲ್‌ಗಾಂವ್ ಟೋಲ್ ಪ್ಲಾಜಾದಲ್ಲಿ ನಡೆದಿರುವಥದ್ದು ಎಂದು ತಿಳಿದು  ಬಂದಿದೆ. ಇಲ್ಲಿ ಹೊಡೆದಾಡಿ ಕೊಳ್ಳುತ್ತಿರುವವರಲ್ಲಿ ಒಬ್ಬರು ಮಹಿಳಾ ಪ್ರಯಾಣಿಕರಾಗಿದ್ದರೆ, ಇನ್ನೊಬ್ಬರು ಟೋಲ್ ಬೂತ್ ‌ಉದ್ಯೋಗಿ. ಟೋಲ್ ಶುಲ್ಕಕ್ಕೆ ಸಂಬಂಧಿಸಿದಂತೆ ಈ ಕಾದಾಟ ನಡೆದಿದೆ ಎನ್ನಲಾಗಿದೆ. 

ಟೋಲ್ ಬೂತ್ ನಲ್ಲಿ ಶುಲ್ಕದ ವಿಚಾರವಾಗಿ ಮಹಿಳೆಯರ  ಫೈಟ್ : 
ಟೋಲ್ ಶುಲ್ಕಕ್ಕೆ ಸಂಬಂಧಿಸಿದಂತೆ ಮೊದಲು ವಾಗ್ವಾದ ನಡೆದಿದೆ, ನಂತರ ಅದು ಕೈ ಕೈ ಮಿಲಾಯಿಸುವವರೆಗೂ ಹೋಗಿದೆ.  ಇಬ್ಬರೂ ಮಹಿಳೆಯರು ಪರಸ್ಪರ ತಳ್ಳಾಡಿಕೊಂಡು, ಕೂದಲು ಎಳೆದಾಡಿಕೊಂಡು  ಹೊಡೆದಾಡಿದ್ದಾರೆ. ಇಬ್ಬರು ಮಹಿಳೆಯರು ಈ ಪರಿ ಹೊಡೆದಾಡಿಕೊಳ್ಳುವಾಗಲೂ ಅಲ್ಲಿದ್ದ ಅಷ್ಟೂ  ಜನ ಸುಮ್ಮನೆ ನಿಂತು ನೋಡುತ್ತಿರುತ್ತಾರೆ. ಇನ್ನು ಕೆಲವರು ವಿಡಿಯೋ ಮಾಡುವುದರಲ್ಲಿಯೇ  ಫುಲ್ ಬ್ಯುಸಿಯಾಗಿದ್ದರು. 

ಇದನ್ನೂ ಓದಿ : video : ಹುಡುಗಿಯನ್ನು ಇಂಪ್ರೆಸ್ ಮಾಡಲು ಹುಡುಗ ಮಾಡಿಬಿಟ್ಟನಾ ಈ ಕೆಲಸ
 
ಶ್ರೀ ರಾಜ್ ಮಾಝಿ ಎಂಬ ಟ್ವಿಟ್ಟರ್ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ.  ಈ ವಿಡಿಯೋ ವೀಕ್ಷಿಸಿದ ಅನೇಕರು ಇದಕ್ಕೆ ಕಾಮೆಂಟ್ ಮಾಡಿದ್ದಾರೆ. 'ಎಲ್ಲರೂ ವೀಡಿಯೊ ಮಾಡುವುದರಲ್ಲೇ ಮುಳುಗಿದ್ದಾರೆ, ಯಾರು ಕೂಡ ಜಗಳ ನಿಲ್ಲಿಸುವ ಯತ್ನ ಮಾಡುತ್ತಿಲ್ಲ ಎಂದು ಒಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. 

 

ಇದನ್ನೂ ಓದಿ : Viral Video : ಬೈಕಿನ ಹಿಂಬದಿ ಸೀಟಲ್ಲಿ ಎತ್ತು ಕಟ್ಟಿ ಕೂರಿಸಿ ವೇಗವಾಗಿ ಸವಾರಿ ಮಾಡಿದ ಭೂಪ

ಇಂದಿನ ಕಾಲದಲ್ಲಿ ಜಗಳ ನಿಲ್ಲಿಸುವ ಬದಲು ವಿಡಿಯೋ ಮಾಡುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನು ಟೋಲ್ ಬೂತ್ ನೌಕರನ ಮೇಲೆ ಪ್ರಯಾಣಿಕರು ಹಲ್ಲೆ ನಡೆಸಿರುವುದು ಇದೇ ಮೊದಲಲ್ಲ.  ವ್ಯಕ್ತಿಯೊಬ್ಬ ಟೋಲ್ ಪಾವತಿಸಲು ನಿರಾಕರಿಸಿ  ಮಹಿಳಾ ಉದ್ಯೋಗಿ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಬರೆದಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News