Viral Video : ಇಂಟರ್ನೆಟ್ ಜಗತ್ತು ವಿಭಿನ್ನ ಜಗತ್ತು. ಇಲ್ಲಿ   ಹಲವಾರು ಅದ್ಭುತಗಳನ್ನ ಕಾಣಬಹುದು. ಇಲ್ಲಿ ಹಂಚಿಕೊಳ್ಳಲಾದ ಸಂದೇಶಗಳು, ಫೋಟೋಗಳು ಮತ್ತು ವೀಡಿಯೊಗಳು ನಮಗೆ ಅನೇಕ ಸಂದೇಶಗಳನ್ನು ರವಾನಿಸುತ್ತವೆ. ಇದು ಉಪಯುಕ್ತ ಮಾಹಿತಿಯೊಂದಿಗೆ ಮನರಂಜನೆ ನೀಡುವ ಮಾರ್ಗವೂ ಹೌದು. ಇವುಗಳಲ್ಲಿ, ಪ್ರಾಣಿಗಳ ವೀಡಿಯೊಗಳು ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿವೆ. 


COMMERCIAL BREAK
SCROLL TO CONTINUE READING

ಪ್ರಾಣಿಗಳಿಗೆ ಸಂಬಂಧಿಸಿದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ವೈರಲ್ ಆಗುತ್ತಿವೆ. ಅವುಗಳಲ್ಲಿ ಕೋತಿಯ ವಿಡಿಯೋ ಕೂಡಾ ಹೆಚ್ಚು ಹೆಚ್ಚು ವೈರಲ್ ಆಗುತ್ತಿವೆ. ಕೋತಿಗಳ ಮಾನಸಿಕ ಸ್ಥಿತಿಯನ್ನು ಊಹಿಸುವುದು ಸಾಧ್ಯವಾಗುವುದಿಲ್ಲ. ಕೋತಿಗಳ ತಮಾಷೆಯ ವಿಡಿಯೋಗಳನ್ನು ಕೂಡಾ ನಾವು ನೋಡಿರುತ್ತೇವೆ. ಇತರರ ಮೇಲೆ ದಾಳಿ ಮಾಡುವ ವಿಡಿಯೋಗಳು ಕೂಡಾ ನಮ್ಮ ಕಣ್ಣಿಗೆ ಬಿದ್ದಿರುತ್ತವೆ. ಇನ್ನು ತಂಟೆ, ತೀಟೆ ಮಾಡುವ ವಿಡಿಯೋಗಳು ಕೂಡಾ ಇರುತ್ತವೆ.  ಇಲ್ಲಿ ಕೋಪಗೊಂಡ ಕೋತಿಯ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋ ನೋಡುವಾಗ ಆಶ್ಚರ್ಯವಾಗುತ್ತದೆ. 


ಇದನ್ನೂ ಓದಿ : ವರನ ಕೊರಳಲ್ಲಿ ನೋಟಿನ ವಿಶಾಲ ಗಾತ್ರದ ಮಾಲೆ, 'ಭಾಯಿ ಮೊದಲು ಮನೆ ಗೋಡೆ ಕಟ್ಟಿಸಿಕೊ' ಎಂದ ನೆಟ್ಟಿಗರು!


ಈ ವಿಡಿಯೋ ನೋಡುವಾಗ ನಗು ಬರುವುದಲ್ಲದೆ, ಆತಂಕವೂ ಆಗುತ್ತದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೀಡಿಯೊದಲ್ಲಿ, ಒಂದು ಹುಡುಗ ಮತ್ತು ಹುಡುಗಿ ನದಿಯಲ್ಲಿ ಸ್ನಾನ ಮಾಡುವುದನ್ನು ಕಾಣಬಹುದು. ಕೋತಿ ಸ್ವಲ್ಪ ಹೊತ್ತಿನವರೆಗೆ ಇಬ್ಬರನ್ನೂ ದಿಟ್ಟಿಸಿ ನೋಡುತ್ತದೆ. ಕೋತಿಯನ್ನು ನೋಡಿದ ಹುಡುಗಿ ಅದರ ಮೇಲೆ ನೀರು ಎರಚಲು ಆರಂಭಿಸುತ್ತಾಳೆ. ಮೆಟ್ಟಿಲುಗಳ ಮೇಲೆ ಕುಳಿತಿದ್ದ ಕೋತಿ ಇದ್ದಕ್ಕಿದ್ದಂತೆಯೇ ಅಲ್ಲಿಂದ ನೀರಿಗಿಳಿಯಲು ಪ್ರಾರಂಭಿಸುತ್ತದೆ. ಕೋತಿ ನೀರಿಗೆ  ಇಳಿಯುವುದನ್ನು ಗಮನಿಸಿದ ಹುಡುಗಿ ಅಲ್ಲಿಂದ ಓಡಿ ಹೋಗುತ್ತಾಳೆ. 


ನಂತರ ಯುವಕ ಕೋತಿಯನ್ನು ಗಮನಿಸುತ್ತಾ ನಿಧಾನವಾಗಿ ಹೊರಡಲು ಪ್ರಾರಂಭಿಸುತ್ತಾನೆ. ಆದರೆ, ಕೋತಿ ನದಿಗೆ ಹಾರುತ್ತದೆ. ಅದನ್ನು ನೋಡಿದ ಯುವಕ ಅಲ್ಲಿಂದ ಓಡಲು ಆರಂಭಿಸುತ್ತಾನೆ. ಆದರೆ ಕೋತಿ ಕೂಡಾ ಆತನನ್ನು ಹಿಂಬಾಲಿಸುತ್ತದೆ. 


ಇದನ್ನೂ ಓದಿ :  ಶವಗಳು ನೀರಿನಲ್ಲಿ ಏಕೆ ತೇಲುತ್ತವೆ ಗೊತ್ತಾ?.. ಕಾರಣ ತಿಳಿದ್ರೆ ಶಾಕ್‌ ಆಗೋದು ಗ್ಯಾರಂಟಿ!


ಕೋತಿಯ ವಿಡಿಯೋ ಇಲ್ಲಿದೆ :



ಈ ವಿಡಿಯೋ ಅಂತರ್ಜಾಲದಲ್ಲಿ ವೈರಲ್ :
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ. ಇದು ಸಾಕಷ್ಟು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಇದಕ್ಕೆ ನೆಟ್ಟಿಗರು ಕೂಡಾ ಸಾಕಷ್ಟು ಸಂಖ್ಯೆಯಲ್ಲಿ ಕಾಮೆಂಟ್ ಮಾಡಿದ್ದಾರೆ. 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.