ವರನ ಕೊರಳಲ್ಲಿ ನೋಟಿನ ವಿಶಾಲ ಗಾತ್ರದ ಮಾಲೆ, 'ಭಾಯಿ ಮೊದಲು ಮನೆ ಗೋಡೆ ಕಟ್ಟಿಸಿಕೊ' ಎಂದ ನೆಟ್ಟಿಗರು!

Viral Video: ಸಾಮಾನ್ಯವಾಗಿ ವರನ ಕೊರಳಿಗೆ ನೋಟುಗಳ ಮಾಲೆ ಹಾಕುವುದನ್ನು ನೀವು ವಿವಾಹ ಸಮಾರಂಬಗಳಲ್ಲಿ ನೋಡಿರಬಹುದು. ಇಲ್ಲಿ ಓರ್ವ ವರನ ಕೊರಳಿಗೆ ಹಾಕಿರುವ  ಮಾಲೆಯನ್ನು ನೋಡಿದ ಸಾಮಾಜಿಕ ಜಾಲತಾಣ ಬಳಕೆದಾರರು ಬೆಚ್ಚಿಬಿದ್ದಿದ್ದಾರೆ. ಹೌದು, ವೀಡಿಯೋ ನೋಡಿದ ನಂತರ ಬಹುತೇಕ ಜನರು 'ಭಾಯಿ ಮೊದಲು ಮನೆ ಗೋಡೆ ಕಟ್ಟಿಸಿಕೊ' ಎಂದು ಸಲಹೆ ನೀಡುತ್ತಿದ್ದಾರೆ. (Viral News In Kannada)  

Written by - Nitin Tabib | Last Updated : Nov 21, 2023, 06:56 PM IST
  • ಈ ಆಘಾತಕಾರಿ ವೀಡಿಯೊವನ್ನು @dilshadkhan_kureshipur ಅವರು ನವೆಂಬರ್ 13 ರಂದು ಪೋಸ್ಟ್ ಮಾಡಿದ್ದಾರೆ ಮತ್ತು
  • ಶೀರ್ಷಿಕೆಯಲ್ಲಿ - ಇಪ್ಪತ್ತು ಲಕ್ಷ ಮೌಲ್ಯದ ಹಾರ ಎಂದು ಬರೆದುಕೊಂಡಿದ್ದಾರೆ. ಈ ರೀಲ್ 13.9 ಮಿಲಿಯನ್ (1 ಕೋಟಿಗೂ ಹೆಚ್ಚು) ವೀಕ್ಷಣೆಗಳನ್ನು
  • ಮತ್ತು 2 ಲಕ್ಷ 24 ಸಾವಿರ ಲೈಕ್‌ಗಳನ್ನು ಪಡೆದುಕೊಂಡಿದೆ. ಹಲವು ಜನರು ತಮ್ಮ ಪ್ರತಿಕ್ರಿಯೆಗಳನ್ನು ಕೂಡ ನೀಡಿದ್ದಾರೆ.
ವರನ ಕೊರಳಲ್ಲಿ ನೋಟಿನ ವಿಶಾಲ ಗಾತ್ರದ ಮಾಲೆ, 'ಭಾಯಿ ಮೊದಲು ಮನೆ ಗೋಡೆ ಕಟ್ಟಿಸಿಕೊ' ಎಂದ ನೆಟ್ಟಿಗರು! title=

ನವದೆಹಲಿ: ಮದುವೆ ಸೀಸನ್ ಶುರುವಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಅನೇಕ ಜನರು ತಮ್ಮ ಮದುವೆಯನ್ನು ಅವಿಸ್ಮರಣೀಯವಾಗಿಸಲು ಏನಾದರೂ ವಿಶಿಷ್ಟ ಸಂಗತಿಗಳನ್ನು ಮಾಡುತ್ತಾರೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಅಂತಹದ್ದೊಂದು ಹಾರ ಸಾಹಸ ಮಾಡಿದ್ದು, ಆತನ ವಿಡಿಯೋ ಅಂತರ್ಜಾಲದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಉತ್ತರ ಭಾರತದಲ್ಲಿ ವರನಿಗೆ 10, 20, 50, 100, 200 ಮತ್ತು 500 ರೂಪಾಯಿಗಳ ನೋಟುಗಳಿಂದ ತಯಾರಿಸಲಾದ ಹಾರನ್ನು ನೀಡಲಾಗುತ್ತದೆ ಎಂದು ನಿಮಗೆ ತಿಳಿದಿದೆ. (Viral News In Kannada)

ಆದಾಗ್ಯೂ, ಮಾಲೆಯ ಗಾತ್ರವು ಅಷ್ಟೊಂದು ದೊಡ್ಡದಾಗಿರುವುದಿಲ್ಲ. ಆದರೆ ಒಬ್ಬ ವ್ಯಕ್ತಿ ವಿಶಾಲ ಗಾತ್ರದ ಅಂತಹದ್ದೊಂದು ಮಾಲೆಯನ್ನು ತಯಾರಿಸಿ ಅದನ್ನು ಧರಿಸಿದ್ದು, ನೋಡುಗರನ್ನು ಬೆಚ್ಚಿ ಬೀಳುವಂತೆ ಮಾಡಿದೆ! ಅತ್ಯಂತ ಆಘಾತಕಾರಿ ವಿಷಯವೆಂದರೆ ಈ ಮಾಲೆ 10-50 ರೂಪಾಯಿ ನೋಟುಗಳದ್ದಲ್ಲ ಬದಲಾಗಿ 500 ರೂಪಾಯಿ ನೋಟುಗಳದ್ದು.

ವಿಡಿಯೋವನ್ನು 1 ಕೋಟಿಗೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ
ಈ ಆಘಾತಕಾರಿ ವೀಡಿಯೊವನ್ನು @dilshadkhan_kureshipur ಅವರು ನವೆಂಬರ್ 13 ರಂದು ಪೋಸ್ಟ್ ಮಾಡಿದ್ದಾರೆ ಮತ್ತು ಶೀರ್ಷಿಕೆಯಲ್ಲಿ - ಇಪ್ಪತ್ತು ಲಕ್ಷ ಮೌಲ್ಯದ ಹಾರ ಎಂದು ಬರೆದುಕೊಂಡಿದ್ದಾರೆ. ಈ ರೀಲ್ 13.9 ಮಿಲಿಯನ್ (1 ಕೋಟಿಗೂ ಹೆಚ್ಚು) ವೀಕ್ಷಣೆಗಳನ್ನು ಮತ್ತು 2 ಲಕ್ಷ 24 ಸಾವಿರ ಲೈಕ್‌ಗಳನ್ನು ಪಡೆದುಕೊಂಡಿದೆ. ಹಲವು ಜನರು ತಮ್ಮ ಪ್ರತಿಕ್ರಿಯೆಗಳನ್ನು ಕೂಡ ನೀಡಿದ್ದಾರೆ.

ಇದನ್ನೂ ಓದಿ-ನ್ಯೂಯಾರ್ಕ್ ಟೈಮ್ಸ್ ಸ್ಕ್ವೇಯರ್ ನಲ್ಲಿ 'ಹರೇ ಕೃಷ್ಣ, ಹರೇ ರಾಮಾ' ನೃತ್ಯಕ್ಕೆ ಸ್ಪೈಡರ್ ಮ್ಯಾನ್ ಎಂಟ್ರಿ... ವಿಡಿಯೋ ನೋಡಿ

ಇಷ್ಟು ಉದ್ದದ 500 ರೂಪಾಯಿಯ ಹಾರವನ್ನು ನೀವೆಲ್ಲಾದರೂ ನೋಡಿದ್ದೀರಾ?
ವೈರಲ್ ಆಗಿರುವ ಇನ್‌ಸ್ಟಾಗ್ರಾಮ್ ರೀಲ್‌ನಲ್ಲಿ, ಕೆಲವರು ನೆಲದ ಮೇಲೆ ಮತ್ತು ಕೆಲವರು ಟೆರೇಸ್‌ನಲ್ಲಿ ನಿಂತಿರುವುದನ್ನು ನೀವು ನೋಡಬಹುದು. ವರ ಕೂಡ ಟೆರೇಸ್ ಮೇಲೆ ಇದ್ದಾನೆ. ಆತನ ಕೊರಳಲ್ಲಿ ವಿಶಾಲ ಗಾತ್ರದ ನೋಟುಗಳ ಹಾರವಿದ್ದು ಅದು ನೆಲಕ್ಕೆ ತಾಗುತ್ತಿದೆ. ಹಾರ ಎಷ್ಟೊಂದು ಉದ್ದವಾಗಿದೆ ಎಂದರೆ, ಅದು ಟೆರೇಸ್ ನಿಂದ ನೆಲಕ್ಕೆ ಬಂದು ನೆಲದ ಮೇಲೆಯೂ ಕೂಡ ತುಂಬಾ ದೂರದವರೆಗೆ ಹರಡಿಕೊಂಡಿದೆ. ಅಷ್ಟೇ ಅಲ್ಲ, ಈ ಹಾರ 10-50 ರೂಪಾಯಿ ನೋಟುಗಳದ್ದಲ್ಲ ಬದಲಾಗಿ 500 ರೂಪಾಯಿ ನೋಟುಗಳದ್ದಾಗಿದೆ ಎನ್ನುವುದು ಇನ್ನೂ ಅವಾಕ್ಕಾಗಿಸುವಂತಿದೆ. ಈ ಕಾರಣಕ್ಕಾಗಿಯೇ ಈ ವೀಡಿಯೋವನ್ನು ಅಂತರ್ಜಾಲದಲ್ಲಿ ಇದು ಅತಿ ಹೆಚ್ಚು ವೀಕ್ಷಣೆಗೆ ಒಳಗಾಗುತ್ತಿದೆ. 

ಇದನ್ನೂ ಓದಿ-ನ್ಯೂಯಾರ್ಕ್ ಟೈಮ್ಸ್ ಸ್ಕ್ವೇಯರ್ ನಲ್ಲಿ 'ಹರೇ ಕೃಷ್ಣ, ಹರೇ ರಾಮಾ' ನೃತ್ಯಕ್ಕೆ ಸ್ಪೈಡರ್ ಮ್ಯಾನ್ ಎಂಟ್ರಿ... ವಿಡಿಯೋ ನೋಡಿ

ಅನೇಕ ಬಳಕೆದಾರರು ಇದೇನು ಅಸಂಬದ್ಧ ಎಂದು ಹೇಳಿದರೆ. ಒಬ್ಬ ಬಳಕೆದಾರ- ಇದು ಕೇವಲ ಒಂದು ಶೋಆಫ್ ಎಂದಿದ್ದಾರೆ. ಕೆಲವರು ಮಾಲೆ ಧರಿಸಿದ ವ್ಯಕ್ತಿಗೆ ಮೊದಲು ಮನೆ ಕಟ್ಟಿಸಿಕೊಳ್ಳಿ ಭಾಯಿ ಎಂದು ಸಲಹೆ ನೀಡಿದ್ದಾರೆ. ಕೆಲವರು ಗೋಡೆಗಳಿಗೆ ಪ್ಲಾಸ್ಟರ್ ಮಾಡಿಸಿಕೊ ಆಯ್ತಾ! ಎನ್ನುತ್ತಿದ್ದಾರೆ. ಈ ವಿಡಿಯೋಗೇ ನಿಮ್ಮ ಅನಿಸಿಕೆ ಕಾಮೆಂಟ್ ವಿಭಾಗದಲ್ಲಿ ತಿಳಿಸಲು ಮರೆಯಬೇಡಿ.

ಇಲ್ಲಿದೆ ವೈರಲ್ ವಿಡಿಯೋ

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News