Viral Video: ಇಂದಿನ ಸಮಾಜದಲ್ಲಿ ಅನ್ನ ಹಾಕುವವರನ್ನೇ ಸಾಯಿಸುವ ಪ್ರಕರಣಗಳನ್ನು ನಿರಂತರವಾಗಿ ಕಾಣುತ್ತಿದ್ದೇವೆ. ಅಲ್ಲದೇ ಸಾಕಷ್ಟು ಕಷ್ಟಪಟ್ಟು ಸಾಕಿದ ತಂದೆ-ತಾಯಿಯರ ಆರೈಕೆ ಮಾಡದ ಅದೆಷ್ಟೋ ಮಾನವ ಮೃಗಗಳಿವೆ. ತಂದೆ ತಾಯಿಯ ಅಂತ್ಯಸಂಸ್ಕಾರಕ್ಕೂ ಬರದ ದುಷ್ಟರು ಇದ್ದಾರೆ. ಇಂತಹ ಸಮಾಜದಲ್ಲಿ ಅನ್ನ ಕೊಟ್ಟವನು ಸತ್ತು ಹೋಗಿದ್ದಕ್ಕೆ ಈ ಮಂಗನ ಹೃದಯ ಮಿಡಿದಿದೆ. ಶವದ ಬಳಿ ಬಂದು ಮುತ್ತಿಕ್ಕಿ ನಮನ ಸಲ್ಲಿಸಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ:  Video Viral : ಸಿಂಹಗಳ ಜೊತೆ ಫುಟ್ಬಾಲ್ ಆಡುವ ವ್ಯಕ್ತಿ.. ನೋಡಿದ್ರೆ ರೊನಾಲ್ಡೊ ಕೂಡ ಶಾಕ್ ಆಗ್ತಾರೆ


ಇಂತಹದೊಂದು ಮನಕಲಕುವ ದೃಶ್ಯ ಕಂಡುಬಂದಿದ್ದು ಶ್ರೀಲಂಕಾದ ಪೂರ್ವ ಪ್ರಾಂತ್ಯದ ಬಟ್ಟಿಕಲೋವಾ ಜಿಲ್ಲೆಯ ಹಳ್ಳಿಯಲ್ಲಿ. ಈ ಗ್ರಾಮದ ಮನೆಯ ವ್ಯಕ್ತಿಯೊಬ್ಬರ ಜೊತೆ ಮಂಗವೊಂದು ಸ್ನೇಹಿದಿಂದ ಇತ್ತು. ಪ್ರತಿ ದಿನ ಮನೆಗೆ ಬಂದು ಕೊಟ್ಟ ತಿಂಡಿ ತಿನ್ನುತ್ತಿತ್ತು. ಆಮೇಲೆ ಆ ವ್ಯಕ್ತಿಯ ಜೊತೆ ಮೋಜು ಮಸ್ತಿ ಮಾಡಿ ಆಟವಾಡುತ್ತಿತ್ತು. ಹೀಗೆ ಕೋತಿ ಮತ್ತು ವ್ಯಕ್ತಿಯ ನಡುವೆ ಉತ್ತಮ ಆತ್ಮೀಯತೆ ರೂಪುಗೊಂಡಿತ್ತು. ದುರದೃಷ್ಟವಶಾತ್, ಆ ವ್ಯಕ್ತಿ ಅಕ್ಟೋಬರ್ 18 ರಂದು ನಿಧನರಾದರು. ಅವರ ಅಂತಿಮ ಸಂಸ್ಕಾರ ನಡೆಸಲು ಕುಟುಂಬಸ್ಥರು ಸಿದ್ಧರಾಗಿದ್ದರು.


 


Puneeth Parva : ಈ ನಟಿಯ ಕೈ ಮೇಲಿದೆ ಅಪ್ಪು ಹೆಸರಿನ ಟ್ಯಾಟೂ.! ಇದಕ್ಕಿದೆ ವಿಶೇಷ ನಂಟು


ಮಂಗ ಮತ್ತು ಮಾನವನ ಈ ಸ್ನೇಹಕ್ಕೆ ಬೆಲೆ ಕಟ್ಟಲಾಗದು. ಅಗಲಿ ಹೋದ ಸ್ನೇಹಿತನನ್ನು ಮುತ್ತಿಕ್ಕಿ ಬೀಳ್ಕೊಟ್ಟ ಕೋತಿಯ ವಿಡಿಯೋ ನೆಟ್ಟಿಗರ ಮನಮುಟ್ಟುತ್ತಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್‌ ಆಗುತ್ತಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.