Video Viral : ಸಿಂಹಗಳ ಜೊತೆ ಫುಟ್ಬಾಲ್ ಆಡುವ ವ್ಯಕ್ತಿ.. ನೋಡಿದ್ರೆ ರೊನಾಲ್ಡೊ ಕೂಡ ಶಾಕ್ ಆಗ್ತಾರೆ!

Video Viral : ವ್ಯಕ್ತಿಯೊಬ್ಬ ಸೂಟು ಬೂಟು ಧರಿಸಿ ಕಾಡನ್ನು ತಲುಪುತ್ತಾನೆ ಮತ್ತು ಸಿಂಹಗಳೊಂದಿಗೆ ಫುಟ್ಬಾಲ್ ಆಡಲು ಪ್ರಾರಂಭಿಸುತ್ತಾನೆ.   

Written by - Chetana Devarmani | Last Updated : Oct 23, 2022, 03:17 PM IST
  • ಸಿಂಹಗಳ ಜೊತೆ ಫುಟ್ಬಾಲ್ ಆಡುವ ವ್ಯಕ್ತಿ
  • ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್‌
  • ನೋಡಿದ್ರೆ ರೊನಾಲ್ಡೊ ಕೂಡ ಶಾಕ್ ಆಗ್ತಾರೆ!
Video Viral : ಸಿಂಹಗಳ ಜೊತೆ ಫುಟ್ಬಾಲ್ ಆಡುವ ವ್ಯಕ್ತಿ.. ನೋಡಿದ್ರೆ ರೊನಾಲ್ಡೊ ಕೂಡ ಶಾಕ್ ಆಗ್ತಾರೆ! title=
ವಿಡಿಯೋ ವೈರಲ್‌

Video Viral : ಕಾಡಿನಲ್ಲಿ ಸಿಂಹವನ್ನು ಎದುರಿಸಲು ಬೇರೆ ಯಾವುದೇ ಪ್ರಾಣಿ ಧೈರ್ಯ ಮಾಡುವುದಿಲ್ಲ. ಆದರೆ ಒಬ್ಬ ವ್ಯಕ್ತಿಯು ಯಾವುದೇ ರಕ್ಷಣೆಯಿಲ್ಲದೆ ಸಿಂಹಗಳ ಭಯಂಕರ ಗುಂಪನ್ನು ತಲುಪಿದರೆ, ಅದರ ನೋಟ ಹೇಗಿರುತ್ತದೆ ಎಂದು ಊಹಿಸಿ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿರುವ ವಿಡಿಯೋದಲ್ಲಿ ಇಂತಹದೊಂದು ದೃಶ್ಯವಿದೆ. ಇಲ್ಲಿ ಒಬ್ಬ ವ್ಯಕ್ತಿ ಕಾಡಿನಲ್ಲಿ ಸಿಂಹಗಳ ಜೊತೆ ಫುಟ್ಬಾಲ್ ಆಡುತ್ತಿದ್ದಾನೆ.  

ಇದನ್ನೂ ಓದಿ : Viral News: ಆಮೆ ಪದಾರ್ಥ ಸುಟ್ಟಿತೆಂದು ಹೆಂಡತಿಯನ್ನೇ ಕೊಂದುತಿಂದ ಪತಿ!

ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ, ಸೂಟ್-ಬೂಟ್ ಧರಿಸಿದ ವ್ಯಕ್ತಿಯೊಬ್ಬ ಫುಟ್‌ಬಾಲ್‌ನೊಂದಿಗೆ ಕಾಡಿನಲ್ಲಿರುವ ಸಿಂಹಗಳ ಗುಂಪಿನ ಬಳಿ ಹೋಗುವುದನ್ನು ನೋಡಬಹುದು. ತಕ್ಷಣವೇ ಅವನ ಮತ್ತು ಸಿಂಹಗಳ ನಡುವೆ ಫುಟ್ಬಾಲ್ ಪಂದ್ಯ ಪ್ರಾರಂಭವಾಗುತ್ತದೆ. ಪ್ರಕೃತಿಗೆ ವಿರುದ್ಧವಾಗಿ, ಎಲ್ಲಾ ಸಿಂಹಗಳು ಅವನೊಂದಿಗೆ ಫುಟ್ಬಾಲ್ ಆಡುವಲ್ಲಿ ನಿರತವಾಗುತ್ತವೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ವ್ಯಕ್ತಿಯೂ ಅವರೊಂದಿಗೆ ಆಟವನ್ನು ಆನಂದಿಸುತ್ತಿದ್ದಾನೆ.  

 

 

ಸಾಮಾನ್ಯವಾಗಿ ಸಿಂಹಗಳು ತಮ್ಮ ಬಳಿ ಬರುವ ಯಾವುದೇ ವ್ಯಕ್ತಿ ಅಥವಾ ಪ್ರಾಣಿಯನ್ನು ಬೇಟೆಯೆಂದು ಪರಿಗಣಿಸುವುದನ್ನು. ಆದರೆ ಈ ವಿಡಿಯೋದಲ್ಲಿ ತೋರಿಸಿರುವ ದೃಶ್ಯ ನೋಡಿದರೆ ಆ ವ್ಯಕ್ತಿಯೊಂದಿಗೆ ಸಿಂಹಗಳಿಗೆ ಗಾಢವಾದ ಸ್ನೇಹವಿರಬಹುದು ಎನಿಸುತ್ತದೆ. ವಿಡಿಯೋವನ್ನು feline.unity ಎಂಬ Instagram ಖಾತೆಗೆ ಅಪ್‌ಲೋಡ್ ಮಾಡಲಾಗಿದೆ.

ಇದನ್ನೂ ಓದಿ : Viral Video: ಬಾಯಿಯಿಂದ ವಿಷ ಉಗುಳುತ್ತಿರುವ ಹಾವನ್ನು ಎಲ್ಲಾದರೂ ನೋಡಿದ್ದೀರಾ... ವಿಡಿಯೋ ನೋಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News