Funny Video : ಪ್ರಾಣಿಗಳ ವಿಡಿಯೋಗಳು ಪ್ರತಿ ದಿನ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತವೆ. ಕೆಲವು ವಿಡಿಯೋಗಳು ಜನರನ್ನು ನಕ್ಕುನಲಿಸುತ್ತವೆ. ಇನ್ನು ಕೆಲವರು ‘ಅಯ್ಯೋ’ ಎನ್ನುವಂತೆ ಮಾಡುತ್ತವೆ. ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ. ಕೋತಿ ಮತ್ತು ಪುಟ್ಟ ಬಾಲಕಿ ಮೊಬೈಲ್ ಫೋನ್ ವಿಚಾರದಲ್ಲಿ ಜಗಳವಾಡುತ್ತಿರುವ ದೃಶ್ಯ ಎಲ್ಲೆಡೆ ವೈರಲ್‌ ಆಗುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ : ಆ ಸಿನಿಮಾದ ಒಂದು ಶೋಗಾಗಿ ಅವರಿವರ ಕೈಕಾಲು ಹಿಡಿದಿದ್ದ ರಿಷಬ್: ಇಂದು ಎಲ್ಲ ಶೋಗಳು ಹೌಸ್‌ಫುಲ್‌.!


ಪುಟ್ಟ ಬಾಲಕಿ ಮನೆಯ ಅಂಗಳದಲ್ಲಿ ಮಂಚದ ಮೇಲೆ ಕುಳಿತಿದ್ದಾಳೆ. ಅವಳ ಕೈಯಲ್ಲಿ ಒಂದು ಮೊಬೈಲ್‌ ಫೋನ್‌ ಇದೆ. ಅದರಲ್ಲಿ ಆಕೆ ಏನನ್ನೋ ನೋಡುತ್ತಿದ್ದಾಳೆ. ಈ ವೇಳೆ ಕೋತಿಯೊಂದು ಅವಳ ಬಳಿ ಬಂದು ಅವಳಿಂದ ಫೋನ್ ತೆಗೆದುಕೊಳ್ಳುತ್ತದೆ. ಮಂಗಣ್ಣನೂ ಮೊಬೈಲ್‌ ಅನ್ನೂ ಅತ್ಯಂತ ಕುತೂಹಲದಿಂದ ನೋಡುತ್ತದೆ. ಬಳಿಕ ಮಗುವು ಕೋತಿಯ ಕೈಯಿಂದ ಮೊಬೈಲ್‌ ಕಿತ್ತುಕೊಳ್ಳುತ್ತಾಳೆ. ಆಗ ಕೋತಿ ಮತ್ತೆ ಅವಳ ಬಳಿಯಿದ್ದ ಫೋನ್‌ ಕಿತ್ತುಕೊಳ್ಳುತ್ತದೆ. ಹೀಗೆ ಮೊಬೈಲ್‌ ನೋಡಲು ಮಂಗ ಮತ್ತು ಮಗು ಇಬ್ಬರೂ ಜಗಳವಾಡುವ ವಿಡಿಯೋ ನೆಟ್ಟಿಗರ ಮನಗೆಲ್ಲುತ್ತಿದೆ.   


 



 


ಈ ತಮಾಷೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 1.4 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಸಂಗ್ರಹಿಸಿದೆ. ವಿಡಿಯೋ ನೋಡಿದ ನೆಟಿಜನ್‌ಗಳು ಎಂಜಾಯ್‌ ಮಾಡ್ತಿದ್ದಾರೆ. ಒಬ್ಬ ಬಳಕೆದಾರರು, "ಇದು ನನ್ನ ಫೋನ್. ಅದನ್ನು ಮರಳಿ ಕೊಡು" ಎಂದು ಕಾಮೆಂಟ್‌ ಮಾಡಿದ್ದಾರೆ. ಇನ್ನೊಬ್ಬರು "ಫೋನ್ ಮಕ್ಕಳಿಗಾಗಿ ಅಲ್ಲ" ಎಂದು ಬರೆದಿದ್ದಾರೆ.


ಇದನ್ನೂ ಓದಿ : Viral Video : ಇಬ್ಬರು ಹುಡುಗಿಯರಿಗೆ ಒಬ್ಬನೇ ಪ್ರೇಮಿ.. ಸಿಕ್ಕಿಬಿದ್ದಾಗ ಆಗಿದ್ದೇನು ನೋಡಿ.!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.