Monkey viral video : ಸಾಮಾನ್ಯವಾಗಿ ಯಾರಾದರೂ ಅತಿಯಾಗಿ ತುಂಟಾಟ ಆಡುತ್ತಿದ್ದರೆ ಮಂಗ ಚೇಷ್ಟೆ ಅನ್ನುತ್ತೇವೆ. ಇಲ್ಲಾ ಮಂಗ ಬುದ್ದಿ ಎನ್ನುತೇವೆ.  ಯಾಕೆಂದರೆ ಕೋತಿಯ ಬುದ್ದಿಯೇ ಹಾಗೆ. ಕುಳಿತಲ್ಲಿ ಕೂರುವುದಿಲ್ಲ, ನಿಂತಲ್ಲಿ ನಿಲ್ಲುವುದಿಲ್ಲ. ಒಂದೊಮ್ಮೆ ಸುಮ್ಮನೆ ಕುಳಿತಿದ್ದರೂ ಅದರ ಕೈ ಕಾಲು ಆಡಿಕೊಂಡೆ ಇರುತ್ತದೆ. ಇನ್ನು ಕೋತಿ ಯಾವಾಗ ಹೇಗೆ ಆಡುತ್ತದೆ ಎಂದು ಊಹಿಸುವುದು ಕೂಡಾ ಕಷ್ಟ. ಕೆಲವೊಮ್ಮೆ ಅತಿಯಾದ ಬುದ್ದಿ ಪ್ರದರ್ಶಿಸಿದರೆ ಇನ್ನು ಕೆಲವೊಮ್ಮೆ ಶತ ದಡ್ಡತನ ತೋರಿಸಿ ಬಿಡುತ್ತದೆ. 


COMMERCIAL BREAK
SCROLL TO CONTINUE READING

ಈ ಕಾರಣಕ್ಕೆ ಮನುಷ್ಯರು ಒಬ್ಬರಿಗೊಬ್ಬರು ಬೈಯ್ಯುವಾಗಲೂ ಕಪಿ, ಕೋತಿ, ಮಂಗ ಎನ್ನುವ ಪದಗಳನ್ನು ಬಳಸುತ್ತಾರೆ. ಇದೀಗ ಕೋತಿಗೆ ಸಂಬಂಧ ಪಟ್ಟ ವಿಡಿಯೋವೊಂದು ವೈರಲ್ ಆಗುತ್ತಿದೆ.  


ಇದನ್ನೂ ಓದಿ :  Emotional Video: ಒಬ್ಬಂಟಿಯಾಗಿಸುವ ಮುನ್ನ ಒಮ್ಮೆ ತಿರುಗಿ ನೋಡು! ತನ್ನೊಡತಿಗೆ ಮೂಕ ಪ್ರಾಣಿಯ ಮನವಿ!


ಈ  ವಿಡಿಯೋದಲ್ಲಿ ಪ್ರವಾಸಿಗರು ತಮ್ಮ ಮಕ್ಕಳೊಂದಿಗೆ ವಿಹಾರಕ್ಕೆ ಹೋಗುತ್ತಿರುವುದನ್ನು ಕಾಣಬಹುದು. ಈ ದಾರಿಯಲ್ಲಿ ಕೋತಿಯ ದೃಷ್ಟಿ ಮಗುವಿನ ಮೇಲೆ ಬೀಳುತ್ತದೆ. ಕೋತಿ ತಕ್ಷಣವೇ ಮಗುವಿನ ಬಳಿಯಿದ ಆಹಾರಕ್ಕಾಗಿ ಓಡಿ ಬರುತ್ತದೆ. ಆದರೆ ಯಾವಾಗ ಕೋತಿಗೆ ಅಲ್ಲಿ ಆಹಾರ ಸಿಗುವುದಿಲ್ಲವೋ ಸಿಟ್ಟಿಗೆದ್ದ ಕಪಿರಾಯ ಮಗುವಿನ ಕೂದಲು ಹಿಡಿದು ಎಳೆಯುತ್ತದೆ. ಆದರೆ ಅಲ್ಲೇ ಇದ್ದ ಮಗುವಿನ ತಾಯಿ ತಕ್ಷಣ ಮಗುವನ್ನು ಹಿಂದಕ್ಕೆ ಎಳೆದುಕೊಳ್ಳುತ್ತಾರೆ.  


ಮಂಗನ ವೀಡಿಯೊವನ್ನು ಇಲ್ಲಿ ನೋಡಿ:


 


ಭೂಮಿಗೆ ಮೊದಲು ಬಂದಿದ್ದು ಕೋಳಿನಾ? ಮೊಟ್ಟೆನಾ? Chat GPT ಕೊಟ್ಟೇ ಬಿಡ್ತು ಉತ್ತರ!


@IamSuVidha ಟ್ವಿಟ್ಟರ್  ಖಾತೆಯಲ್ಲಿ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಹಲವಾರು ಮಂದಿ ವೀಕ್ಷಿಸಿದ್ದು, ಕಾಮೆಂಟ್ ಕೂಡಾ ಮಾಡುತ್ತಿದ್ದಾರೆ. ಈ ವಿಡಿಯೋಗೆ ಸಾಕಷ್ಟು ಲೈಕ್ಸ್ ಕೂಡಾ ಬಂದಿವೆ. 


(ಸೂಚನೆ  : ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊ ಮತ್ತು ನೀಡಿರುವ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಿಂದ ತೆಗೆದುಕೊಳ್ಳಲಾಗಿದೆ. Zee kannada ನ್ಯೂಸ್ ಇವುಗಳನ್ನು ಯಾವುದೇ ರೀತಿಯಲ್ಲಿ ಅನುಮೋದಿಸುವುದಿಲ್ಲ.)


 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.