Viral Video: ದೆಹಲಿ ಮೆಟ್ರೋದಲ್ಲಿ ಇದೊಂದು ಬಾಕಿಯಿತ್ತು... ಅದನ್ನೂ ಈತ ಮಾಡೇ ಬಿಟ್ಟ!!

Delhi Metro Stunt Video: ದೆಹಲಿ ಮೆಟ್ರೋದ ಅನೇಕ ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತವೆ. ಇದೀಗ ಮತ್ತೊಂದು ವಿಡಿಯೋ ವೈರಲ್‌ ಆಗಿದ್ದು, ವ್ಯಕ್ತಿಯೊಬ್ಬ ಮೆಟ್ರೋ ರೈಲಿನಲ್ಲಿ ಸ್ಟಂಟ್ ಮಾಡುವುದನ್ನು ನೋಡಬಹುದು.   

Written by - Chetana Devarmani | Last Updated : Apr 22, 2023, 02:13 PM IST
  • ದೆಹಲಿ ಮೆಟ್ರೋದಲ್ಲಿ ಇದೊಂದು ಬಾಕಿಯಿತ್ತು
  • ಮೆಟ್ರೋ ರೈಲಿನಲ್ಲಿ ಅದನ್ನೂ ಈತ ಮಾಡೇ ಬಿಟ್ಟ
  • ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋ ವೈರಲ್‌
Viral Video: ದೆಹಲಿ ಮೆಟ್ರೋದಲ್ಲಿ ಇದೊಂದು ಬಾಕಿಯಿತ್ತು... ಅದನ್ನೂ ಈತ ಮಾಡೇ ಬಿಟ್ಟ!! title=

Delhi Metro Stunt Video: ದೆಹಲಿ ಮೆಟ್ರೋದಲ್ಲಿ ಜನರು ಹೊಸ ಹೊಸ ಸಾಹಸಗಳನ್ನು ಮಾಡುವುದನ್ನು ಸಾಮಾನ್ಯವಾಗಿ ಕಾಣಬಹುದು. ಇಲ್ಲಿಂದ ಬರುವ ವಿಡಿಯೋಗಳು ಒಂದಲ್ಲ ಒಂದು ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಲೇ ಇರುತ್ತವೆ. ಬಿಕಿನಿ ಹುಡುಗಿಯಿಂದ ಹಿಡಿದು ಮೆಟ್ರೋದಲ್ಲಿ ರೊಮ್ಯಾನ್ಸ್‌ ಮಾಡುವವರವರೆಗೆ ದೆಹಲಿ ಮೆಟ್ರೋದ ಅನೇಕ ಆಶ್ಚರ್ಯಕರ ವಿಡಿಯೋಗಳು ಜನಮನದಲ್ಲಿ ಉಳಿದಿವೆ. ಇತ್ತೀಚಿನ ದಿನಗಳಲ್ಲಿ ಮತ್ತೊಂದು ವಿಡಿಯೋ ಕಾಣಿಸಿಕೊಂಡಿದೆ, ಇದರಲ್ಲಿ ವ್ಯಕ್ತಿಯೊಬ್ಬ ಮೆಟ್ರೋ ರೈಲಿನಲ್ಲಿ ಸ್ಟಂಟ್ ಮಾಡುತ್ತಿರುವುದನ್ನು ನೋಡಬಹುದು.

ಇದನ್ನೂ ಓದಿ: ವಿವಾಹಕ್ಕೂ ಮುನ್ನ ಗೂಗಲ್ ನಲ್ಲಿ ಹುಡ್ಗೀರು ಸರ್ಚ್ ಮಾಡುವುದು ಏನು ಗೊತ್ತಾ?

ದೆಹಲಿ ಮೆಟ್ರೋದ ಕಂಪಾರ್ಟ್‌ಮೆಂಟ್‌ನಲ್ಲಿ ಪ್ರಯಾಣಿಸುತ್ತಿದ್ದ ಯುವಕನೊಬ್ಬ ಸಾಹಸ ಪ್ರದರ್ಶಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ರಾಹುಲ್ ಸಿಂಗ್ ಎಂಬ ಕಂಟೆಂಟ್ ಕ್ರಿಯೇಟರ್ Instagram ನಲ್ಲಿ ಹಂಚಿಕೊಂಡಿದ್ದಾರೆ, ಅವರು ತಮ್ಮ ID ಯೊಂದಿಗೆ ಜಿಮ್ನಾಸ್ಟ್ ಮಾಡುವ ಅದ್ಭುತ ವಿಡಿಯೋಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಾರೆ. ಈ ವಿಡಿಯೋ ಕೂಡ ಸ್ವಲ್ಪ ಹಳೆಯದಾಗಿರುವಂತೆ ತೋರುತ್ತಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

 

 

ಈ ಪೋಸ್ಟ್ ಇದುವರೆಗೆ 306K ಲೈಕ್‌ಗಳನ್ನು ಸ್ವೀಕರಿಸಿದೆ. ಬಳಕೆದಾರರಿಂದ ಮೂರು ಲಕ್ಷಕ್ಕೂ ಹೆಚ್ಚು ಲೈಕ್ಸ್‌  ಪಡೆದಿದೆ. ಈ ವಿಡಿಯೋವನ್ನು ನೋಡಿದ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಮೆಟ್ರೋದಲ್ಲಿ ಜಿಮ್ನಾಸ್ಟಿಕ್ ಮಾಡುವ ಈ ವ್ಯಕ್ತಿಯ ಕಾರ್ಯವನ್ನು ಶ್ಲಾಘಿಸಿದ್ದಾರೆ. ಆದರೆ ಅನೇಕ ಬಳಕೆದಾರರು ಅವರ ಆತ್ಮವಿಶ್ವಾಸವನ್ನು ಶ್ಲಾಘಿಸಿದ್ದಾರೆ. ಇದಕ್ಕೂ ಮೊದಲು, 19 ವರ್ಷದ ಯುವತಿ ತನ್ನ ವಿಚಿತ್ರವಾದ ಬಟ್ಟೆಗಳೊಂದಿಗೆ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸಿದ್ದಕ್ಕಾಗಿ ಜನರಿಂದ ಟೀಕೆಗಳನ್ನು ಎದುರಿಸಬೇಕಾಯಿತು. 

ಇದನ್ನೂ ಓದಿ: ದೆಹಲಿಯ ಸಾಕೇತ್ ಕೋರ್ಟ್ ನಲ್ಲಿ ಮಹಿಳೆ ಮೇಲೆ ಗುಂಡಿನ ದಾಳಿ,ಆಸ್ಪತ್ರೆಗೆ ದಾಖಲು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News