Mundari Tribal In South Sudan: ಪ್ರಪಂಚದಲ್ಲಿ ಹಸುಗಳನ್ನು ತಮ್ಮ ದೇವರೆಂದು ಪರಿಗಣಿಸುವ ಮತ್ತು ಪ್ರತಿದಿನ ಪೂಜಿಸುವ ಏಕೈಕ ರಾಷ್ಟ್ರ ಭಾರತ. ಆದರೆ, ಈ ನಂಬಿಕೆಯು ನಿಜವಲ್ಲ, ಏಕೆಂದರೆ ಪೂರ್ವ ಮಧ್ಯ ಆಫ್ರಿಕಾದ ದಕ್ಷಿಣ ಸುಡಾನ್‌ನ ಮುಂಡರಿ ಬುಡಕಟ್ಟು ಜನಾಂಗದವರು ತಮ್ಮ ಸಂಪೂರ್ಣ ಜೀವನಶೈಲಿಯನ್ನು ತಮ್ಮ ಅಮೂಲ್ಯವಾದ ಜಾನುವಾರುಗಳ ಆರೈಕೆಯಲ್ಲಿ ಅಳವಡಿಸಿಕೊಂಡಿದೆ. ಈ ಹಸುಗಳನ್ನು ಇವರು ತಮ್ಮ ಮೆಷಿನ್ ಗನ್‌ಗಳೊಂದಿಗೆ ರಕ್ಷಿಸುತ್ತಾರೆ. 


COMMERCIAL BREAK
SCROLL TO CONTINUE READING

ಅಂಕೋಲೆ ವಟುಶಿ ತಳಿಗೆ ಸಂಬಂಧಿಸಿದ ಹಸುಗಳನ್ನು ‘ರಾಜರ ಜಾನುವಾರು’ ಎಂದೂ ಕರೆಯಲಾಗುತ್ತದೆ. ಈ ಹಸುಗಳು ಎಂಟು ಅಡಿ ಎತ್ತರಕ್ಕೆ ಬೆಳೆಯುತ್ತವೆ ಮತ್ತು ಪ್ರತಿಯೊಂದೂ  41,000 ರೂ. ಮೌಲ್ಯದ್ದಾಗಿವೆ. ಈ ಬುಡಕಟ್ಟಿನ ಕುರುಬರು ಈ ಹಸುಗಳನ್ನು ತಮ್ಮ ಅತ್ಯಮೂಲ್ಯ ಆಸ್ತಿ ಎಂದು ಪರಿಗಣಿಸಿದ್ದಾರೆ. ಮುಂಡರಿಗೆ ಗೋವು ಕೇವಲ ಪ್ರಾಣಿಯಾಗಿರದೆ ಅವರ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಹಸುಗಳು ಮಲಗಿದಾಗ, ಈ ಬುಡಕಟ್ಟಿನ ಜನರು ಸಂಭವನೀಯ ಕಳ್ಳತನ ಅಥವಾ ಹತ್ಯೆಯಿಂದ ರಕ್ಷಿಸಲು ಮೆಷಿನ್ ಗನ್‌ಗಳೊಂದಿಗೆ ಕಾವಲು ಕಾಯುತ್ತಾರೆ. 


ಇದನ್ನೂ ಓದಿ: ಬಾಲ್ಟಿಮೋರ್ ಬ್ರಿಡ್ಜ್ : ಕುಸಿತಕ್ಕೆ ಕಾರಣವಾದ ಹಡಗಿನಲ್ಲಿ 22 ಮಂದಿ ಭಾರತೀಯರು


ಮುಂಡರಿ ಬುಡಕಟ್ಟು ಜನರ ಪ್ರಭಾವಶಾಲಿಯಾಘಿದ್ದು, ಅವರ ಆಹಾರವು ಕೇವಲ ತಮ್ಮ ಹಸುಗಳಿಂದ ಹೊರತೆಗೆಯುವ ಡೈರಿ ಉತ್ಪನ್ನಗಳನ್ನು ಒಳಗೊಂಡಿರುತ್ತದೆ. ಅಂಕೋಲೆ ವಟುಶಿ ಜಾನುವಾರುಗಳ ಇತರ ದೇಹ ದ್ರವಗಳನ್ನು ಸಹ ಈ ಕುರುಬರು ಸ್ನಾನ ಮತ್ತು ಹಲ್ಲುಜ್ಜಲು ಬಳಸುತ್ತಾರೆ. ಮುಂಡಾರಿ ಪುರುಷರು ಗೋಮೂತ್ರದ ಬರುತ್ತಿದರೆ ಅದರ ಕೆಳಗೆ ಕೂರುತ್ತಾರೆ. ಇದರ ಪರಿಣಾಮವಾಗಿ ಅಮೋನಿಯದ ಉಪಸ್ಥಿತಿಯಿಂದಾಗಿ ಅವರ ಕೂದಲಿನ ಬಣ್ಣವನ್ನು ಕಿತ್ತಳೆ ಬಣ್ಣಕ್ಕೆ ಬದಲಾಗುತ್ತದೆ. 


ಮುಂಡರಿ ಬುಡಕಟ್ಟು  ಜನಾಂಗದವರು ಹಸುಗಳ ಸಗಣಿಯನ್ನು ರಾಶಿ ಹಾಕಿ ಸುಟ್ಟು, ಇದರಿಂದ ಉತ್ಪತ್ತಿಯಾಗುವ ಬೂದಿಯನ್ನು ಈ ಬುಡಕಟ್ಟು ಜನರು ಸುಡುವ 115-ಡಿಗ್ರಿ ಶಾಖದಿಂದ ರಕ್ಷಿಸಿಕೊಳ್ಳಲು ಸನ್‌ಸ್ಕ್ರೀನ್ ರೂಪದಲ್ಲಿ ಬಳಸುತ್ತಾರೆ. ಈ ಜಾನುವಾರುಗಳ ಬೆಲೆ ಹೆಚ್ಚಿರುವುದರಿಂದ ಈ ಅಂಕೋಲೆ ವಟುಶಿ ಜಾನುವಾರುಗಳನ್ನು ಮಾಂಸಕ್ಕಾಗಿ ಕೊಲ್ಲುವುದು ಅಪರೂಪ. ಆದರೆ, ಅವುಗಳನ್ನು ಸಾಮಾನ್ಯವಾಗಿ ಬುಡಕಟ್ಟು ಜನರ ನಡುವೆ ಉಡುಗೊರೆಗಳು ಅಥವಾ ವರದಕ್ಷಿಣೆಯಾಗಿ ವಿನಿಮಯ ಮಾಡಿಕೊಳ್ಳಲಾಗುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.