ಹೆಚ್ಚಿನ ದುಡ್ಡಿಗಾಗಿ ನಡುರಸ್ತೆಯಲ್ಲಿ ತಾಯಿ ಮಗುವನ್ನು ಆಟೋದಿಂದ ಇಳಿಸಿದ್ದವನ ವಿಡಿಯೋ ವೈರಲ್, ಟ್ರಾಫಿಕ್ ಪೊಲೀಸರ ಕ್ರಮ!
Viral News: ಆಟೋ ಚಾಲಕರು ಹೆಚ್ಚಿನ ಹಣಕ್ಕಾಗಿ ಡಿಮ್ಯಾಂಡ್ ಮಾಡ್ತಾರೆ ಅಂತಾನೆ ಓಲಾ, ಊಬರ್, ನಮ್ಮ ಯಾತ್ರಿಯಂತಹ ಆಪ್ ಗಳ ಮೂಲಕ ವಾಹನಗಳನ್ನು ಬುಕ್ ಮಾಡಲಾಗುತ್ತದೆ. ಆದರೆ, ಇಲ್ಲೊಬ್ಬ ಆಸಾಮಿ ಟ್ರಾಫಿಕ್ ಜಾಸ್ತಿ ಆಯ್ತು ಅಂತ ಖ್ಯಾತೆ ತೆಗೆದಿದ್ದಾನೆ. ವಿಡಿಯೋ ವೈರಲ್ ಆಗ್ತಿದ್ದಂತೆ ಟ್ರಾಫಿಕ್ ಪೊಲೀಸರು ಮಾಡಿದ್ದೇನು ಗೊತ್ತಾ...?
Bengaluru Viral News: ಸ್ಮಾರ್ಟ್ ಫೋನ್‌ಗಳ ಸಹಾಯದಿಂದ ಬಾಡಿಗೆ ವಾಹನಗಳನ್ನು ಕೂಡ ಬುಕ್ ಮಾಡಬಹುದು. ಓಲಾ, ಊಬರ್, ನಮ್ಮ ಯಾತ್ರಿಯಂತಹ ಆಪ್ ಗಳ ಮೂಲಕ ವಾಹನಗಳನ್ನು ಬುಕ್ ಮಾಡಿದರೆ ಅವರು ನಾವಿರುವಲ್ಲಿಗೆ ಬಂದು ಪಿಕ್ ಅಪ್ ಮಾಡುತ್ತಾರೆ. ಮಾತ್ರವಲ್ಲ, ಈ ರೀತಿ ಆಪ್ ಮೂಲಕ ಆಟೋ/ಕಾರ್ ಬುಕ್ ಮಾಡುವುದರಿಂದ ಇದರಲ್ಲಿ ಸಾಮಾನ್ಯ ದರವನ್ನಷ್ಟೇ ವಿಧಿಸಲಾಗುತ್ತದೆ ಎಂಬುದು ಮತ್ತೊಂದು ಪ್ರಮುಖ ಕಾರಣವಾಗಿರುತ್ತದೆ. ಹೆಚ್ಚಿನ ಹಣದ ಹೊರೆಯಾಗುವುದಿಲ್ಲ. ಆದರೆ, ಇತ್ತೀಚೆಗೆ ಇದಕ್ಕೆ ತದ್ವಿರುದ್ಧವಾದ ಘಟನೆಯೊಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದ್ದು, ಹೆಚ್ಚಿನ ದುಡ್ಡಿಗಾಗಿ ಆಗ್ರಹಿಸಿ ಹೈಡ್ರಾಮ ಮಾಡಿದ್ದ ಆಟೋ ಚಾಲಕ ನಡುರಸ್ತೆಯಲ್ಲಿಯೇ ತಾಯಿ ಮಗುವನ್ನು ಇಳಿಸಿ ಹೋಗಿದ್ದ. ಈ ದೃಶ್ಯದ ವಿಡಿಯೋ ವೈರಲ್ ಆಗುತ್ತಿದ್ದಂತೆ ಆ ಆಟೋ ಚಾಲಕನ ವಿರುದ್ಧ ಬೆಂಗಳೂರು ಟ್ರಾಫಿಕ್ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಏನಿದು ಪ್ರಕರಣ?
ಕಳೆದ ಮಂಗಳವಾರ (ಆಗಸ್ಟ್ 27) ಬೆಳಗ್ಗೆ 9 ಗಂಟೆ ಸುಮಾರಿಗೆ ಮಗು ಜೊತೆಗೆ ಬೇರೆ ಊರಿನಿಂದ ಬೆಂಗಳೂರಿಗೆ ಬಂದಿಳಿದ ಮಹಿಳೆಯೊಬ್ಬರು ಮೆಜೆಸ್ಟಿಕ್ ನಿಂದ ಬಿಟಿಎಂ ಲೇಔಟ್ ಗೆ ಓಲಾದಲ್ಲಿ ಆಟೋ ಬುಕ್ ಮಾಡಿದ್ದರು. ಬುಕ್ಕಿಂಗ್ ವೇಳೆ ಆಟೋ ದರ 300 ರೂಪಾಯಿ ಆಗಿತ್ತು. ಅರ್ಧ ದಾರಿಗೆ ಬರುತ್ತಿದ್ದಂತೆ ಕಿರಿಕ್ ತೆಗೆದಿದ್ದ ಆಟೋ ಚಾಲಕ (Auto Driver) ಕಾರ್ಪೋರೇಷನ್ ಸರ್ಕಲ್ ನಲ್ಲಿ ಆಟೋ ನಿಲ್ಲಿಸಿ ಟ್ರಾಫಿಕ್ ಹೆಚ್ಚಾಗಿದೆ ಎಂದು ಕಾರಣ ನೀಡಿ ಹೆಚ್ಚುವರಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಪ್ರಯಾಣಿಕರು ಹೆಚ್ಚು ಹಣ ನೀಡಲು ಒಪ್ಪದ ಹಿನ್ನಲೆಯಲ್ಲಿ ನಡುರಸ್ತೆಯಲ್ಲೆ ಮಹಿಳೆ ಮತ್ತು ಮಗುವನ್ನು ಆಟೋದಿಂದ ಕೆಳಗಿಳಿಸಿ ಹೈಡ್ರಾಮಾ ಮಾಡಿ ಮಹಿಳೆ ಮೇಲೆ ದರ್ಪ ತೋರಿದ್ದ.
ಇದನ್ನೂ ಓದಿ- Tigers Attack On Lion: ಒಂಟಿ ಸಿಂಹದ ಐದು ಹುಲಿಗಳಿಂದ ದಾಳಿ, ಮುಂದೇನಾಯ್ತು... ವಾಚ್ ವೈರಲ್ ವಿಡಿಯೋ
ಆಟೋ ಚಾಲಕನ ಕಿರಿಕ್ ಗೆ ಬೇಸತ್ತು ಮಹಿಳೆ ತನ್ನ ಗಂಡನಿಗೆ ಕರೆ ಮಾಡಿದ್ದರು. ನಂತರ ಕಾರ್ಪೊರೇಷನ್ ಸರ್ಕಲ್ ನಡು ರಸ್ತೆಯಲ್ಲೇ ಮಹಿಳೆಯೊಂದಿಗೆ ವಾಗ್ವಾದಕ್ಕಿಳಿದಿದ್ದ ಆಟೋ ಚಾಲಕ ಹೆಚ್ಚಿನ ಹಣ ಕೊಟ್ಟರೆ (Demanding For More Money) ಮಾತ್ರ ಕರೆದುಕೊಂಡು ಹೋಗುತ್ತೇನೆ. ಇಲ್ಲ ಅಂದ್ರೆ ಇಲ್ಲೇ ಬಿಟ್ಟು ಹೋಗುವುದಾಗಿ ಅವಾಜ್ ಹಾಕಿದ್ದ. ಆಟೋ ಚಾಲಕನ ನಡೆಗೆ ಸಾರ್ವಜನಿಕರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದರು. ಕೊನೆಗೂ ತನ್ನ ಹಟ ಬಿಡದ ಓಲಾ ಆಟೋ ಚಾಲಕ ತಾಯಿ ಮಗುವನ್ನು ನಡುರಸ್ತೆಯಲ್ಲೆ ಬಿಟ್ಟು ಅಲ್ಲಿಂದ ತೆರಳಿದ್ದ. ಈ ಬಗ್ಗೆ ಜೀ ಕನ್ನಡ ನ್ಯೂಸ್ ವರದಿ ಮಾಡಿತ್ತು. ಅಲ್ಲದೆ, ಆಟೋ ಚಾಲಕನ ಈ ವರ್ತನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿತ್ತು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.