Tigers Attack On Lion: ಒಂಟಿ ಸಿಂಹದ ಮೇಲೆ ಐದು ಹುಲಿಗಳಿಂದ ದಾಳಿ, ಮುಂದೇನಾಯ್ತು... ವಾಚ್ ವೈರಲ್ ವಿಡಿಯೋ

Tigers Attack On Lion: ಹುಲಿ ಸಿಂಹಗಳು ಬೇರೆ ಪ್ರಾಣಿಗಳ ಮೇಲೆ ದಾಳಿ ಮಾಡಿರುವುದನ್ನು ನೀವು ನೋಡಿರಬಹುದು. ಆದರಿಲ್ಲಿ ಹುಲಿಗಳೆಲ್ಲ ಒಟ್ಟಾಗಿ ಒಂಟಿಯಾಗಿದ್ದ ಸಿಂಹದ ಮೇಲೆ ಅಟ್ಯಾಕ್ ಮಾಡಿವೆ. 

Written by - Yashaswini V | Last Updated : Sep 4, 2024, 08:14 PM IST
  • ಏಕಾಂಗಿಯಾಗಿದ್ದ ಸಿಂಹವನ್ನು ಐದು ಹುಲಿಗಳು ಒಟ್ಟಿಗೆ ಸೇರಿ ಅಟ್ಯಾಕ್ ಮಾಡುತ್ತವೆ.
  • ಹಿಂದೆಂದೂ ಕಂಡಿರದ ಅಪರೂಪದ ವಿಡಿಯೋ ವೈರಲ್
  • ಸಿಂಹದೊಂದಿಗೆ ಹುಲಿಗಳ ಕಾಳಗ ಕಂಡು ಸಿಂಹದ ಅಸಹಾಯಕತೆಯನ್ನು ಎಂದೂ ನೋಡಿರಲಿಲ್ಲ ಎಂದ ಇನ್‌ಸ್ಟಾಗ್ರಾಮ್ ಬಳಕೆದಾರರು
Tigers Attack On Lion: ಒಂಟಿ ಸಿಂಹದ ಮೇಲೆ ಐದು ಹುಲಿಗಳಿಂದ ದಾಳಿ, ಮುಂದೇನಾಯ್ತು... ವಾಚ್ ವೈರಲ್ ವಿಡಿಯೋ  title=

Tigers Lion Viral Video: ಈ ಡಿಜಿಟಲ್ ಜಗತ್ತಿನಲ್ಲಿ ನಿತ್ಯ ಒಂದಿಲ್ಲೊಂದು ಅದ್ಭುತ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತೇವೆ. ಕೆಲವು ವಿಡಿಯೋಗಳು ಭಾವನಾತ್ಮಕವಾಗಿ ಕಣ್ಣಲ್ಲಿ ನೀರು ತರಿಸಿದರೆ, ಇನ್ನೂ ಕೆಲ ವಿಡಿಯೋಗಳು ಹೀಗೂ ಉಂಟೆ... ಎಂದು ಅಚ್ಚರಿ ಉಂಟು ಮಾಡುತ್ತವೆ. ಇದೀಗ ಅಂತಹುದೇ ಒಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

ಸಾಮಾನ್ಯವಾಗಿ ಕಾಡು ಪ್ರಾಣಿಗಳು (Wild Animals) ಬೇರೆಯವರ ಮೇಲೆ ಅಥವಾ ಅವಕ್ಕಿಂತ ದುರ್ಬಲ ಪ್ರಾಣಿಗಳ ಮೇಲೆ ದಾಳಿ ಮಾಡಿರುವುದನ್ನು ನೀವು ನೋಡಿರಬಹುದು. ಆದರೆ, ಇತ್ತೀಚೆಗೆ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಹುಲಿ ಸಿಂಹಗಳ ಅಪರೂಪದ ವಿಡಿಯೋ ವೈರಲ್ (Rare Viral Video) ಆಗುತ್ತಿದೆ. 

ಇದನ್ನೂ ಓದಿ- ವಿದ್ಯಾದೇವತೆ ಸರಸ್ವತಿಗೆ ಪ್ರದಕ್ಷಿಣೆ ಹಾಕುತ್ತಿರುವ ನವಿಲುಗಳು: ವಿಡಿಯೋ ವೈರಲ್

ಈ ವಿಡಿಯೋದಲ್ಲಿ ಏಕಾಂಗಿಯಾಗಿದ್ದ ಸಿಂಹವನ್ನು ಐದು ಹುಲಿಗಳು ಒಟ್ಟಿಗೆ ಸೇರಿ ಅಟ್ಯಾಕ್ (Tigers Attack On Lion) ಮಾಡುತ್ತವೆ. ಈ ಸಂದರ್ಭದಲ್ಲಿ ಎದೆಗುಂದದ ಸಿಂಹ ಆ ಐದು ಹುಲಿಗಳನ್ನೂ ಒಬ್ಬಂಟಿಯಾಗಿಯೇ ಪ್ರತಿದಾಳಿ ನಡೆಸುತ್ತದೆ. 

ವಾಸ್ತವವಾಗಿ, ಐದು ಹುಲಿಗಳೊಂದಿಗೆ ಒಂದು ಸಿಂಹವನ್ನು ಒಂದೇ ಬೋನಿನಲ್ಲಿ ಹಾಕಲಾಗಿದೆ. ಇಲ್ಲಿ  ಹುಲಿ ಸಿಂಹಗಳೆರಡೂ ಒಟ್ಟಿಗೆ ಆಟವಾಡುವ ಭಾಗವಾಗಿದೆ. ಸುಮ್ಮನಿದ್ದ ಸಿಂಹವನ್ನು ಮೊದಲಿಗೆ ಹಿಂಬದಿಯಿಂದ ಬರುವ ಎರಡು ಹುಲಿಗಳು ಕೆಣಕಿ ಅದರ ಮೇಲೆರಗಲು ಪ್ರಯತ್ನಿಸುತ್ತಾ ಸಿಂಹದ ಮುಖದ ಮೇಲೆಯೇ ಬಡಿಯುತ್ತವೆ. ಈ ಸಂದರ್ಭದಲ್ಲಿ ಇನ್ನುಳಿದ ಮೂರು ಹುಲಿಗಳು ಸಹ ಸಿಂಹವನ್ನು ಸುತ್ತುವರೆಯುತ್ತವೆ. ಒಂದು ಹುಲಿ ಸಿಂಹದ ಪಕ್ಕಕ್ಕೆ ಸರಿದು ಅದನ್ನು ಮುದ್ದಿಸುವಂತೆ ತೋರುತ್ತದೆ. ಈ ಅಪರೂಪದ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ. 

ಇದನ್ನೂ ಓದಿ- ಕಾಡಿನಿಂದ ನಾಡಿಗೆ ಎಂಟ್ರಿ ಕೊಟ್ಟ ಚಿರತೆ.. ಸಿಸಿಟಿವಿಯಲ್ಲಿ ದೃಶ್ಯ ಕಂಡು ಬೆಚ್ಚಿಬಿದ್ದ ಜನರು: ವಾಚ್ ವಿಡಿಯೋ

ಕಾಡು ಮೃಗಗಳೇ ಆದರೂ ಸಹ ಅವು ಮಕ್ಕಳಂತೆ ಒಂದಕ್ಕೊಂದು ಕಿತ್ತಾಡಿಕೊಳ್ಳುವ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ (Social Media) ಹೆಚ್ಚು ವೀಕ್ಷಣೆಯನ್ನು ಪಡೆಯುತ್ತಿದೆ. ಇದಕ್ಕೇ ಹಲವರು ಪ್ರತಿಕ್ರಿಯೆಯನ್ನೂ ನೀಡಿದ್ದು, ಬಳಕೆದಾರರೊಬ್ಬರು, ಇಂತಹ ದೃಶ್ಯವನ್ನು ಹಿಂದೆಂದೂ ಕಂಡಿಲ್ಲ ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರ, ಸಿಂಹದ ಇಂತಹ ಅಸಹಾಯಕತೆಯನ್ನು ಎಂದೂ ಕಂಡಿಲ್ಲ ಎಂದಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News