Viral Video: ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಪ್ರವಾಸಿಗರ ಹುಚ್ಚಾಟ ಮುಂದುವರೆದಿದ್ದು, ಪೋಷಕರು ಜೀವಕ್ಕೆ ಸಂಚಕಾರ ತರುವಂತಹಾ ಅಪಾಯಕಾರಿ ಬಂಡೆಯ ಮೇಲೆ ಮಕ್ಕಳನ್ನ ಹತ್ತಿಸುತ್ತ ಹುಚ್ಚಾಟ ಮೆರೆಯುತ್ತಿದ್ದಾರೆ. 


COMMERCIAL BREAK
SCROLL TO CONTINUE READING

22 ಕಿ.ಮೀ. ವ್ಯಾಪ್ತಿಯ ಚಾರ್ಮಾಡಿ ಘಾಟಿ ರಸ್ತೆ ಹಾವುಬಳುಕಿನ ಮೈಕಟ್ಟಿನಿಂದ ಕೂಡಿದ್ದು ರಸ್ತೆಯ ಇಕ್ಕೆಲಗಳಲ್ಲಿ ಒಂದೆಡೆ ಪಾತಾಳ, ಮತ್ತೊಂದೆಡೆ ಮುಗಿಲೆತ್ತರದ ಬೆಟ್ಟಗಡ್ಡಗಳು. ಇಂತಹ ಸುಂದರ ಹಾಗೂ ಅಪಾಯದ ತಾಣದಲ್ಲಿ ಪ್ರವಾಸಿಗರು ಹೇಳೋರು-ಕೇಳೋರಿಲ್ಲದೆ ಹುಚ್ಚಾಟ ಮೆರೆಯುತ್ತಿದ್ದಾರೆ. 


ರಸ್ತೆ ಬದಿ ಎಲ್ಲೆಂದರಲ್ಲಿ ವಾಹನಗಳನ್ನ ಪಾರ್ಕ್ ಮಾಡುವ ಪ್ರವಾಸಿಗರು ಹತ್ತಾರು ಅಡಿ ಎತ್ತರ ಕಲ್ಲುಬಂಡೆಗಳ ಮೇಲೆ ನಿಂತು ಫೋಟೋ ತೆಗೆಸಿಕೊಳ್ಳುವ ಕ್ರೇಜಿಗೆ ಬಿದ್ದಿದ್ದಾರೆ. ಈ ಕಲ್ಲುಬಂಡೆ ಹಾಗೂ ಗುಡ್ಡಗಳನ್ನ ಏರಿ ಇಳಿಯುವಾಗ ಒಂಚೂರು ಬ್ಯಾಲೆನ್ಸ್ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. 


ಇದನ್ನೂ ಓದಿ- Snake Viral Video: ಅಡುಗೆ ಮನೆಗೆ ಎಂಟ್ರಿ ಕೊಟ್ಟ ನಾಗರಹಾವು, ಮುಂದೆ...


ಚಾರ್ಮಾಡಿ ಘಾಟಿಯಲ್ಲಿ ಮಕ್ಕಳ ಜೀವದ ಜೊತೆಯೇ ಆಟವಾಡುತ್ತಿರುವ ಪೋಷಕರು: 
ಈಗಾಗಲೇ ಇಲ್ಲಿ ಬಿದ್ದು ಕೈ-ಕಾಲು ಮುರಿದುಕೊಂಡು, ತಲೆ ಒಡೆದುಕೊಂಡವರು ಇದ್ದಾರೆ. ತಿಂಗಳುಗಟ್ಟಲೇ ಹಾಸಿಗೆ ಹಿಡಿದಿರುವವರು ಇದ್ದಾರೆ. ಪ್ರಾಣ ಕಳೆದುಕೊಂಡವರು ಉಂಟು. ಆದರೆ, ಇಂತಹಾ ಅಪಾಯಕಾರಿ ಸ್ಥಳಗಳಲ್ಲಿ ಪ್ರವಾಸಿಗರು ಮಕ್ಕಳನ್ನ ಕೂಡ ಹತ್ತಿಸುತ್ತಿರೋದು ಅನಾಹುತಕ್ಕೆ ಆಹ್ವಾನ ನೀಡುತ್ತಿರುವಂತಿದೆ. 


ಘಾಟಿಯ ದಾರಿಯುದ್ಧಕ್ಕೂ ಅಲ್ಲಲ್ಲೇ ನೋ ಪಾರ್ಕಿಂಗ್ ಬೋರ್ಡ್ ಕೂಡ ಇದೆ. ನೋ ಪಾರ್ಕಿಂಗ್ ಫಲಕದ ಬಳಿಯೇ ಅಡ್ಡಾದಿಡ್ಡಿ ವಾಹನಗಳನ್ನ ಪಾರ್ಕ್ ಮಾಡುವ ಪ್ರಯಾಣಿಕರು ಹೇಳೋರು-ಕೇಳೋರು ಇಲ್ಲದಂತೆ ವರ್ತಿಸುತ್ತಿದ್ದಾರೆ. 


ಇದನ್ನೂ ಓದಿ- Video Viral: ಇವ್ರೇ ನೋಡಿ ಅತೀ ಉದ್ದ ಗಡ್ಡ & ಮೀಸೆ ಹೊಂದಿ ಚಾಂಪಿಯನ್ ಪಟ್ಟ ಪಡೆದವರು.!


ಅಪಾಯದ ಸ್ಥಳಗಳಲ್ಲಿ ಪ್ರವಾಸಿಗರು, ಯುವಕ-ಯುವತಿಯರು, ಮಕ್ಕಳು ಜಾರುವ ಬಂಡೆ, ಕಲ್ಲುಗಳ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು ಮೋಜುಮಸ್ತಿ ಮಾಡ್ತಿದ್ದಾರೆ. ಏನಾದ್ರು ಹೆಚ್ಚು ಕಡಿಮೆಯಾದರೆ ಜವಾಬ್ದಾರಿ ಯಾರೆಂದು ಸ್ಥಳಿಯರು ಪ್ರಶ್ನಿಸಿದ್ದಾರೆ. ಹಾಗಾಗಿ, ಕೂಡಲೇ ಪೊಲೀಸರು ಚಾರ್ಮಾಡಿ ಘಾಟಿಯಲ್ಲಿ ಬೇಜವಾಬ್ದಾರಿಯಿಂದ ವರ್ತಿಸೋ ಪ್ರವಾಸಿಗರ ಹುಚ್ಚಾಟಕ್ಕೆ ಬ್ರೇಕ್ ಹಾಕಬೇಕಾದ ಅನಿವಾರ್ಯತೆ ತುಂಬಾ ಇದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ