Rajstan Viral Video : ಕಾಲು ಮುರಿದುಕೊಂಡ ಮಗುವನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ಕರೆದುಕೊಂಡು ಹೋಗಲು ವೀಲ್ ಚೇರ್ ಸಿಗದ ಕಾರಣ ಮಗುವಿನ ತಂದೆ ಸ್ಕೂಟರ್ ಮೇಲೆಯೆ 3ನೇ ಮಹಡಿಗೆ ತನ್ನ ಮಗುವನ್ನು ಕರೆದುಕೊಂಡು ಹೋಗಿರುವ ಘಟನೆ ರಾಜಸ್ಥಾನದ ಕೋಟಾ ಜಿಲ್ಲೆಯ ಅತಿದೊಡ್ಡ ಎಂಬಿಬಿಎಸ್ ಆಸ್ಪತ್ರೆಯಲ್ಲಿ ನಡೆದಿದ್ದು, ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾಗಳಲ್ಲಿ ಸಖತ್ ವೈರಲ್ ಆಗಿದೆ.
ವಕೀಲ ವೃತ್ತಿಯಲ್ಲಿರುವ ಮನೋಜ್ ಜೈನ್ ಎಂಬುವಾತನು ಕಾಲು ಮುರಿದುಕೊಂಡು ಪ್ಲಾಸ್ಟರ್ ಹಾಕಿಸಿಕೊಂಡಿದ್ದ ಮಗನನ್ನು ಚಿಕಿತ್ಸೆಗೆಂದು ಗುರುವಾರ ಮಧ್ಯಾಹ್ನ 1.30ರ ಸುಮಾರಿಗೆ ಎಂಬಿಬಿಎಸ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು.
ಆಸ್ಪತ್ರೆಯಲ್ಲಿ ವೀಲ್ ಚೇರ್ ನೀಡುವಂತೆ ಕೇಳಿದ್ದಾರೆ. ಆದರೆ ಇದಕ್ಕೆ ಆಸ್ಪತ್ರೆ ಸಿಬ್ಬಂದಿ ಉಡಾಫೆ ಉತ್ತರ ನೀಡಿದ್ದಕ್ಕೆ ಮನೋಜ್ ಜೈನ್ ಕೋಪಗೊಂಡು ತಾವು ತೆಗೆದುಕೊಂಡು ಬಂದಿದ್ದ ಸ್ಕೂಟರ್ ಮೂಲಕವೇ ನೇರವಾಗಿ ಆಸ್ಪತ್ರೆ ಒಳಗೆ ನುಗ್ಗಿ 3ನೇ ಮಹಡಿಗೆ ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ.
Advocate enters the hospital by scooty as the hospital refused to provide a wheelchair in Kota Rajasthan. pic.twitter.com/RmK9AQfOsz
— anuj kumar singh (@sanuj42) June 17, 2023
ಇದನ್ನೂ ಓದಿ-ಹೆತ್ತವರ ಮೂರ್ತಿ ರಚಿಸಿ ಪೂಜಿಸುತ್ತಿರುವ ಮಗ...!
ಚಿಕಿತ್ಸೆಪಡೆದು ಮನೆಗೆ ತೆರಳುತ್ತಿದ್ದ ವೇಳೆ ಮತ್ತೊಬ್ಬ ಆಸ್ಪತ್ರೆ ಸಿಬ್ಬಂದಿ ಅಪ್ಪ ಮಗನನ್ನು ತಡೆದು ಸ್ಕೂಟರ್ ಕೀ ಕಿತ್ತುಕೊಂಡಿದ್ದಾರೆ. ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, "ನಾನು ಯಾವುದೇ ತಪ್ಪು ಮಾಡಿಲ್ಲ, ವೀಲ್ ಚೇರ್ ಇಲ್ಲದಿರುವುದಕ್ಕೆ ಮೂರನೇ ಮಹಡಿಗೆ ಸ್ಕೂಟರ್ನಲ್ಲಿ ತೆರಳಲು ಆಸ್ಪತ್ರೆಯ ಆಡಳಿತ ಮಂಡಳಿಯಿಂದ ಅನುಮತಿ ಪಡೆದಿದ್ದೆ , ನಿಮ್ಮ ಆಸ್ಪತ್ರೆಯ ಅಸಮರ್ಪಕ ಅವ್ಯವಸ್ಥೆಯಿಂದಾಗಿ ಈ ಘಟನೆ ನಡೆದಿದೆ" ಎಂದಿದ್ದಾರೆ.
#राजस्थान
अस्पताल में नहीं स्ट्रेचर, चला दिया स्कूटर!
कोटा में अस्पताल की व्यवस्था टूटी, लिफ्ट में स्कूटी...#Kota #KotaHospital #Rajasthan pic.twitter.com/tbLFW3Cw8C— सक्सेना साहब एलजी (@PrabhashkarSax1) June 17, 2023
ಇನ್ನು ಈ ಕುರಿತು ಪ್ರತಿಕ್ರಿಯಿಸಿದ ದೇವಕಿನಂದ್ ʼಆಸ್ಪತ್ರೆಯಲ್ಲಿ ಒಪಿಡಿ ವಿಭಾಗವನ್ನು ವಿಸ್ತರಿಸಲಾಗಿದೆ. ಪ್ರತಿನಿತ್ಯ ಸುಮಾರು ಮೂರು ಸಾವಿರ ರೋಗಿಗಳು ಇಲ್ಲಿಗೆ ಬರುತ್ತಾರೆ. ಆದರೆ ಸಾಕಷ್ಟು ಸಂಖ್ಯೆಯ ಗಾಲಿಕುರ್ಚಿಗಳು ಇರಲಿಲ್ಲ, ಶೀಘ್ರದಲ್ಲಿಯೇ ವ್ಯವಸ್ಥೆಗೊಳಿಸಲಾಗುವುದುʼ ಎಂದು ಹೇಳಿದ್ದಾರೆ.
ಇದನ್ನೂ ಓದಿ-ಶಕ್ತಿ ಯೋಜನೆಯಿಂದ ಹೆಚ್ಚಾದ ಮಹಿಳಾ ಪ್ರವಾಸ..ರೊಚ್ಚಿಗೆದ್ದ ಪುರುಷರು;ವಿಡಿಯೋ ವೈರಲ್ !
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.