Parrot emotional video : ಭಾವನೆ ಅನ್ನುವುದು ಎಲ್ಲರಿಗೂ ಒಂದೇ.. ಅದು ಪ್ರಾಣಿಯಾಗಲಿ, ಪಕ್ಷಿಯಾಗಲಿ ತನ್ನವರನ್ನು ಕಳೆದು ಕೊಳ್ಳುವ ನೋವು ಎಲ್ಲರಿಗೂ ಒಂದೇ. ಮನುಷ್ಯರಿಗೆ ಮಾತು ಬರುತ್ತದೆ ಹಾಗಾಗಿ ತಮ್ಮ ಮನಸ್ಸಿನ ಭಾವನೆಗಳನ್ನು ಮಾತಿನ ಮೂಲಕ ಹೊರ ಹಾಕುತ್ತಾರೆ. ಆದರೆ, ಈ ಪ್ರಾಣಿ ಪಕ್ಷಿಗಳಿವೆಯಲ್ಲಾ, ಅವುಗಳಿಗೆ  ಮಾತು ಬರುವುದಿಲ್ಲ. ಆದರೂ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಮಾತ್ರ ಅವುಗಳು ಹಿಂದೆ ಬೀಳುವುದಿಲ್ಲ. ಅದಕ್ಕೆ ಸಾಕ್ಷಿ ಈ ವಿಡಿಯೋ.. 


COMMERCIAL BREAK
SCROLL TO CONTINUE READING

ಇಲ್ಲಿ ಒಂದು ಬಾಕ್ಸ್ ನಲ್ಲಿ ಸತ್ತಿರುವ ಗಿಳಿಯನ್ನು ಕಾಣಬಹುದು. ಮತ್ತೊಂದೆಡೆ, ಆ ಮೃತ ಗಿಳಿಯ ಪಕ್ಕ ಕುಳಿತು ರೋಧಿಸುತ್ತಿರುವ ಮತ್ತೊಂದು ಗಿಳಿ. ಪಾಪ ತನ್ನ ಸಂಗಾತಿ ಉಸಿರು ನಿಲ್ಲಿಸಿ ಮಲಗಿರುವುದನ್ನು ನೋಡಿ ತಡೆದುಕೊಳ್ಳುವುದು ಆ ಗಿಳಿಗೆ ಸಾಧ್ಯವಾಗುತ್ತಿಲ್ಲ. ತಾನು ಏನು ಮಾಡಿದರೆ ತನ್ನ ಸಂಗಾತಿ ಮತ್ತೆ ಎದ್ದು ನಿಲ್ಲುವುದೋ ಎನ್ನುವ ಹಾಗೆ ಎಲ್ಲಾ ಪ್ರಯತ್ನಗ ಳನ್ನೂ ಮಾಡುತ್ತಿದೆ. 


ಇದನ್ನೂ ಓದಿ Aunty Murga Dance Video: ದೇಸಿ ಆಂಟಿಯ ಹಾಹಾಕಾರ ಸೃಷ್ಟಿಸುವ ಈ ಹುಂಜದ ನೃತ್ಯ ನೋಡಿದ್ರಾ?


ಇಲ್ಲಿಯವರೆಗೆ ಜೊತೆಗಿದ್ದ ಜೀವ ಇನ್ನಿಲ್ಲ ಎನ್ನುವುದನ್ನು ಜೀರ್ಣಿಸಿಕೊಳ್ಳುವುದು ಈ ಗಿಣಿಗೆ ಸಾಧ್ಯವಾಗುತ್ತಿಲ್ಲ.  ಪಾಪ.! ದೇಹ ಬಿಟ್ಟು ಹೋದ ಆತ್ಮ ವಾಪಾಸಾಗುವುದಿಲ್ಲ ಎನ್ನುವುದು ಆ ಮುಗ್ದ ಜೀವಕ್ಕೂ ಗೊತ್ತಿದೆ. ಆದರೆ, ಮನಸ್ಸು ತಡೆಯಬೇಕಲ್ಲ. ಅದಕ್ಕಾಗಿಯೇ ಎದ್ದೇಳಿಸುವ ಎಲ್ಲಾ ಸರ್ಕಸ್ ಮಾಡುತ್ತಿದೆ. ಮನುಷ್ಯರಂತೆ  ಸಂಗಾತಿಯ ಹಣೆಗೆ ಮುತ್ತಿಕ್ಕುತ್ತಿದೆ. ಒಮ್ಮೆ ಎದ್ದು ನಿಲ್ಲು, ಮತ್ತೆ ಜೊತೆಯಾಗೋಣ ಎಂದು ಕಾಡಿ ಬೇಡುತ್ತಿದೆ. 


 


Viral Video: ಮಗ ಡ್ರೀಮ್‌ ಬೈಕ್‌ ಗಿಫ್ಟ್‌ ಕೊಟ್ಟಾಗ ತಂದೆಯ ಸಂತೋಷ ನೋಡಿ! ಹೃದಯಸ್ಪರ್ಶಿ ವಿಡಿಯೋ


ಈ ಭಾವುಕ ವಿಡಿಯೋವನ್ನು ಐಎಫ್ ಎಸ್ ಅಧಿಕಾರಿ ಸುಶಾಂತ್ ನಂದ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.  ಈ ವಿಡಿಯೋವನ್ನು  ಬಹಳಷ್ಟು ಮಂದಿ ವೀಕ್ಷಿಸಿದ್ದಾರೆ. ಕಾಮೆಂಟ್ ಕೂಡಾ ಮಾಡಿದ್ದಾರೆ. 


Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...