ನಡುರಸ್ತೆಯಲ್ಲಿ ಹಾವುಗಳ ಪ್ರಣಯ : ಮೈ ನವಿರೇಳಿಸುವ ವಿಡಿಯೋ
Snake Viral Video : ಈ ವಿಡಿಯೋದಲ್ಲಿ ಉದ್ದನೆಯ ಎರಡು ಹಾವುಗಳನ್ನು ಕಾಣಬಹುದು. ಈ ಹಾವುಗಳು ಒಂದನ್ನೊಂದು ಸುತ್ತಿಕೊಂಡು ಸರಸವಾಡುತ್ತಿದೆ.
Snake Viral Video : ಹಾವಿಗೆ ನಮ್ಮ ಧರ್ಮ ಮತ್ತು ಸಂಸ್ಕೃತಿಯಲ್ಲಿ ವಿಶೇಷ ಪ್ರಾಧಾನ್ಯತೆ ಇದೆ. ಹಾವಿಗೆ ದೇವರ ಸ್ಥಾನ ಮಾನ ನೀಡಲಾಗಿದೆ. ಇನ್ನು ಕೆಲವು ಭಾಗಗಲ್ಲಿ ಹಾವನ್ನು ಪ್ರತ್ಯಕ್ಷವಾಗಿ ಕಾಣಿಸುವ ದೇವರು ಎಂದೇ ಹೇಳಲಾಗುತ್ತದೆ. ಕರಾವಳಿ ಭಾಗದಲ್ಲಿ ಈ ನಂಬಿಕೆ ಹೆಚ್ಚು. ಇಲ್ಲಿ ನಾಗರ ಕಂಡರೆ ಹೊಡೆಯುವಂತಿಲ್ಲ, ಮಾತ್ರವಲ್ಲ ಚು ಚು ಎಂದು ಓಡಿಸುವಂತೆಯೂ ಇಲ್ಲ. ಈ ಭಾಗದಲ್ಲಿ ನಾಗರಹಾವು ಕಾಣಿಸಿತು ಎಂದಾದರೆ ಮನೆಯ ಹಿರಿಯರು ಮನುಷ್ಯರಲ್ಲಿ ಮಾತನಾಡುವಂತೆ ಅವುಗಳ ಜೊತೆ ಮಾತಿಗೆ ಇಳಿಯುತ್ತಾರೆ. ಹೀಗೆ ಕಾಣಿಸಿಕೊಂಡರೆ ಮನೆ ಮಂದಿ ಭಯ ಪಡುತ್ತಾರೆ ಹಾಗಾಗಿ ಮರೆಯಾಗಿ ಬಿಡುವಂತೆ ಪ್ರಾರ್ಥಿಸುತ್ತಾರೆ. ಹೀಗೆ ಪ್ರಾರ್ಥಿಸಿದ ಕೂಡಲೇ ಹಾವು ಅಲ್ಲಿಂದ ಮರೆಯದ ಪ್ರಸಂಗ ಕೂಡಾ ನಡೆಯುತ್ತವೆ.
ಇನ್ನು ಇಷ್ಟಾದ ಮೇಲೆ ಕೂಡಾ ಹಾವು ಅಲ್ಲಿಯೇ ಸುತ್ತಾಡಿಕೊಂಡಿದ್ದರೆ ನಾಗ ಬ್ರಹ್ಮನ ಆಣೆ ಹಾಕುವ ಪದ್ದತಿಯೂ ಇದೆ. ಒಮ್ಮೆ ನಾಗ ಬ್ರಹ್ಮನ ಆಣೆ ಹಾಕಿದರೆ ಮತ್ತೆ ಆ ಹಾವು ತಪ್ಪಿಯೂ ಕಣ್ಣಿಗೆ ಬೀಳುವುದಿಲ್ಲ ಎನ್ನುವುದು ನಂಬಿಕೆ. ಅಲ್ಲದೆ ಈ ಭಾಗದ ಪ್ರತಿ ಮನೆಯಲ್ಲಿಯೂ ಶಿಬರೂರು ಕ್ಷೇತ್ರದ ತೀರ್ಥ ಇಟ್ಟುಕೊಳ್ಳುವುದು ವಾಡಿಕೆ. ಒಂದೊಮ್ಮೆ ಹಾವು ಕಾಣಿಸಿಕೊಂಡರೆ ಈ ತೀರ್ಥ ಪ್ರೋಕ್ಷಣೆ ಮಾಡಿದರೆ ಮತ್ತೆ ಹಾವು ಆ ಜಾಗದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎನ್ನುವ ದೃಢ ನಂಬಿಕೆ ಇಲ್ಲಿಯದ್ದು.
ಇದನ್ನೂ ಓದಿ : ʼಮುತ್ತೆ ಮತ್ತಿಗೆ ಕಾರಣʼ ಆದ್ರೆ ಇಲ್ಲಿ ಸಾವಿಗೆ ಸಮೀಪಿಸಿದೆ; ವಿಡಿಯೋ ನೀವೇ ನೋಡಿ..!
ಅಲ್ಲದೆ ಈ ಭಾಗದಲ್ಲಿ ನಾಗರಹಾವು ಸುಮ್ಮನೆ ಕಣ್ಣಿಗೆ ಬೀಳುವುದಿಲ್ಲ. ಒಂದು ವೇಳೆ ಕಣ್ಣಿಗೆ ನಾಗರ ಕಂಡರೆ ಏನೋ ಕಾರಣವಿದೆ ಎಂದೇ ಅರ್ಥ. ಇನ್ನು ಜೋಡಿ ನಾಗರ ಕಂಡರೆ ಅಥವಾ ನಾಗರಹಾವುಗಳ ಪ್ರಣಯವನ್ನು ತಪ್ಪಿಯೂ ನೋಡುವಂತಿಲ್ಲ ದೋಷ ಅಂಟಿಕೊಳ್ಳುತ್ತದೆ ಎನ್ನುವ ಭಾವ. ಆದರೆ ಇತ್ತೀಚಿನ ದಿನಗಳಲ್ಲಿ ಇಂಥಹ ಅನೇಕ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ.
ಇಲ್ಲಿ ಕೂಡಾ ನಾವು ಹೇಳುತ್ತಿರುವುದು ಅಂಥದ್ದೇ ವೈರಲ್ ವಿಡಿಯೋ ಬಗ್ಗೆ. ಈ ವಿಡಿಯೋದಲ್ಲಿ ಉದ್ದನೆಯ ಎರಡು ಹಾವುಗಳನ್ನು ಕಾಣಬಹುದು. ಈ ಹಾವುಗಳು ಒಂದನ್ನೊಂದು ಸುತ್ತಿಕೊಂಡು ಸರಸವಾಡುತ್ತಿದೆ. ಈ ದೃಶ್ಯವನ್ನು ಅಲ್ಲೇ ಇದ್ದವರು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಮಾತ್ರವಲ್ಲ ಈ ವಿಡಿಯೋವನ್ನುಸಾಮಾಜಿಕ ಮಾಧ್ಯಮದಲ್ಲಿ ಹರಿ ಬಿಟ್ಟಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಸಮುದ್ರದ ದಡದ ಪಕ್ಕ ಕುಳಿತು ಪತಿ ಜೊತೆ ಫೋಟೋ ತೆಗೆದುಕೊಳ್ಳುತ್ತಿದ್ದ ಮಹಿಳೆ ಸಾವು
ಇದೀಗ ಈ ವೀಡಿಯೋವನ್ನು ಸಾವಿರಾರು ಮಂದಿ ವೀಕ್ಷಿಸಿದ್ದು, ಹಲವಾರು ಮಂದಿ ವಿಡಿಯೋವನ್ನು ಲೈಕ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಈ ವಿಡಿಯೋಗೆ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
( ಸೂಚನೆ : ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊ ಮತ್ತು ನೀಡಿರುವ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಿಂದ ತೆಗೆದುಕೊಳ್ಳಲಾಗಿದೆ. Zee ಕನ್ನಡ ನ್ಯೂಸ್ ಇವುಗಳನ್ನು ಯಾವುದೇ ರೀತಿಯಲ್ಲಿ ಅನುಮೋದಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ