Video : ಬಳಲಿ ಬಾಯಾರಿ ಬಂದ ವಿಷ ಸರ್ಪಕ್ಕೆ ನೀರುಣಿಸಲು ವ್ಯಕ್ತಿ ಹರ ಸಾಹಸ
Snake Viral Video : ಹಾವಿನ ವಿಡಿಯೋಗಳು ಭಾರೀ ಸದ್ದು ಮಾಡುತ್ತದೆ. ಹಾವಿನ ವಿಡಿಯೋ ಇಲ್ಲಿ ಶೇರ್ ಆಗುತ್ತಿದ್ದಂತೆಯೇ ವೈರಲ್ ಆಗಿ ಬಿಡುತ್ತವೆ.
Snake Viral Video : ಇಂದಿನ ಒತ್ತಡದ ಜಗತ್ತಿನಲ್ಲಿ, ಜನರು ಇಂಟರ್ನೆಟ್ ದಾಸರಾಗುತ್ತಿದ್ದಾರೆ. ಇಂಟರ್ನೆಟ್ ಮೂಲಕ ನಾನಾ ರೀತಿಯ ವಿಷಯಗಳನ್ನು ಕಲಿಯುವುದು ಸಾಧ್ಯವಾಗುತ್ತದೆ. ಇಲ್ಲಿ ಹಂಚಿಕೊಳ್ಳಲಾದ ಸುದ್ದಿಗಳು, ಫೋಟೋಗಳು ಮತ್ತು ವೀಡಿಯೊಗಳು ನಮ್ಮ ಸುತ್ತಮುತ್ತಲಿ ಜಗತ್ತಿನ, ಜೀವಿಗಳ ಬಗ್ಗೆ ನಾನಾ ರೀತಿಯ ಮಾಹಿತಿಗಳನ್ನು ಒದಗಿಸುತ್ತವೆ. ಇದು ಮೋಜಿನ ಸಂಗತಿಗಳ ಜೊತೆಗೆ ಸಾಕಷ್ಟು ಉಪಯುಕ್ತ ಮಾಹಿತಿಯನ್ನು ಕೂಡಾ ಒದಗಿಸುತ್ತದೆ. ಇಲ್ಲಿ ಪ್ರಾಣಿಗಳ ವಿಡಿಯೋಗಳನ್ನು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಶೇರ್ ಮಾಡಲಾಗುತ್ತದೆ. ಅದರಲ್ಲೂ ಹಾವಿನ ವಿಡಿಯೋಗಳು ಭಾರೀ ಸದ್ದು ಮಾಡುತ್ತದೆ. ಹಾವಿನ ವಿಡಿಯೋ ಇಲ್ಲಿ ಶೇರ್ ಆಗುತ್ತಿದ್ದಂತೆಯೇ ವೈರಲ್ ಆಗಿ ಬಿಡುತ್ತವೆ.
ಇತ್ತೀಚೆಗೆ ಹಾವಿನ ವಿಡಿಯೋವೊಂದು ಶೇರ್ ಆಗಿದ್ದು, ವೈರಲ್ ಆಗಿದೆ. ಹಾವಿನಂತಹ ಅಪಾಯಕಾರಿ ಜೀವಿಗಳಿಗೆ ನೀರು ಕೊಡುವುದು ಅಷ್ಟು ಸುಲಭವಲ್ಲ. ಅಂಥಹ ಧೈರ್ಯವನ್ನು ಯಾರೂ ಮಾಡುವುದೂ ಇಲ್ಲ. ಪ್ರಾಣಿಗಳ ಬಗ್ಗೆ ದಯೆ, ಮಮಕಾರ ಇದ್ದರೂ ವಿಷ ಜಂತುಗಳಿಗೆ ಆಹಾರನೀರು ನೀಡುವ ಮುನ್ನ ಸಾವಿರ ಬಾರಿ ಯೋಚಿಸುತ್ತಾರೆ. ಆದರೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವೀಡಿಯೋ ನೋಡಿದರೆ ಆಶ್ಚರ್ಯವಾಗುತ್ತದೆ. ಇಲ್ಲಿ ನಾಗರ ಹಾವಿಗೆ ವ್ಯಕ್ತಿಯೊಬ್ಬರು ನೀರು ಕುಡಿಸುತ್ತಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ : Viral Video: ಸಿಳ್ಳೆ ಹೊಡೆದು ಸಿಟ್ಟು ಹೊರ ಹಾಕುವನು ಈ ಉಗ್ರ ನಾಗರ.!
ನಾಗರಹಾವಿನ ವಿಷವು ವೇಗವಾಗಿ ದೇಹದ ಇತರ ಭಾಗಗಳಿಗೆ ಹರಡಿ ಬಿಡುತ್ತದೆ. ನಾಗರಹಾವು ಕಚ್ಚಿದರೆ, ಅರ್ಧ ಗಂಟೆಯೊಳಗೆ ವ್ಯಕ್ತಿ ಸಾಯುತ್ತಾನೆ ಎನ್ನಲಾಗುತ್ತದೆ. ಏಕೆಂದರೆ ಅದರ ವಿಷವು ದೇಹದ ಭಾಗಗಳಿಗೆ ಅತಿ ವೇಗವಾಗಿ ಹರಡುತ್ತದೆ. ಇದಲ್ಲದೆ, ಇದು ಅತ್ಯಂತ ವಿಷಕಾರಿ ಹಾವುಗಳಲ್ಲಿ ಒಂದಾಗಿದೆ. ಈ ಹಾವಿಗೆ ನೀರು ಕುಡಿಸುವ ಮೂಲಕ ವ್ಯಕ್ತಿ ಎಂಥ ಅಪಾಯದ ಜೊತೆಗೆ ಸರಸವಾಡುತ್ತಿದ್ದಾನೆ ಎನ್ನುವುದು ಕೂಡಾ ತಿಳಿಯುತ್ತದೆ.
ವಿಷಕಾರಿ ಹಾವಿಗೆ ವ್ಯಕ್ತಿಯೊಬ್ಬ ನೀರು ಕೊಡುತ್ತಿರುವ ವಿಡಿಯೋ ಇಲ್ಲಿದೆ.
ಇದನ್ನೂ ಓದಿ : ಮುಟ್ಟಿದೊಡನೆ ಬಿದ್ದು ಬಿದ್ದು ನಗುವ ಹಾವು ನೋಡಿದ್ದಿರಾ ? ಇಲ್ಲಿದೆ ನೋಡಿ ವಿಡಿಯೋ
ಹಾವಿಗೆ ನೀರು ಕೊಡುತ್ತಿರುವ ವ್ಯಕ್ತಿಯನ್ನು ವಿಡಿಯೋದಲ್ಲಿ ನೋಡಬಹುದು. ಹಾವು ನೀರು ಕುಡಿಯುವ ಪರಿಯನ್ನು ಗಮನಿಸಿದರೆ ಅದು ಎಷ್ಟು ಬಾಯಾರಿದೆ ಎನ್ನುವುದು ಗಮನಕ್ಕೆ ಬರುತ್ತದೆ.
( ಸೂಚನೆ : ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊ ಮತ್ತು ನೀಡಿರುವ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಿಂದ ತೆಗೆದುಕೊಳ್ಳಲಾಗಿದೆ. Zee ಕನ್ನಡ ನ್ಯೂಸ್ ಇವುಗಳನ್ನು ಯಾವುದೇ ರೀತಿಯಲ್ಲಿ ಅನುಮೋದಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.