ಪುಟ್ಟ ಪೋರಿಗೆ ಥ್ಯಾಂಕ್ಸ್ ಹೇಳಿದ ಜಿಂಕೆ ! ಮನದ ಭಾವ ಹೊರಸೂಸುವ ಹರಿಣದ ವಿಡಿಯೋ ಇಲ್ಲಿದೆ

Viral Video : ಇತ್ತೀಚೆಗಷ್ಟೇ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ಬಹಳ  ತುಂಬಾ ಮುದ್ದಾಗಿದೆ. ಈ ವಿಡಿಯೋ ನೆಟ್ಟಿಗರ ಮನ ಸೆಳೆಯುತ್ತಿದೆ. 

Written by - Ranjitha R K | Last Updated : May 26, 2023, 11:35 AM IST
  • ಇಂಟರ್‌ನೆಟ್ ಅನ್ನುವುದು ವಿಸ್ಮಯಗಳ ಆಗರ.
  • ವಿಡಿಯೋಗಳು ಜೀವನದ ಅನೇಕ ಪಾಠಗಳನ್ನು ಕಲಿಸಿಕೊಡುತ್ತವೆ.
  • ಜಿಂಕೆ ಮತ್ತು ಮಗುವಿನ ವಿಡಿಯೋ ವೈರಲ್
ಪುಟ್ಟ ಪೋರಿಗೆ ಥ್ಯಾಂಕ್ಸ್ ಹೇಳಿದ ಜಿಂಕೆ ! ಮನದ ಭಾವ ಹೊರಸೂಸುವ ಹರಿಣದ ವಿಡಿಯೋ ಇಲ್ಲಿದೆ

Viral Video : ಇಂಟರ್‌ನೆಟ್ ಅನ್ನುವುದು ವಿಸ್ಮಯಗಳ ಆಗರ. ಇಲ್ಲಿ ದಿನಕ್ಕೆ ಸಾವಿರಾರು, ಲಕ್ಷಾಂತರ ವಿಡಿಯೋಗಳನ್ನು ಅಪ್ಲೋಡ್ ಮಾಡಲಾಗುತ್ತದೆ. ಈ ವಿಡಿಯೋಗಳು ನಮಗೂ ಜೀವನದ ಅನೇಕ ಪಾಠಗಳನ್ನು ಕಲಿಸಿಕೊಡುತ್ತವೆ. ಇಲ್ಲಿ ಹಂಚಿಕೊಳ್ಳಲಾದ ಸಂದೇಶಗಳು, ಫೋಟೋಗಳು ಮತ್ತು ವೀಡಿಯೊಗಳು  ಅನೇಕ ರೀತಿಯ ಸಂದೇಶಗಳನ್ನು ರವಾನಿಸುತ್ತವೆ. ಇಲ್ಲಿ ಮಕ್ಕಳ ವಿಡಿಯೋಗಳನ್ನು ಪೋಸ್ಟ್ ಮಾಡಿದ ಕೂಡಲೇ ಅವುಗಳು ವೈರಲ್ ಆಗಿ ಬಿಡುತ್ತವೆ. ಯಾಕೆಂದರೆ ಮುದ್ದು ಮತ್ತು ಮುಗ್ದ ಮನಸ್ಸಿನ ಮಕ್ಕಳಿಗೆ ಪ್ರತ್ಯೇಕ ಅಭಿಮಾನಿ ಬಳಗವೇ ಇದೆ. 

ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆಗುವ ಹಲವು ವಿಡಿಯೋಗಳು ಕೆಲವೊಮ್ಮೆ ನಮ್ಮನ್ನು ನಗಿಸುತ್ತವೇ. ಇನ್ನು ಕೆಲವೊಮ್ಮೆ ಯೋಚನೆಗೆ  ದೂಡುತ್ತವೆ.  ಹಲವು ಬಾರಿ ಬೆಕ್ಕಸ ಬೆರಗಾಗಿಸುತ್ತವೆ. ಇತ್ತೀಚೆಗಷ್ಟೇ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ಬಹಳ   ಮುದ್ದಾಗಿದೆ. ಈ ವಿಡಿಯೋ ನೆಟ್ಟಿಗರ ಮನ ಸೆಳೆಯುತ್ತಿದೆ. 

ಇದನ್ನೂ ಓದಿ : Viral Video: ಪಾರ್ಕಿಂಗ್ ಏರಿಯಾದಲ್ಲಿ ಮಲಗಿಸಿದ್ದ 3 ವರ್ಷದ ಮಗು ಮೇಲೆ ಹರಿದ ಕಾರು!

ಜಿಂಕೆಗೆ ಆಹಾರ ನೀಡುವ ಪುಟ್ಟ ಹುಡುಗಿ :
ಜಿಂಕೆಗೆ ಆಹಾರ ನೀಡುವ ಪುಟ್ಟ ಹುಡುಗಿಯ ಮುದ್ದಾದ ವೀಡಿಯೊ ಇದು. ಕೆಲವು ಮಕ್ಕಳು ಪ್ರಾಣಿಗಳನ್ನು ಕಂಡ ತಕ್ಷಣ ಹೆದರಿ ಕಾಲಿಗೆ ಬುದ್ದಿ ಹೇಳಿ ಬಿಡುತ್ತಾರೆ. ಇನ್ನು ಕೆಲವರು ಜೋರಾಗಿ ಅಳಲು ಶುರು ಮಾಡುತ್ತಾರೆ. ಇನ್ನು ಕೆಲವು ಮಕ್ಕಳು ಮೂಕ ಪ್ರಾಣಿಯ ಭಾವನೆಯನ್ನು ಅರ್ಥೈಸಿಕೊಂಡು ಬಿಡುತ್ತಾರೆ. ಅವುಗಳೊಂದಿಗೆ ಆಟವಾಡುತ್ತಾ ಸ್ನೇಹ ಬೆಳೆಸಿಕೊಂಡು ಬಿಡುತ್ತಾರೆ. ಅಂದಹಾಗೆ, ಮುದ್ದಾದ ಪುಟಾಣಿಯೊಂದು ಜಿಂಕೆಗೆ ಆಹಾರ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕೇವಲ 7-ಸೆಕೆಂಡ್‌ಗಳ ವೀಡಿಯೊ : 
ಜಪಾನ್‌ನಲ್ಲಿ  ತೆಗೆಯಲಾದ ಈ ಕೇವಲ 7-ಸೆಕೆಂಡ್‌ಗಳ ವೀಡಿಯೊ ಕ್ಲಿಪ್‌ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇಲ್ಲಿ ಗುಲಾಬಿ ಬಣ್ಣದ ಡ್ರೆಸ್‌ನಲ್ಲಿ ಮುದ್ದಾದ ಪುಟ್ಟ ಹುಡುಗಿಯನ್ನು ಕಾಣಬಹುದು. ಜಿಂಕೆಯನ್ನು ನೋಡಿದ ತಕ್ಷಣ ಆ ಮಗು ಅದರತ್ತ ಹೆಜ್ಜೆ ಹಾಕುತ್ತದೆ. ಆ ಹುಡುಗಿ ಕೈಯಲ್ಲಿ ಏನನ್ನೋ ಹಿಡಿದುಕೊಂಡಿರುತ್ತಾಳೆ. ಜಿಂಕೆಯ ಬಳಿ ಹೋಗುತ್ತಿದ್ದಂತೆಯೇ  ಆ ಮಗು ತನ್ನ ಕೈಯ್ಯನ್ನು ಚಾಚುತ್ತಾಳೆ. ಜಿಂಕೆ ಕೂಡಾ ಮಗು ನೀಡಿದ ಆಹಾರವನ್ನು ಸೇವಿಸಿ ಬಿಡುತ್ತದೆ. ಇಷ್ಟೇ ಆದರೆ ಸಾಮಾನ್ಯ ಎನ್ನಬಹುದಿತ್ತು. ಆದರೆ ಆ ಮಗು ತಾನು ನೀಡಿದ ಆಹಾರ ಸೇವಿಸಿದ್ದಕ್ಕೆ ಜಿಂಕೆಗೆ ತಲೆ ಬಾಗಿ ಧನ್ಯವಾದ ಹೇಳುತ್ತಾಳೆ. ಆ ಮಗುವನ್ನೇ ಅನುಕರಿಸುವ ಜಿಂಕೆ ತನಗೆ ಆಹಾರ ನೀಡಿದ್ದಕ್ಕಾಗಿ ಥ್ಯಾಂಕ್ಸ್ ಎನ್ನುವಂತೆ ತಲೆ ಬಾಗಿಸುತ್ತದೆ.  

 

ಇದನ್ನೂ ಓದಿ : Viral Video: ಪ್ರಿಯಕರಿನಿಗಾಗಿ ನಡುಬೀದಿಯಲ್ಲೇ ಮಾರಾಮಾರಿ, ಒಬ್ಬನಿಗೆ ಇಷ್ಟೊಂದು ಹುಡ್ಗೀರಾ?

ಹುಡುಗಿಯ ಮುದ್ದಾದ ವೈರಲ್ ವಿಡಿಯೋ: 
ಮೇ 23 ರಂದು ಪೋಸ್ಟ್ ಮಾಡಲಾದ ವೀಡಿಯೊ 5 ಲಕ್ಷಕ್ಕೂ ಹೆಚ್ಚು ಮಣಿದ ವೀಕ್ಷಿಸಿದ್ದಾರೆ. 23 ಸಾವಿರ ಮಂದಿ ಲೈಕ್ ಮಾಡಿದ್ದಾರೆ.  ಈ ಮುದ್ದಾದ ವೈರಲ್ ವೀಡಿಯೊವನ್ನು @TheFigen Twitter ಪುಟದಲ್ಲಿ ಹಂಚಿಕೊಳ್ಳಲಾಗಿದೆ. ಅಲ್ಲದೆ, ಈ ವೀಡಿಯೊಗೆ ಸಾಕಷ್ಟು ಕಾಮೆಂಟ್‌ಗಳು ಬಂದಿವೆ. 

(ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊ ಮತ್ತು ನೀಡಿರುವ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಿಂದ ತೆಗೆದುಕೊಳ್ಳಲಾಗಿದೆ. ಜೀ ಕನ್ನಡ  ನ್ಯೂಸ್ ಇವುಗಳನ್ನು ಯಾವುದೇ ರೀತಿಯಲ್ಲಿ ಅನುಮೋದಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

 

More Stories

Trending News