Viral video : ಬಡತನ, ಆಸೆ, ಮುಗ್ದತೆ, ವೈರಲ್ ವಿಡಿಯೋದಲ್ಲಿರುವ ಬಾಲಕಿಯ ಕಹಾನಿ ಗೊತ್ತೇ..!
Poor girl watching dance viral video : ಆ ಕಣ್ಣಲ್ಲಿ ನೃತ್ಯವನ್ನು ಬಲು ಹತ್ತಿರದಿಂದ ನೋಡುವ ಮಹದಾಸೆ ಇತ್ತು. ಆದ್ರೆ ಆಕೆಯ ಬಟ್ಟೆ ಅವಳ ಆಸೆಯನ್ನು ಮುಂದಕ್ಕೆ ಹೆಜ್ಜೆ ಇಡದಂತೆ ತಡೆಯುತ್ತಿತ್ತು. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ಬಾಲಕಿಯ ವಿಡಿಯೋ ನೋಡಿ ಅದೇಷ್ಟೋ ಜನರ ಕಣ್ಣಂಚಲ್ಲಿ ತಮಗರಿವಿಲ್ಲದಂತೆ ಕಣ್ಣೀರಿನ ಹನಿಯೊಂದು ಬಂತು ನಿಂತಿತ್ತು. ಇದೀಗ ಆ ಯುವತಿ ಯಾರು, ವೈರಲ್ ಆದ ವಿಡಿಯೋ ಎಲ್ಲಿಯದು. ಅಷ್ಟಕ್ಕೂ ಇದು ನಿಜವಾದ ವಿಡಿಯೋ ನಾ..? ಎಂಬ ನಿಮ್ಮ ಹಲವಾರು ಪ್ರಶ್ನೆಗಳಿಗೆ ಉತ್ತರ ನಾವ್ ಹೇಳ್ತೀವಿ ಕೇಳಿ.
Poor girl viral video : ಆ ಕಣ್ಣಲ್ಲಿ ನೃತ್ಯವನ್ನು ಬಲು ಹತ್ತಿರದಿಂದ ನೋಡುವ ಮಹದಾಸೆ ಇತ್ತು. ಆದ್ರೆ ಆಕೆಯ ಬಟ್ಟೆ ಅವಳ ಆಸೆಯನ್ನು ಮುಂದಕ್ಕೆ ಹೆಜ್ಜೆ ಇಡದಂತೆ ತಡೆಯುತ್ತಿತ್ತು. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ಬಾಲಕಿಯ ವಿಡಿಯೋ ನೋಡಿ ಅದೇಷ್ಟೋ ಜನರ ಕಣ್ಣಂಚಲ್ಲಿ ತಮಗರಿವಿಲ್ಲದಂತೆ ಕಣ್ಣೀರಿನ ಹನಿಯೊಂದು ಬಂತು ನಿಂತಿತ್ತು. ಇದೀಗ ಆ ಯುವತಿ ಯಾರು, ವೈರಲ್ ಆದ ವಿಡಿಯೋ ಎಲ್ಲಿಯದು. ಅಷ್ಟಕ್ಕೂ ಇದು ನಿಜವಾದ ವಿಡಿಯೋ ನಾ..? ಎಂಬ ನಿಮ್ಮ ಹಲವಾರು ಪ್ರಶ್ನೆಗಳಿಗೆ ಉತ್ತರ ನಾವ್ ಹೇಳ್ತೀವಿ ಕೇಳಿ.
ಯಸ್.. ಈ ವಿಡಿಯೋ ಸುಳ್ಳಲ್ಲ. ಅವಳ ಕಣ್ಣಲ್ಲಿದ್ದ ಆನಂದ, ಮುಖದಲ್ಲಿ ಆತಂಕ, ಎಲ್ಲಿ ಯಾರಾದ್ರೂ ನೋಡಿ ಬೈದ್ರೆ ಹೇಗೆ ಎನ್ನುವ ಅನುಮಾನ... ಇದು ಫೇಕ್ ಹೇಗಾಗುತ್ತೆ ಹೇಳಿ. ಇದು ಕೇರಳದ ಗುರುವಾಯೂರ್ ದೇವಸ್ಥಾನದ ಮೆಲ್ಪುತ್ತೂರ್ ಸಭಾಂಗಣದಲ್ಲಿ ಕಂಡು ಬಂದ ದೃಶ್ಯ. ಈ ವಿಡಿಯೋ ನೋಡಿದ ಮೇಲೆ ಅನೇಕ ಜನರು ಬಾಲಕಿಯ ವಿಳಾಸ ಪತ್ತೆಗೆ ಮುಂದಾಗಿದ್ದರು. ಅಲ್ಲದೆ, ಕೆಲವುರ ಫೇಕ್ ವಿಡಿಯೋ ಅಂತ ಅನುಮಾನ ವ್ಯಕ್ತಪಡಿಸಿದ್ದರು. ಅದ್ರೆ ಇದು ನಿಜವಾಗಿ ನಡೆದ ಸಂಗತಿಯ ವಿಡಿಯೋ ತುಣುಕು.
ಪಡಿತರ ಚೀಟಿ ಇದ್ದರೆ ಸರ್ಕಾರದಿಂದ ಸಂಕ್ರಾಂತಿಗೆ ಒಂದು ಸಾವಿರ ರೂಪಾಯಿ ಮತ್ತು ಗಿಫ್ಟ್ ಹ್ಯಾಂಪರ್ !
ಗುರುವಾಯೂರು ದೇವಸ್ಥಾನದಲ್ಲಿ ನೃತ್ಯವನ್ನು ಏರ್ಪಡಿಸಲಾಗಿತ್ತು ಆಗ ಅದನ್ನು ಕಣ್ತುಂಬಿಕೊಳ್ಳುವ ಆಸೆಯಿಂದ ಆ ಯುವತಿ ವೇದಿಕೆ ಹತ್ತಿರ ಬರ್ತಾಳೆ. ಆದ್ರೆ ಆಕೆ ತೊಟ್ಟಿದ್ದ ಬಟ್ಟೆ ಅವಳ ಆಸೆಯನ್ನು ಮುಂದಕ್ಕೆ ಹೆಜ್ಜೆ ಇಡದಂತೆ ತಡೆಯುತ್ತದೆ. ಮನದಲ್ಲಿ ಭಯ ಶುರುವಾಗುತ್ತದೆ. ಆದರೂ ಮನಸ್ಸು ಕೇಳದೆ ಕಂಡಷ್ಟು ಅಲ್ಲಿಯೆ ನಿಂತು ನೃತ್ಯವನ್ನು ನೋಡುತ್ತಾ ನಿಂತಾಗ ಸ್ಥಳೀಯರೊಬ್ಬರು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆ ವಿಡಿಯೋ ಸಖತ್ ವೈರಲ್ ಆಗಿತ್ತು.
ಕೈಚೀಲ ಹಿಡಿದು ನೃತ್ಯ ನೋಡುತ್ತಿದ್ದ ಹುಡುಗಿಯ ಪತ್ತೆಗೆ ವಿವಿಧ ಕೋನಗಳಲ್ಲಿ ತನಿಖೆ ನಡೆಸಲಾಯಿತು. ಕೊನೆಗೂ ಆ ಯುವತಿ ಯಾರೂ ಅನ್ನೋದು ತಿಳಿದಿದೆ. ಅವಳು ರಾಜಸ್ತಾನದ ಮೂಲದ ಸಮಯ್, ಪಿಂಕಿ ದಂಪತಿಯ ಪುತ್ರಿ ಹರ್ತಿ (12). ಗುರುವಾಯೂರಿನಲ್ಲಿ ಹಲವು ಮಂದಿ ಇವಳಿಗಾಗಿ ಹುಡುಕಾಟ ನಡೆಸಿದ್ದರು. ಕೊನೆಗೆ ಆಕೆ ರಾಜಸ್ಥಾನದಲ್ಲಿರುವ ತಮ್ಮ ಮನೆಗೆ ತೆರಳಿದ್ದಾಳೆ ಎಂದು ತಿಳಿದು ಬಂದಿತ್ತು. ಕೆಲ ದಿನಗಳ ನಂತರ ಗುರುವಾಯೂರಿಗೆ ಮರಳುವುದಾಗಿ ಅವರ ಸಂಬಂಧಿಕರು ತಿಳಿಸಿದ್ದಾರೆ.
ಇದನ್ನೂ ಓದಿ: Narendra Modi: ತಮ್ಮ ವೈದ್ಯಕೀಯ ವೆಚ್ಚವನ್ನು ತಾವೇ ಭರಿಸುತ್ತಿರುವ ಪ್ರಧಾನಿ ಮೋದಿ
ಹರ್ತಿ ಮೂಲತಃ ಅಲೆಮಾರಿ ಕುಟುಂಬದವರು. ಜಾತ್ರೆಯಲ್ಲಿ ರಿಬ್ಬನ್, ಹೇರ್ ಪೀನ್, ಹೀಗೆ ಇತ್ಯಾದಿ ವಸ್ತುಗಳನ್ನು ಮಾರುತ್ತಾರೆ. ತಮ್ಮ ಮಗಳ ವಿಡಿಯೋ ವೈರಲ್ ಆಗಿದೆ ಅಂತ ಪೋಷಕರಿಗೆ ತಿಳಿದ ತಕ್ಷಣ ಅವರು ಕೊಂಚ ಗಾಬರಿಯಾಗಿದ್ದಾರೆ. ಅದ್ರೆ ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ. ಅಷ್ಟೇ ಅಲ್ಲ ಆಕೆ ರಾಜಸ್ಥಾನದಿಂದ ಬಂದ ತಕ್ಷಣ ಗುರುವಾಯೂರ್‌ನ ಹಿತೈಷಿಗಳು ಆಕೆಗೆ ಪ್ರೀತಿಯಿಂದ ಉಡುಗೊರೆಗಳನ್ನು ನೀಡಲು ಕಾಯುತ್ತಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.