ಕೆಲವೊಮ್ಮೆ ಇಂತಹ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಕಾಣಸಿಗುತ್ತವೆ. ಇಂತಹ ವಿಚಾರಗಳಿಂದಲೇ ಭಾರತ ಅಭಿವೃದ್ಧಿಯ ಹೆಸರಿನಲ್ಲಿ ಪ್ರತಿ ಹೆಜ್ಜೆಯಲ್ಲೂ ಹತ್ತು ಹೆಜ್ಜೆ ಹಿಂದಕ್ಕೆ ಇಡುತ್ತಿದೆ ಎನಿಸುತ್ತದೆ. ಭಾರತದಲ್ಲಿ ಶಿಕ್ಷಣ ವ್ಯವಸ್ಥೆಯು ಇನ್ನೂ ಪ್ರಗತಿಯಲ್ಲಿದೆ. ಸರ್ಕಾರಿ ಶಾಲೆಗಳ ನಿಖರವಾದ ಚಿತ್ರಣವನ್ನು ನಮಗೆ ನೀಡುವ ಇಂತಹ ಕಥೆಗಳು ಪ್ರತಿದಿನ ಅಂತರ್ಜಾಲದಲ್ಲಿ ಕಂಡುಬರುತ್ತವೆ. ಕೆಲವೊಂದು ಬಾರಿ ಆಂಗ್ಲ ಮಾಧ್ಯಮ ಮತ್ತು ಹೈ-ಫೈ ಶಾಲೆಗಳನ್ನು ನೋಡಿ ನಾವು ಪಶ್ಚಾತ್ತಾಪ ಪಡುತ್ತೇವೆ, ನಮ್ಮ ಶಾಲೆಯೂ ಹೀಗಿರಬೇಕು ಎಂದು ಬಯಸುತ್ತೇವೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಅಪ್ಪು ಫೇವರೇಟ್ ಲ್ಯಾಂಬೋರ್ಗಿನಿ ಕಾರು ದುಬೈಗೆ ಕಳುಹಿಸಿಕೊಟ್ಟ ಪತ್ನಿ ಅಶ್ವಿನಿ! ಕಾರಣವೇನು?


ಇನ್ನು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋವೊಂದು ಜನರಲ್ಲಿ ಅಚ್ಚರಿ ಮೂಡಿಸುತ್ತಿದೆ. ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ನಡೆದ ಘಟನೆಯೊಂದರ ವೀಡಿಯೊ ತುಣುಕು ಇದಾಗಿದ್ದು, ಪ್ರಾಥಮಿಕ ಶಾಲಾ ಮಕ್ಕಳನ್ನು  ಶಾಲೆಯ ಶೌಚಗೃಹವನ್ನು ಸ್ವಚ್ಛಗೊಳಿಸಲು ಒತ್ತಾಯಿಸಲಾಗುತ್ತಿದೆ.


ಜಿಲ್ಲಾ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ಶೌಚಾಲಯಗಳನ್ನು ಸ್ವಚ್ಛಗೊಳಿಸುವ ಚಿತ್ರ ಹೊರಬಿದ್ದಿದ್ದು, ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಪ್ರಾಥಮಿಕ ಶಿಕ್ಷಣಾಧಿಕಾರಿ ತನಿಖೆ ಆರಂಭಿಸಿರುವುದಾಗಿ ಘೋಷಿಸಿದ್ದಾರೆ. ದೃಶ್ಯಗಳಲ್ಲಿ, ಮಕ್ಕಳು ಶೌಚಾಲಯವನ್ನು ಸ್ವಚ್ಛಗೊಳಿಸುತ್ತಿರುವಾಗ ವ್ಯಕ್ತಿಯೊಬ್ಬರು ಅವರನ್ನು ನಿಂದಿಸುತ್ತಿದ್ದಾರೆ. ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಸ್ನಾನಗೃಹವನ್ನು ಮುಚ್ಚುವುದಾಗಿ ವಿದ್ಯಾರ್ಥಿಗೆ ಬೆದರಿಕೆ ಹಾಕಿದ್ದಾನೆ. ಈ ವಿಡಿಯೋ ಬುಧವಾರ ವೈರಲ್ ಆಗಿದೆ ಎಂದು ಮೂಲ ಶಿಕ್ಷಣಾಧಿಕಾರಿ ಮಣಿರಾಮ್ ಸಿಂಗ್ ಹೇಳಿದ್ದಾರೆ. ಸೋಹ್ವಾನ್ ಪ್ರದೇಶದ ಪಿಪ್ರಾ ಕಲಾ ಪ್ರಾಥಮಿಕ ಶಾಲೆಯ ವೀಡಿಯೊ ಇದಾಗಿದೆ.


ವಿಡಿಯೋ ನೋಡಿ: 


Best Kissers: ಈ ನಾಲ್ಕು ರಾಶಿಯವರು ಮುತ್ತು ಕೊಡೋದ್ರಲ್ಲಿ ನಿಸ್ಸೀಮರು


ಇದೇ ಘಟನೆಯ ಮತ್ತೊಂದು ವಿಡಿಯೋ ತುಣುಕಿನಲ್ಲಿ ಪ್ರಾಂಶುಪಾಲರು ‘ಶೌಚಾಲಯ ಮುಚ್ಚುತ್ತೇನೆ, ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಮನೆಗೆ ಹೋಗಿ ಮಲವಿಸರ್ಜನೆ ಮಾಡಬೇಕಾಗುತ್ತದೆಎಂದು ವಿದ್ಯಾರ್ಥಿಗಳಿಗೆ ಹೇಳುವುದನ್ನು ಕೇಳಬಹುದು. ನಂತರ ಕ್ಲಿಪ್‌ನಲ್ಲಿ, ಅಪ್ರಾಪ್ತ ವಿದ್ಯಾರ್ಥಿಯು ಶೌಚಾಲಯವನ್ನು ಸ್ವಚ್ಛಗೊಳಿಸಲು ನೀರು ತುಂಬಿದ ಬಕೆಟ್ ಅನ್ನು ತರುತ್ತಾನೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.