Ayodhya, Rama Mandira : ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮನ ಮಂದಿರದ ವಿನ್ಯಾಸವನ್ನು 33 ವರ್ಷಗಳ ಹಿಂದೆಯೇ ವಿನ್ಯಾಸಮಾಡಲಾಗಿತ್ತು. ವಾಸ್ತುಶಿಲ್ಪಿ ಚಂದ್ರಕಾಂತ್ ಸೋಂಪುರ ಅವರು 1990 ರಲ್ಲಿ ಈ ವಿನ್ಯಾಸವನ್ನು ಸಿದ್ಧಪಡಿಸಿದಲ್ಲದೇ ಅದೇ ವರ್ಷ ಕುಂಭದಲ್ಲಿ ಸಂತರ ಮುಂದೆ ಇದನ್ನು ಪ್ರಸ್ತುತಪಡಿಸಿದರು. ನಂತರ ಸಂತರ ಒಪ್ಪಿಗೆ ಪಡೆದು ಈ ವಿನ್ಯಾಸದ ಕಾರ್ಯವನ್ನು ಅಂತಿಮಗೊಳಿಸಲಾಗಿತ್ತು. ಆದಾಗ್ಯೂ, 2020 ರಲ್ಲಿ ದೇವಾಲಯದ ಕೆಲಸ ಪ್ರಾರಂಭವಾದಾಗ, ಕೆಲವು ಬದಲಾವಣೆಗಳನ್ನು ಮಾಡಲಾಗಿತ್ತು ಎನ್ನಲಾಗುತ್ತಿದೆ.


COMMERCIAL BREAK
SCROLL TO CONTINUE READING

ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣಗೊಳ್ಳುತ್ತಿದ್ದು, ಈಗಾಗಲೇ ಮೊದಲ ಮಹಡಿ ಸಿದ್ಧವಾಗಿದೆ. ಜನವರಿ 22 ರಂದು ರಾಮಲಾಲ ಕೂಡ ಈ ದೇವಾಲಯದ ಗರ್ಭಗುಡಿಯಲ್ಲಿ ಆಸೀನರಾಗುತ್ತಾರೆ. ಹೀಗಿರುವಾಗ ಕಂಬಿ, ಸಿಮೆಂಟ್ ಇಲ್ಲದೆ ನಿರ್ಮಾಣವಾಗುತ್ತಿರುವ ಈ ದೇವಸ್ಥಾನವನ್ನು ಯಾರು ಯಾವಾಗ ವಿನ್ಯಾಸಗೊಳಿಸಿದ್ದಾರೆ ಎಂಬ ಪ್ರಶ್ನೆ ಮೂಡುವುದು ಸಹಜ. ಈಗ ಪ್ರಶ್ನೆ ಎದ್ದಿದ್ದು, ಇದೀಗ ಉತ್ತರವನ್ನು ಕಂಡುಕೊಳ್ಳಲಾಗಿದ್ದು, ಈ ರಾಮನ ದೇವಾಲಯವನ್ನು ಚಂದ್ರಕಾಂತ್ ಸೋಂಪುರ ಅವರು 1990 ರಲ್ಲಿಯೇ ವಿನ್ಯಾಸಗೊಳಿಸಿದ್ದರು ಎಂದು ತಿಳಿದುಬಂದಿದೆ.


ಇದನ್ನೂ ಓದಿ: Photo Gallery: ಈ ಪ್ರತಿಮೆಗಳ ಹಿಂದೆಯೂ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೈಚಳಕವಿದೆ..!


ಚಂದ್ರಕಾಂತ್ ಸೋಂಪುರ ಅವರು ಕುಟುಂಬವು ವಾಸ್ತುಶಿಲ್ಪಿಗಳಾಗಿದ್ದವರು. ಈ ರಾಮಮಂದಿರ ದೇವಾಲಯಗಳನ್ನು ವಿನ್ಯಾಸಗೊಳಿಸಿರುವವರಲ್ಲಿ ಇವರು 15 ನೇ ಪೀಳಿಗೆಯಾಗಿದೆ. ಚಂದ್ರಕಾಂತ್ ಸೋಂಪುರ ಮತ್ತು ಅವರ ಕುಟುಂಬವು ಮೊದಲು ಸೋಮನಾಥ ದೇವಾಲಯ, ಮುಂಬೈನ ಸ್ವಾಮಿನಾರಾಯಣ ದೇವಾಲಯ ಮತ್ತು ಕೋಲ್ಕತ್ತಾದ ಬಿರ್ಲಾ ದೇವಾಲಯವನ್ನು ವಿನ್ಯಾಸಗೊಳಿಸಿದ್ದರು. ಇದೀಗ ಅವರೇ ಸಿದ್ಧಪಡಿಸಿರುವ ಅಯೋಧ್ಯೆಯ ಶ್ರೀರಾಮ ಮಂದಿರದ ವಿನ್ಯಾಸ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಈ ವಿನ್ಯಾಸದ ಪ್ರಕಾರ, ರಾಮನ ಈ ದೇವಾಲಯವು 161 ಅಡಿ ಎತ್ತರ ಮತ್ತು ಸುಮಾರು 28,000 ಚದರ ಮೀಟರ್ ವಿಸ್ತೀರ್ಣದಲ್ಲಿರುತ್ತದೆ.


33 ವರ್ಷಗಳ ಹಿಂದೆ ಮಾಡಿದ ವಿನ್ಯಾಸ


ವಿಶ್ವ ಹಿಂದೂ ಪರಿಷತ್ತಿನ ಮಾಜಿ ಮುಖ್ಯಸ್ಥ ಅಶೋಕ್ ಸಿಂಘಾಲ್ ಅವರ ಇಚ್ಛೆಯ ಮೇರೆಗೆ 33 ವರ್ಷಗಳ ಹಿಂದೆ ರಾಮ ಮಂದಿರದ ವಿನ್ಯಾಸವನ್ನು ಸಿದ್ಧಪಡಿಸಿದ್ದೇನೆ ಎಂದು ಚಂದ್ರಕಾಂತ್ ಸೋಂಪುರ ಹೇಳುತ್ತಾರೆ. ಅವರು 1990 ರಲ್ಲಿ ಕುಂಭಮೇಳದಲ್ಲಿ ಸಂತರಿಗೆ ಈ ವಿನ್ಯಾಸವನ್ನು ಪ್ರಸ್ತುತಪಡಿಸಿ  ಹೆಚ್ಚಿನ ಚರ್ಚೆಯ ನಂತರ ಈ ವಿನ್ಯಾಸವನ್ನು ಅನುಮೋದಿಸಲಾಯಿತು. ಆದಾಗ್ಯೂ, ನಡೆಯುತ್ತಿರುವ ದೇವಾಲಯ-ಮಸೀದಿ ವಿವಾದದ ಕಾರಣ, ಆ ಸಮಯದಲ್ಲಿ ಈ ವಿನ್ಯಾಸದ ಕುರಿತು ಹೆಚ್ಚಿನ ಕೆಲಸ ಮಾಡಲು ಸಾಧ್ಯವಾಗಲಿಲ್ಲ.


ಇದನ್ನೂ ಓದಿ: ಅಯೋಧ್ಯೆಯ ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಸಚಿನ್-ಕೊಹ್ಲಿಗೆ ಆಹ್ವಾನ


ಸಣ್ಣಪುಟ್ಟ ಬದಲಾವಣೆಗಳೊಂದಿಗೆ ಕಾಮಗಾರಿ ನಡೆಯುತ್ತಿದೆ


ಈಗ 2020 ರಲ್ಲಿ ನ್ಯಾಯಾಲಯದ ತೀರ್ಪಿನ ನಂತರ, ಈ ವಿನ್ಯಾಸದಲ್ಲಿ ಸಣ್ಣ ಬದಲಾವಣೆಗಳನ್ನು ಮಾಡುವ ಮೂಲಕ ಪ್ರಸ್ತುತ ದೇವಾಲಯವನ್ನು ನಿರ್ಮಿಸಲಾಗುತ್ತಿದೆ. ಇಲ್ಲಿಯವರೆಗೆ ವಾಸ್ತುಶಿಲ್ಪಿ ಚಂದ್ರಕಾಂತ್ ಸೋಂಪುರ ಅವರು ದೇಶದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ 200 ಕ್ಕೂ ಹೆಚ್ಚು ದೇವಾಲಯಗಳನ್ನು ವಿನ್ಯಾಸಗೊಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇವುಗಳಲ್ಲಿ ಹೆಚ್ಚಿನ ದೇವಾಲಯಗಳನ್ನು ಸಹ ನಿರ್ಮಿಸಲಾಗಿದೆ. ಸೋಮನಾಥ ದೇಗುಲ ನಿರ್ಮಾಣವಾದಾಗ ಚಂದ್ರಕಾಂತ್ ಸೋಂಪುರ ಅವರ ತಾತ ಪ್ರಭಾಶಂಕರ್ ಓಘಡಭಾಯಿ ಅವರು ಅದರ ವಿನ್ಯಾಸವನ್ನು ಸಿದ್ಧಪಡಿಸಿದ್ದರು ಎಂದು ಹೇಳಲಾಗುತ್ತಿದೆ.


ದೇವಾಲಯವು ಸಾವಿರಾರು ವರ್ಷಗಳವರೆಗೆ ಗಟ್ಟಿಯಾಗಿ ನಿಲ್ಲುತ್ತದೆ


ರಾಮಮಂದಿರದ ವಿನ್ಯಾಸವು ವಿಶಿಷ್ಟವಾಗಿದ್ದು, ಅದರಲ್ಲಿ ಎಲ್ಲಿಯೂ ಕಬ್ಬಿಣ ಅಥವಾ ಸಿಮೆಂಟ್ ಬಳಸುತ್ತಿಲ್ಲ ಎಂದು ಸೋಂಪುರ ಹೇಳುತ್ತಾರೆ. ರಾಮ ಮಂದಿರಕ್ಕೆ ಬಂಸಿ ಪಹರಪುರದ ಗುಲಾಬಿ ಕಲ್ಲು ಮತ್ತು ಮರಳುಗಲ್ಲನ್ನು ಬಳಸಲಾಗಿದೆ. ಈ ದೇವಾಲಯವು ಸಾವಿರಾರು ವರ್ಷಗಳವರೆಗೆ ಸುರಕ್ಷಿತವಾಗಿ ಉಳಿಯುತ್ತದೆ ಎಂದು ಅವರು ಹೇಳಿದರು. ಬಂಸಿ ಪಹರಪುರದ ಕಲ್ಲು ಹಿರಿದಾದಷ್ಟೂ ಗಟ್ಟಿಯಾಗುತ್ತದೆ ಎಂದರು. ಆದ್ದರಿಂದ, ದೇವಾಲಯವನ್ನು ಬಲಪಡಿಸಲು ಉಕ್ಕನ್ನು ಬಳಸುವ ಅಗತ್ಯವಿಲ್ಲ ಎಂಬ ಮಾಹಿತಿಯನ್ನು ತಿಳಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.